ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಕ್ಕಪ್ಪಗೌಡ


 

ಎಚ್.ಜೆಲಕ್ಕಪ್ಪಗೌಡ


ಪ್ರೊಎಚ್.ಜೆಲಕ್ಕಪ್ಪಗೌಡ ಅವರು ಜಾನಪದತಜ್ಞಶಿಕ್ಷಣತಜ್ಞ ಮತ್ತು  ಸಾಹಿತಿಗಳಾಗಿಹೆಸರಾಗಿದ್ದವರು.


ಲಕ್ಕಪ್ಪಗೌಡ  ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನ ಹಳ್ಳಿಯಲ್ಲಿ1939 ಮೇ 8ರಂದು ಜನಿಸಿದರುತಂದೆ ಜವರೇಗೌಡ ತಾಯಿ ಕಾಳಮ್ಮಪ್ರಾಥಮಿಕ ಶಿಕ್ಷಣಹುಟ್ಟಿದೂರಿನಲ್ಲಿ ನಡೆದು ಪ್ರೌಢಶಾಲೆಗೆ ಬೆಟ್ಟದಪುರದ ಹೈಸ್ಕೂಲು ಸೇರಿದರುಪಿ.ಯುಕೊಣನೂರಿನಲ್ಲಿ ಓದಿದರುಮೈಸೂರಿನ ಮಹಾರಾಜಾ ಕಾಲೇಜಿನಿಂದ ಬಿ.ಪದವಿಮೈಸೂರುವಿ.ವಿ.ದಿಂದ ಎಂ.ಪದವಿ ಮತ್ತು ‘ಶ್ರೀ ರಾಮಾಯಣ ದರ್ಶನಂ’ ಒಂದು ವಿಮರ್ಶಾತ್ಮಕಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿಪದವಿ ಗಳಿಸಿದರು.


ಲಕ್ಕಪ್ಪಗೌಡ ಅವರು ಹಾಸನದ ಹೊಳೆನರಸೀಪುರದಲ್ಲಿ ಪ್ರೌಢಶಾಲಾಶಿಕ್ಷಕರಾಗಿ ಬೋಧನಕ್ಷೇತ್ರವನ್ನೂ ಪ್ರವೇಶಿಸಿ ನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಮತ್ತು ಮಹಾರಾಜಾ ಕಾಲೇಜಿನಲ್ಲಿಉಪನ್ಯಾಸಕರಾಗಿಮಾನಸ ಗಂಗ್ರೋತಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಸಹಾಯಕರಾಗಿ ಸೇವೆ ಸಲ್ಲಿಸಿದರುಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲೂ ಕೆಲಕಾಲಉಪನ್ಯಾಸಕರ ಹುದ್ದೆ ನಿರ್ವಹಿಸಿದರು.


ಕೇಂದ್ರ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನೂ ಕನ್ನಡಕ್ಕೆ ಭಾಷಾಂತರಿಸಲುಕರ್ನಾಟಕ ಸರಕಾರವು ಭಾಷಾಂತರ ಇಲಾಖೆಯನ್ನು ಪ್ರಾರಂಭಿಸಿದಾಗ ಲಕ್ಕಪ್ಪಗೌಡರುಆಯೋಗದ ಸದಸ್ಯರಾಗಿ 

ನೇಮಕಗೊಂಡರುಏಳು ವರ್ಷಗಳ ಕಾಲ ಆಯೋಗದಲ್ಲಿ ಕಾರ್ಯನಿರ್ವಹಿಸಿದರು


ಲಕ್ಕಪ್ಪಗೌಡ ಅವರು ಪಿ.ಯುಓದುತ್ತಿದ್ದಾಗಲೇ ‘ಹೆಮ್ಮೆ’ ಎಂಬ ಕವನವನ್ನು ಬರೆದಿದ್ದುಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಪ್ರಕಟಗೊಂಡಿತುನಂತರ ಬರೆದ ಹಲವಾರು ಕವನಗಳುಗೋಕುಲ ಪತ್ರಿಕೆಯಲ್ಲಿ ಪ್ರಕಟವಾಯಿತುನಂತರ ಪ್ರೌಢಶಾಲಾ ಶಿಕ್ಷಕರಾಗಿದ್ದ ಸಂದರ್ಭದಲ್ಲಿಪುರಂದರ ದಾಸರ ಪೂರ್ವಾಶ್ರಮವನ್ನು ಕುರಿತು ‘ತಮಸ್ಸಿನಿಂದ ಜ್ಯೋತಿಗೆ’ ಎಂಬ ನಾಟಕವನ್ನುರಚಿಸಿದಾಗ ಸ್ನೇಹಿತರಾದ ರಾಮಪ್ರಸಾದ್‌ ರಂಗಕ್ಕೆ ತಂದರು ಸಂದರ್ಭದಲ್ಲಿ ಪ್ರಕಟವಾದಮೊದಲ ಕವನ ಸಂಕಲನ ‘ವಸಂತಗೀತ’. ನಂತರ ಶಿವಮೊಗ್ಗದ ಬಿ.ಆರ್ಪ್ರಾಜೆಕ್ಟ್‌ನ ಸ್ನಾತಕೋತ್ತರಕೇಂದ್ರದಲ್ಲಿ ರೀಡರ್ ಆಗಿ ನೇಮಕಗೊಂಡು ಬಂದ ನಂತರ ಪ್ರೊ.ಎಚ್‌ತಿಪ್ಪೆರುದ್ರಸ್ವಾಮಿಯವರೊಡನೆ ಸೇರಿ ಜಾನಪದ ವಿಚಾರ ಸಂಕಿರಣಗಳುಜಾನಪದ ಮೇಳಗಳನ್ನುನಡೆಸಿದ್ದಲ್ಲದೆ ಶಿವಮೊಗ್ಗಚಿತ್ರದುರ್ಗಚಿಕ್ಕಮಗಳೂರು ಜಿಲ್ಲೆಯ ಅಜ್ಞಾತ ಜಾನಪದಕಲಾವಿದರನ್ನು ಬೆಳಕಿಗೆ ತಂದು ಕಲಾವಿದರನ್ನು ಸನ್ಮಾನಿಸುವ ಯೋಜನೆಯನ್ನುಜಾರಿಗೊಳಿಸಿದರುಮೈಸೂರು ವಿಶ್ವವಿದ್ಯಾಲಯದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರದಂತೆ ಕುವೆಂಪುವಿಶ್ವವಿದ್ಯಾಲಯದಲ್ಲೂ ‘ಕನ್ನಡ ಭಾರತಿ’ ಎಂದು ನಾಮಕರಣ ಮಾಡಿ ಅಧ್ಯಯನ ಕೇಂದ್ರದಸ್ಥಾನಮಾನಕ್ಕೆ ಅರ್ಹರಾಗುವಂತೆ ಮಾಡಿದರು ಅವಧಿಯಲ್ಲಿ 1985ರಲ್ಲಿ ಶ್ರೀರಂಗರ ಸಾಹಿತ್ಯಕರ್ನಾಟಕ ಜಾತ್ರೆಗಳುಜಾನಪದ ಮತ್ತು ಪೂರಕ ಕ್ಷೇತ್ರಗಳು, 1986ರಲ್ಲಿ ಸಾಹಿತ್ಯ ಮತ್ತುಸಮಾಜವಾದಿ ಒಲವುಗಳು, 1987ರಲ್ಲಿ ಕನ್ನಡ ಸಾಹಿತ್ಯ ಮತ್ತು ಸಮಕಾಲೀನತೆ, 1989ರಲ್ಲಿನವಸಾಕ್ಷರರ ಸಾಹಿತ್ಯ ರಚನಾ ಕಮ್ಮಟ, 1990ರಲ್ಲಿ ಜಾನಪದ ಆಧುನಿಕ ಪ್ರವೃತ್ತಿಗಳುಬಂಡಾಯಸಾಹಿತ್ಯ ಚಳುವಳಿಗಳು ಮುಂತಾದ ವಿಷಯಗಳ ಮೇಲೆ ವಿಚಾರ ಸಂಕಿರಣಕಮ್ಮಟಗಳು ನಡೆದು ‘ಕನ್ನಡ ಭಾರತಿ’ ಕಾರ್ಯಕ್ರಮಗಳನ್ನೂ ಇತರ ವಿಶ್ವವಿದ್ಯಾಲಯಗಳುಗಮನಿಸುವಂತೆ ಮಾಡಿದರು.


ಪ್ರಾಧ್ಯಾಪಕರಾಗಿ ನಿಯೋಜಿತರಾಗಿದ್ದ ಲಕ್ಕಪ್ಪ ಗೌಡ ಅವರು 1990ರಿಂದ 93 ರವರೆಗೆಕುಲಸಚಿವರಾಗಿದ್ದರು ಕನ್ನಡ ಭಾರತಿಯ ನಿರ್ದೇಶಕರಾಗಿಯೂ ದುಡಿದು 1999ರಲ್ಲಿನಿವೃತ್ತರಾದರು. 1995ರಲ್ಲಿ ‘ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಆಕಾಡಮಿಅಧ್ಯಕ್ಷರಾಗಿ ನೇಮಕಗೊಂಡರುಜಾನಪದ ಅಕಾಡಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿಹಲವಾರು ಯೋಜನೆಗಳನ್ನೂ ರೂಪಿಸಿ ಕಾರ್ಯಗತಗೊಳಿಸಿದರುಪಾಶ್ಚಾತ್ಯ ಜಾನಪದಸಂಶೋಧಕರ ಪರಿಚಯ ಪುಸ್ತಕಗಳುಸರ್ವಜ್ಞಜಾನಪದಕುಮಾರವ್ಯಾಸ ಜಾನಪದ ಮೊದಲಾದರತ್ನತ್ರಯ ಸಂಚಿಕೆಗಳ ಪ್ರಕಟಣೆಸುವರ್ಣ ಜಾನಪದ ಸಂಪುಟಗಳುಜಾನಪದ ನಿಘಂಟುಜಾನಪದ ವಿಶ್ವಕೋಶ ಮುಂತಾದವುಗಳ ಪ್ರಕಟಣೆಜಾನಪದ ವಸ್ತು ಸಂಗ್ರಹಾಲಯಗಳಯೋಜನೆಯನ್ನೂ ರೂಪಿಸಿದರುಮುಸ್ಲಿಂ ಜಾನಪದ ಕ್ಷೇತ್ರದ ಮಹತ್ವವನ್ನು ಅರಿಯಲು ಮುಸ್ಲಿಂಕಟ್ಟಡ ಶೈಲಿಲೋಹಶಿಲ್ಪಸಾಹಿತ್ಯಸಂಗೀತಜಾನಪದ ಮುಂತಾದವುಗಳ ಬಗ್ಗೆ ವಿಚಾರಸಂಕಿರಣಗಳನ್ನೂ ಆಯೋಜಿಸಿದರುಕನಕಪುರದಲ್ಲಿ ‘ಜಾನಪದ ಮತ್ತು ಜಾಗತಿಕ ಪರಿಕಲ್ಪನೆ’, ಸಕಲೇಶಪುರದಲ್ಲಿ ‘ಪರಿಸರ ಜಾನಪದ’, ಬೆಂಗಳೂರಿನಲ್ಲಿ ‘ಅಖಿಲ ಕರ್ನಾಟಕ ಜಾನಪದಸಮಾವೇಶ’ ತುಮಕೂರಿನಲ್ಲಿ ‘ಫ್ಲೋಕ್‌ಲೋರ್’ ಪದ ಸೃಷ್ಟಿಯಾಗಿ 150 ವರ್ಷಗಳು, ‘ಜಾನಪದ’ ಪದ ಸೃಷ್ಟಿಯಾಗಿ 30 ವರ್ಷಗಳಾದ ಚಾರಿತ್ರಿಕ ಸಂಗತಿಯನ್ನು ದಾಖಲಿಸಲು ವಿಚಾರಸಂಕಿರಣಗಳನ್ನೂ ನಡೆಸಿದರುಜಾನಪದ ಕಲಾವಿದರಿಗೆ ಪ್ರಶಸ್ತಿ ಕೊಡುವುದರ ಮೂಲಕಜಾನಪದ ವಿದ್ವಾಂಸರನ್ನು ಸನ್ಮಾನಿಸುವ ಪರಂಪರೆಯನ್ನೂ ಜಾನಪದ ಅಕಾಡಮಿಯ ಮೂಲಕಕಾರ್ಯ ರೂಪಕ್ಕೆ ತಂದು ‘ಕರ್ನಾಟಕ ಜಾನಪದ ರತ್ನ’ ಪ್ರಶಸ್ತಿ ಪ್ರದಾನವನ್ನೂ ಆರಂಭಿಸಿದರು

ಜಾನಪದ ಗಂಗ್ರೋತ್ರಿ’ ಮತ್ತು ಜಾನಪದ ಸಮಾಚಾರ ನಿಯತಕಾಲಿಕೆಗಳನ್ನುಪ್ರಕಟಿಸತೊಡಗಿದರು. 1999ರಲ್ಲಿ ಇವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪದವಿಸ್ವೀಕರಿಸಿದರುನಂತರ ಇವರು ವಹಿಸಿಕೊಂಡ ಗುರುತರ ಜವಾಬ್ದಾರಿ ಎಂದರೆ ಹಂಪಿ ಕನ್ನಡವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನಮಂಗಳೂರು ಮತ್ತು ಕುವೆಂಪು ವಿ.ವಿ.ಗಳ ಶೈಕ್ಷಣಿಕಸಲಹೆಗಾರರಾಗಿಕಲಾ ವಿಭಾಗದ ಕ್ಷೇಮಪಾಲಕರಾಗಿಸಿಂಡಿಕೇಟ್‌ ಸದಸ್ಯರಾಗಿಕುಪ್ಪಳಿಯರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಯಾಗಿದಕ್ಷಿಣ ಭಾರತದ ಭಾಷೆಗಳ ಜಾನಪದಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ – ಹೀಗೆ ಹಲವಾರು ಸಾಹಿತ್ಯಿಕಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿದುಡಿದರು


ಲಕ್ಕಪ್ಪ ಗೌಡ ಅವರ ಕೃತಿಗಳಲ್ಲಿ ವಸಂತಗೀತಊರಮುಂದಿನ ಬಾವಿಪದ್ದು-ಹದ್ದುಅಕ್ಷತೆಕಿರುಗೆಜ್ಜೆಸೂಜಿಸಂಪಿಗೆವಚನತೋರಣ ಮೊದಲಾದವು ಕಾವ್ಯ ಕೃತಿಗಳುಹೊನ್ನಾರುಹುಲಿಯಹೆಜ್ಜೆ ಕಥಾ ಸಂಗ್ರಹಗಳುಸಿದ್ಧರಾಮತಮಸ್ಸಿನಿಂದ ಜ್ಯೋತಿಗೆ ಕಾಯಕಯೋಗಿ ನಾಟಕಗಳುದಲಿತಸೂರ್ಯಸಮತೆಯಶಿಲ್ಪಿವಿಶ್ಚಕವಿ ಕುವೆಂಪುಡಾಅಂಬೇಡ್ಕರ್ ಜೀವನಚರಿತ್ರೆಗಳು ಇವರ ಸಾಹಿತ್ ಯವಿಮರ್ಶೆಗಳಲ್ಲಿ ಅಂತರಂಗಸಂಗಮಕಥಾಲೋಕನಗೋಪುರದ ದೀಪಗಳುಅಂತರಾಳಬಾಳದೇಗುಲದ ನೋಟಗಳುಸಾಹಿತ್ಯ ಬಹುಮುಖೀ ಚಿಂತನೆ ಸೇರಿವೆ ಮಕ್ಕಳಸಾಹಿತ್ಯದಲ್ಲಿ ಇಲಿಯಡ್‌ಒಡಿಸ್ಸಿಕಾಯಕವೇ ಕೈಲಾಸದೀನ ಬಂಧು ಸೇರಿವೆಇಬ್ಬನಿ ಎಂಬಸ್ವತಂತ್ರ ಗಾದೆಗಳುಅನ್ಯಾರ್ಥಕೋಶ ಇವರ ಇತರ ಕೃತಿಗಳು ರಸ ಋಷಿ ಕುವೆಂಪುಮಂಗಳಗಂಗೆಸಾಧನೆಯ ಹಾದಿಯಲ್ಲಿನಾಗ ಸಂಪಿಗೆರಾಷ್ಟ್ರಕವಿಸಿಂಗಾರಗ್ರಂಥ ಸರಸ್ವತಿಮುತ್ತು ಬಂದಿದೆ ಕೇರಿಗೆಕನಕಭಾರತಿಜನಪ್ರಿಯ ಕನಕ ಸಂಪುಟಜೀಶಂಪ ಸಂಸ್ಮರಣೆಮುಂತಾದವು ಸಂಪಾದನೆಗಳು ಇವರ ಇಂಗ್ಲಿಷ್‌ ಕೃತಿಗಳಲ್ಲಿ ಲಿಂಗರಿಂಗ್‌ ಫ್ರಾಗ್ರೆನ್ಸ್‌ಶ್ರೀಗಂಧಬೊಕೆ ಆಫ್ ಫ್ಲವರ್ಸ್ಪ್ರೈಸ್‌ಲೆಸ್‌ ಗೋಲ್ಡ್‌ ಮಂತಾದವು ಸೇರಿವೆ ಜಾನಪದ ಕೃತಿಗಳಲ್ಲಿಜಾನಪದ ಕಥಾವಳಿಒಗಟುಗಳುಮಲೆನಾಡು ಜಾನಪದ,ವಿಶಿಷ್ಟ ಜಾನಪದಮಲ್ಲಿಗೆಮೊಗ್ಗುಸುರಿದಾವೆ ಮತ್ತು ಹೊಂಬಾಳೆ ಸೇರಿವೆ ಇವುಗಳಲ್ಲದೆ ಲೇಖನಗಳ ಸಂಕಲನಗಳುಮುನ್ನುಡಿಗಳಸಂಕಲನಗಳು ಸೇರಿ 70ಕ್ಕೂ ಹೆಚ್ಚು ಕೃತಿ ಪ್ರಕಟಗೊಂಡಿವೆ


ಲಕ್ಕಪ್ಪಗೌಡರಿಗೆ 2004ರಲ್ಲಿ ಸ್ನೇಹಿತರುಶಿಷ್ಯರುಹಿರಿಯರು ಹಾರೈಸಿ ಬರೆದು ಅರ್ಪಿಸಿದಅಭಿನಂದನ ಗ್ರಂಥ ‘ಹೊನ್ನಾರು’. ಮೈಸೂರು ಸರಕಾರದ ದೇವರಾಜ ಬಹದ್ದೂರ್ ಪ್ರಶಸ್ತಿಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನವಿಶ್ವಮಾನವ ಸಾಹಿತ್ಯ ಪ್ರಶಸ್ತಿಜಾನಪದ ಅಕಾಡಮಿಜಾನಪದ ತಜ್ಞ ಪ್ರಶಸ್ತಿಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಸನ ಜಿಲ್ಲೆಯ ೫ನೆಯಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದಸಮ್ಮೇಳಾನಧ್ಯಕ್ಷತೆ ಮುಂತಾದ ಗೌರವಪುರಸ್ಕಾರಗಳು ಸಂದಿದ್ದವು.


ಎಚ್.ಜೆಲಕ್ಕಪ್ಪಗೌಡ ಅವರು 2021 ಜುಲೈ 26ರಂದು ನಿಧನರಾದರು.


ಸ್ವಾಗತಿಸುತ್ತಿದ್ದೇವೆ ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ