ಗುನ್ನಾರ್ ಗುನ್ನಾರ್ಸ್ಸನ್
ಗುನ್ನಾರ್ ಗುನ್ನಾರ್ಸ್ಸನ್
ಗುನ್ನಾರ್ ಗುನ್ನಾರ್ಸ್ಸನ್ ಐಸ್ಲೆಂಡಿನ ಪ್ರಸಿದ್ಧ ಕಾದಂಬರಿಕಾರ. ತನ್ನ ಸಮಕಾಲೀನ ಐಸ್ಲೆಂಡಿನ ಸಾಹಿತ್ಯ ಪ್ರಪಂಚದಲ್ಲಿ ಹಾಲ್ಡೊರ್ ಲ್ಯಾಕ್ಸ್‌ನೆಸ್ನಂತೆ ಹೆಸರಾದವ.
ಗುನ್ನಾರ್ಸ್ಸನ್ 1889ರ ಮೇ 18ರಂದು ಜನಿಸಿದ. ಎಳೆಯ ವಯಸ್ಸಿನಲ್ಲಿಯೆ ತಾಯಿಯನ್ನು ಕಳೆದುಕೊಂಡ. ಈತ 18 ವರ್ಷದವರೆಗೆ ಕುಟುಂಬಕ್ಕೆ ಸೇರಿದ ಜಮೀನಲ್ಲಿ ಕೆಲಸ ಮಾಡುತ್ತಾ ಹಳ್ಳಿಯ ಶಾಲೆಯಲ್ಲಿ ಅಭ್ಯಯಿಸುತ್ತಿದ್ದ. ಈತನ ಕುಟುಂಬ ಬಡತನದಲ್ಲಿ ಇದ್ದುದರಿಂದ ಸಂಪ್ರದಾಯಿಕ ಶಾಲೆಯಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಈತ 17ನೆಯ ವರ್ಷದಲ್ಲಿಯೇ ಪದ್ಯಗಳನ್ನು ಮತ್ತು ಸಣ್ಣ ಕಥೆಗಳನ್ನು ಪ್ರಾರಂಭಿಸಿದ. 1907ರಲ್ಲಿ ವಿದ್ಯಾರ್ಥಿಯಾಗಿ ಡೆನ್ಮಾರ್ಕಗೆ ಹೊರಟ. ವಿದ್ಯಾಭ್ಯಾಸ ಮಾಡುವಾಗ ಅಲ್ಲಿ 1912ರಲ್ಲಿ ಫ್ರಾನ್ಸ್‌ನ ಅಂತೋನಿಯಳನ್ನು ವಿವಾಹವಾದ. ಇತನ ಪತ್ನಿ ರೋಮನ್ ಕೆಥೊಲಿಕ್ ಪಂಗಡಕ್ಕೆ ಸೇರಿದವಳು. ಈತ ಪ್ರಾಟಿಸ್ಟೆಂಟ್ ಪಂಗಡದವನು. ಈತ 1938ರವರೆಗೆ ಅಲ್ಲಿಯೇ ಇದ್ದು ಐಸ್ಲೆಂಡಿಗೆ ಬಂದ.
ಗುನ್ನಾರ್ಸ್ಸನ್ 1939ರಲ್ಲಿ ಪೂರ್ವ ಐಸ್ಲೆಂಡಿನಲ್ಲಿರುವ ಜಮೀನಿನಲ್ಲಿ ನೆಲಸಿ ಜರ್ಮನಿಯ ವಾಸ್ತುಶಿಲ್ಪಿಯ ವಿನ್ಯಾಸದಂತೆ ಮನೆಯನ್ನು ನಿರ್ಮಿಸಿದನು. ಅಲ್ಲಿ ವಾಸಿಸುತ್ತಿದ್ದನ್ನು ಅನಂತರ ಆ ಮನೆಯನ್ನು ಐಸ್ಲೆಂಡ್ ದೇಶಕ್ಕೆ ಕೊಡುಗೆಯಾಗಿ ನೀಡಿದನು. ಇದನ್ನು ಕಾದಂಬರಿಕಾರನ ನೆನಪಿನಲ್ಲಿ ಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಲಾಗಿದೆ. 1948ರಲ್ಲಿ ತನ್ನ ವಾಸಸ್ಥಳವನ್ನು ರಿಕಯವಿಕ್ಗೆ ಬದಲಾಯಿಸಿ ಅಲ್ಲೆಯೆ 1975ರವರೆಗೆ ವಾಸ ಮಾಡಿದ.
ಗುನ್ನಾರ್ಸ್ಸನ್ ಡೇನಿಷ್ ಭಾಷೆಯಲ್ಲಿ ಮೊದಲು ಕಾದಂಬರಿಗಳನ್ನು ಬರೆದ. ಅವು ಅನಂತರ ಐಸ್ಲ್ಯಾಂಡಿಕ್ ಭಾಷೆಗೆ ಅನುವಾದಗೊಂಡಿವೆ. ಐಸ್ಲ್ಯಾಂಡಿಕ್ ಭಾಷೆಯಲ್ಲೂ ಕ್ವಚಿತ್ತಾಗಿ ಈತ ಬರೆದುದುಂಟು.
ಗುನ್ನಾರ್ಸ್ಸನ್ನನಿಗೆ ತನ್ನ ಶೈಶವ ಮತ್ತು ಯೌವನದ ನೆನಪುಗಳೇ ಕಾದಂಬರಿಯ ವಸ್ತು. ಸಾಮಾನ್ಯರ ಜೀವನ ಮತ್ತು ಜೀವನ ಸಾರ್ಥಕತೆಗಳನ್ನೂ ಈತನ ಕಾದಂಬರಿಗಳಲ್ಲಿ ಕಾಣಬಹುದಾಗಿದೆ. ಗ್ಹೆಸ್ಟ್ ದಿ ಒನ್-ಐಯ್ಡ್ (1912-14, ನಾಲ್ಕು ಸಂಪುಟ; ಇಂಗ್ಲಿಷ್ ಅನು: 1920) ಎಂಬುದರಲ್ಲಿ ಐಸ್ಲೆಂಡಿನ ಜನಜೀವನದ ಯಥಾರ್ಥ ಚಿತ್ರಣವಿದೆ. ಸೆವೆನ್ ಡೇಸ್ ಡಾರ್ಕ್ನೆಸ್ನಲ್ಲಿ (1920: ಇಂಗ್ಲಿಷ್ ಅನು : 1930) ಯುದ್ಧದಿಂದ ಉಂಟಾಗುವ ಸಮಸ್ಯೆಗಳ ನಿರೂಪಣೆ ಇದೆ. ಈತನ ಜೀವನಚರಿತ್ರೆಯಾದ ದಿ ಚರ್ಚ್ ಆನ್ ದಿ ಮೌಂಟನ್ (ಐದು ಸಂಪುಟಗಳು; 1924-28) ಎಂಬುದರ ಸ್ವಲ್ಪ ಭಾಗ ಷಿಪ್ಸ್ ಇನ್ ದಿ ಸ್ಕೈ (1938) ಮತ್ತು ದಿ ನೈಟ್ ಅಂಡ್ ದಿ ಡ್ರೀಮ್ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದವಾಗಿದೆ. ಈತ ಆಧುನಿಕ ಐಸ್ಲೆಂಡಿನ ಹೆಸರಾಂತ ದ್ವಿಭಾಷಿ ಎನಿಸಿಕೊಂಡಿದ್ದಾನೆ.
ಗುನ್ನಾರ್ಸ್ಸನ್ 1975ರ ನವೆಂಬರ್ 21ರಂದು ನಿಧನನಾದ. 1976ರಲ್ಲಿ ಈತನ ಪತ್ನಿ ನಿಧನವಾದಳು. ಇವರಿಬ್ಬರ ಸಮಾಧಿಗಳು ಅಲ್ಲಿಯ ಕೆಥೊಲಿಕ್ ಚರ್ಚಿನ ಸ್ಮಶಾನದಲ್ಲಿದೆ.
On the birth anniversary of Gunnar Gunnarsson
ಕಾಮೆಂಟ್‌ಗಳು