ಸುಮನ್
ಸುಮನ್ ರಂಗನಾಥನ್
ಸುಮನ್ ರಂಗನಾಥನ್ ಪ್ರಸಿದ್ಧ ನಟಿ. ಅವರು ಕನ್ನಡ, ಬಂಗಾಳಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳೆರಡರಲ್ಲೂ ನಟಿಸಿದವರು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿದ್ದರೂ ತಮ್ಮ ಲವಲವಿಕೆಯ ಹುರುಪುತನ ಉಳಿಸಿಕೊಂಡ ಅಪರೂಪದ ನಟಿ ಈಕೆ.
ಸುಮನ್ ರಂಗನಾಥನ್ ಅವರು ತುಮಕೂರಿನಲ್ಲಿ 1974 ಜುಲೈ 26 ರಂದು ಜನಿಸಿದರು.
ಸುಮನ್ 1989ರಲ್ಲಿ 'ಸಿಬಿಐ ಶಂಕರ್' ಕನ್ನಡ ಚಲನಚಿತ್ರದಲ್ಲಿ ಶಂಕರ್ ನಾಗ್ ಅವರೊಂದಿಗೆ ನಾಯಕಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಡಾಕ್ಟರ್ ಕೃಷ್ಣ ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿದ್ದರು. ಸಂತ ಶಿಶುನಾಳ ಶರೀಫ್ ಅಂತಹ ಚಿತ್ರದಲ್ಲಿ ಶರೀಫರ ಮೋಹದ ಹೆಂಡತಿಯಾಗಿ ಮಿಂಚಿದರು. ಬಾಳ ಹೊಂಬಾಳೆ, ಕಾಡಿನ ವೀರ, ನಮ್ಮೂರ ಹಮ್ಮೀರ, ಕೆಂಪು ಸೂರ್ಯ, ಓ ಗಂಡಸರೆ ನೀವೆಷ್ಟು ಒಳ್ಳೆಯವರು?, ಬುದ್ಧಿವಂತ, ಬಿಂದಾಸ್ ಹೀಗೆ ಅವರ ಹಲವು ಕನ್ನಡ ಚಿತ್ರಗಳಿವೆ. ಸಿದ್ಲಿಂಗು ಚಿತ್ರದ ಪೋಷಕ ಪಾತ್ರ ನಿರ್ವಹಣೆಗೆ ಫಿಲ್ಮಫೇರ್ ಪ್ರಶಸ್ತಿಯನ್ನೂ ಪಡೆದರು.
1990ರಲ್ಲಿ, ಸುಮನ್ ರಂಗನಾಥನ್ ಅವರು ಪುದು ಪಾಟ್ಟು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ, ಅವರು ಪೆರುಮ್ ಪುಲಿ (1991), ಮಾನಗಾರ ಕಾವಲ್ (1991), ಕುರುಂಬುಕ್ಕಾರನ್ (1991), ಉನ್ನೈ ವಾಳ್ತಿ ಪಾಡುಗಿರೆನ್ (1992), ಮೆಟ್ಟುಪಟ್ಟಿ ಮಿರಾಸು (1994) ಮತ್ತು ಮುದಲ್ ಉದಯಂ (1995) ಅಂತಹ ಅನೇಕ ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿಯ ಫರೇಬ್ (1996) ನಲ್ಲಿ ಕಾಣಿಸಿಕೊಂಡರು. ಅವರು ಆ ಅಬ್ ಲೌಟ್ ಚಲೆನ್ (1999) ನಲ್ಲಿ ಭಾರತೀಯ-ಅಮೆರಿಕನ್ ಸಮಾಜವಾದಿಯಾಗಿ ಕಾಣಿಸಿಕೊಂಡರು. 2003ರಲ್ಲಿ ಅವರು ಬಾಗ್ಬನ್, ಏಕ್ ಸ್ತ್ರೀ ಚಿತ್ರಗಳಲ್ಲಿ ಕಾಣಿಸಿಕೊಂಡರು.
ಸುಮನ್ ರಂಗನಾಥನ್ ಮಿಸ್ಟರ್ ಇಂಡಿಯಾ ವರ್ಲ್ಡ್ 2007ರ ತೀರ್ಪುಗಾರ ಮಂಡಲಿಯಲ್ಲಿದ್ದರು. ಕಲರ್ಸ್ ಕನ್ನಡ ವಾಹಿನಿಯ'ತಕಧಿಮಿತ' ತೀರ್ಪುಗಾರರಾಗಿದ್ದರು. ಈ ಮಧ್ಯೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದರು. ಸುದೀರ್ಘ ವಿರಾಮದ ನಂತರ, ಮತ್ತೆ ತಮಿಳು ಉದ್ಯಮದಲ್ಲಿ ಅರಂಭಮ್ (2013) ಚಿತ್ರದಲ್ಲಿ ನಟಿಸಿದರು. ನೀರ್ ದೋಸೆ, ಕಪಟದಾರಿ, ದಂಡುಪಾಳ್ಯ, ಹೋಮ್ ಮಿನಿಸ್ಟರ್, ಪೆಟ್ರೊಮ್ಯಾಕ್ಸ್, ತೋತಾಪುರಿ ಹೀಗೆ ಅವರ ಸಿನಿಪಯಣ ಸಾಗುತ್ತಲೇ ಇದೆ.
On the birthday of actress Suman Ranganathan
ಕಾಮೆಂಟ್‌ಗಳು