ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾಸರಿ


ದಾಸರಿ ನಾರಾಯಣ ರಾವ್


ದಾಸರಿ ನಾರಾಯಣ ರಾವ್ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ನಟ, ಗೀತರಚನೆಕಾರ ಮತ್ತು ರಾಜಕಾರಣಿ.  ಅವರು ತಮ್ಮ ವೃತ್ತಿಜೀವನದಲ್ಲಿ 151 ಚಲನಚಿತ್ರಗಳನ್ನು ನಿರ್ದೇಶಿಸಿ ಗಿನ್ನೆಸ್ ವಿಶ್ವ ದಾಖಲೆ ಮೂಡಿಸಿದವರು. 

ದಾಸರಿ ನಾರಾಯಣ ರಾವ್ 1942 ಮೇ 4 ರಂದು ಆಂಧ್ರಪ್ರದೇಶದ ಪಾಲಕೊಲ್ ಎಂಬಲ್ಲಿ ಜನಿಸಿದರು.

ದಾಸರಿ ನಾರಾಯಣ ರಾವ್ ವಿವಿಧ ಪ್ರಕಾರಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು 'ದರ್ಶಕ ರತ್ನ' ಎಂಬ ಹೆಸರಿನಿಂದ ಗೌರವಾನ್ವಿತರಾಗಿದ್ದರು. ಅವರ ಕೃತಿಗಳು ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ ಮತ್ತು ಲಿಂಗ ತಾರತಮ್ಯವನ್ನು ಒತ್ತಿಹೇಳುತ್ತವೆ.

ರಾವ್ ಅವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ರಘುಪತಿ ವೆಂಕಯ್ಯ ಪ್ರಶಸ್ತಿ ಸೇರಿದಂತೆ ಒಂಬತ್ತು ರಾಜ್ಯ ನಂದಿ ಪ್ರಶಸ್ತಿಗಳು ಮತ್ತು ಜೀವಮಾನದ ಸಾಧನೆ ಸೇರಿದಂತೆ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದರು. ಅವರ ವೃತ್ತಿಜೀವನದಲ್ಲಿ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿಯೂ ನಿರ್ದೇಶಿಸಿ ನಟಿಸಿದ್ದರು. ಕನ್ನಡದಲ್ಲಿ ಸ್ವಪ್ನ, ಮಗ ಮೊಮ್ಮಗ, ಪೋಲೀಸ್ ಪಾಪಣ್ಣ ಮುಂತಾದವುಗಳಲ್ಲಿ ಅವರ ನಿರ್ದೇಶನ/ಭಾಗವಹಿಕೆ ಇತ್ತು

ಸ್ವರ್ಗ ನರಕ್, ಜ್ಯೋತಿ ಬನೇ ಜ್ವಾಲಾ, ಜಖ್ಮಿ ಶೇರ್, ಯಾದ್‌ಗಾರ್, ಸರ್ಫರೋಶ್, ವಫಾದಾರ, ಪ್ರೇಮ್ ತಪಸ್ಯ, ಪ್ಯಾಸಾ ಸಾವನ್, ಆಜ್ ಕಾ ಎಂಎಲ್‌ಎ,  ರಾಮ್ ಅವತಾರ್, ಆಶಾ ಜ್ಯೋತಿ ಮುಂತಾದ ಹಿಂದಿ ಚಲನಚಿತ್ರಗಳನ್ನು ನಿರ್ದೇಶಿಸಿ ರಾವ್ ರಾಷ್ಟ್ರೀಯ ಮನ್ನಣೆ ಗಳಿಸಿದ್ದರು.

ರಾವ್ ಅವರು ಪನೋರಮಾ ವಿಭಾಗದಲ್ಲಿ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ ತಂಡ್ರ ಪಾಪರಾಯುಡು (1986) ಮತ್ತು ಸೂರಿಗಾಡು (1992) ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ವಿಶೇಷ ಉಲ್ಲೇಖ ಪಡೆದ ಕಾಂತೆ ಕೂತುರ್ನೆ ಕಾನು (1998) ಅಂತಹ ಚಿತ್ರಗಳನ್ನು ನಿರ್ದೇಶಿಸಿದ್ದರು. 1983ರಲ್ಲಿ, ಅವರು ಭಾರತೀಯ ಪನೋರಮಾ, ತಾಷ್ಕೆಂಟ್ ಚಲನಚಿತ್ರೋತ್ಸವ ಮತ್ತು ಮಾಸ್ಕೋ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ 'ಮೇಘಸಂದೇಶಂ' ಅನ್ನು ನಿರ್ದೇಶಿಸಿದರು. ಈ ಚಿತ್ರವು ತೆಲುಗಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿತ್ತು.

ರಾಮೋಜಿ ರಾವ್ ಅವರ 'ಈನಾಡು' ಪತ್ರಿಕೆಗೆ ಪೈಪೋಟಿಯಾಗಿ 'ಉದಯಂ' ಎಂಬ ಜನಪ್ರಿಯ ದಿನಪತ್ರಿಕೆಯನ್ನು ರಾವ್ ಪ್ರಾರಂಭಿಸಿದರು. 2006ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.

ದಾಸರಿ ನಾರಾಯಣ ರಾವ್ ಅವರು 2017ರ ಮೇ 30ರಂದು ನಿಧನರಾದರು.

On the birth anniversary of popular director Dasani Narayana Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ