ನರಸಿಂಹನ್
ಚಕ್ರವರ್ತಿ ನರಸಿಂಹನ್
ಚಕ್ರವರ್ತಿ ವಿಜಯರಾಘವ ನರಸಿಂಹನ್ ಅವರು ಭಾರತೀಯ ನಾಗರಿಕ ಸೇವಾ ಅಧಿಕಾರಿ ಮತ್ತು ವಿಶ್ವಸಂಸ್ಥೆಯ ಮಾಜಿ ಅಧೀನ ಕಾರ್ಯದರ್ಶಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಇಪ್ಪತ್ತೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ನರಸಿಂಹನ್ 1915ರ ಮೇ 21ರಂದು
ಮದ್ರಾಸ್‌ನಲ್ಲಿ ಜನಿಸಿದರು. ತಿರುಚ್ಚಿಯ ಸೇಂಟ್ ಜೋಸೆಫ್ ಕಾಲೇಜು, ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಸೆಪ್ಟೆಂಬರ್ 1937ರಲ್ಲಿ ಭಾರತೀಯ ನಾಗರಿಕ ಸೇವೆಯನ್ನು ಪ್ರವೇಶಿಸಿದರು. ಅಂದಿನ ಮದ್ರಾಸ್ ಸರ್ಕಾರದ ಅಭಿವೃದ್ಧಿ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ, 1946ರ್ರಲ್ಲಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಸದಸ್ಯರಾಗಿ ಗೌರವಾನ್ವಿತರಾದರು.
ನರಸಿಂಹನ್ 1950ರಲ್ಲಿ ಸ್ವತಂತ್ರ ಭಾರತದ ಕೇಂದ್ರ ಸರ್ಕಾರದ ಸೇವೆಗೆ ವರ್ಗಾವಣೆಗೊಂಡು ಕೃಷಿ ಸಚಿವಾಲಯಕ್ಕೆ ಸೇರಿದರು. 1953ರಲ್ಲಿ, ಅವರು ಹಣಕಾಸು ಸಚಿವಾಲಯಕ್ಕೆ ಸೇರಿ, ವಿದೇಶಿ ನೆರವು ಕಾರ್ಯಕ್ರಮಗಳ ಅಭಿವೃದ್ಧಿ ಮತ್ತು ಸಮನ್ವಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿದ್ದರು.
ನರಸಿಂಹನ್ 1956ರಲ್ಲಿ ವಿಶ್ವಸಂಸ್ಥೆಗೆ ಏಷ್ಯಾ ಮತ್ತು ಪೂರ್ವ ರಾಷ್ಟ್ರಗಳ ಯುಎನ್ ಆರ್ಥಿಕ ಆಯೋಗದ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ನೇಮಕಗೊಂಡರು. 1958ರಲ್ಲಿ, ಅವರು ವಿಶ್ವಸಂಸ್ಥೆಯಲ್ಲಿ ವಿಶೇಷ ರಾಜಕೀಯ ಪ್ರಶ್ನೆಗಳಿಗೆ ಅಂಡರ್-ಸೆಕ್ರೆಟರಿಯಾಗಿ ನೇಮಕಗೊಂಡು, ಯು.ಎನ್ ಸೆಕ್ರೆಟರಿ ಜನರಲ್ ಆಗಿದ್ದ ಡಾಗ್ ಹ್ಯಾಮರ್ಸ್ಕ್‌ಜಾಲ್ಡ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರಾಲ್ಫ್ ಬುಂಚೆ ಅವರೊಂದಿಗೆ ಕೆಲಸ ಮಾಡಿದರು.
ಚಕ್ರವರ್ತಿ ವಿಜಯರಾಘವ ನರಸಿಂಹನ್ 1961ರಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಚೆಫ್ ಡಿ ಕ್ಯಾಬಿನೆಟ್ ಆದರು. 1978 ರಲ್ಲಿ ನಿವೃತ್ತಿಯ ಮೊದಲು ವಿಶ್ವಸಂಸ್ಥೆಯಲ್ಲಿ ಅಂಡರ್ ಸೆಕ್ರೆಟರಿ ಜನರಲ್ ಆಗಿದ್ದರು.
ಕರ್ನಾಟಕ ಸಂಗೀತದ ಗಾಯಕ, ವಿದ್ವಾಂಸ ಮತ್ತು ಅಭಿಜ್ಞರಾಗಿದ್ದ ನರಸಿಂಹನ್ ಅವರು 1965ರಲ್ಲಿ ಆಯ್ದ ಪದ್ಯಗಳನ್ನು ಆಧರಿಸಿ ಮಹಾಭಾರತದ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿದ್ದರು.
ನರಸಿಂಹನ್ ಅವರಿಗೆ 2001ರಲ್ಲಿ ಪದ್ಮವಿಭೂಷಣ ಗೌರವ ಸಂದಿತು.
ಚಕ್ರವರ್ತಿ ವಿಜಯರಾಘವ ನರಸಿಂಹನ್ 2003ರ ನವೆಂಬರ್ 2ರಂದು ನಿಧನರಾದರು.
On the birth anniversary of Chakravarthi Vijayaraghavan Narasimhan who served in United Nations for 22 years
ಕಾಮೆಂಟ್‌ಗಳು