ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿಪಟೂರು ರಘು


 ತಿಪಟೂರು ರಘು


ತಿಪಟೂರು ರಘು ಕನ್ನಡ ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ.

ರಘು ತಿಪಟೂರಿನಲ್ಲಿ ಹುಟ್ಟಿದರು ಅವರ ಶಿಕ್ಷಣ ನಡೆದಿದ್ದು ಬೆಂಗಳೂರಿನಲ್ಲಿ. ಶಾಲಾ ಕಾಲೇಜುಗಳಲ್ಲಿಯೇ ರಂಗಭೂಮಿ ನಂಟಿಗೆ ಬಂದ ಅವರು ಹಲವಾರು ಚಿತ್ರಗಳಲ್ಲಿ ಸಹಾಯಕರಾಗಿ ದುಡಿದರು.

ಡಾ.ರಾಜ್ ಕುಮಾರ್ ಅಭಿನಯದ ನಾಗಪೂಜಾ ಸಿನಿಮಾ ಮುಖಾಂತರ ಸಹ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ತಿಪಟೂರು ರಘು ಅವರು ಊರ್ವಶಿ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ನಂತರ ಕೆಂಪು ಹೋರಿ, ಸ್ವರ್ಣ ಮಹಲ್ ರಹಸ್ಯ, ನಾಗ ಕಾಳ ಭೈರವ, ಬೆಂಕಿ ಬಿರುಗಾಳಿ, ಬೆಟ್ಟದ ಹುಲಿ, ನಾಗರಪೂಜೆ ಸೇರಿದಂತೆ 16ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ಕಿರುತೆರೆಯ ಧಾರಾವಾಹಿಗಳನ್ನೂ ನಿರ್ದೇಶಿಸಿದ್ದ ರಘು ಅವರು  ನಿರ್ದೇಶಕರ ಸಂಘ ಕಟ್ಟುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ವಿಜಯ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾಂಶುಪಾಲರಾಗಿ ಹಲವಾರು ಪ್ರತಿಭಾವಂತರನ್ನು ಬೆಳಕಿಗೆ ತಂದ ಅವರು ಸದಾ ಚಿತ್ರರಂಗದ ಒಳಿತಿಗೆ ತುಡಿಯುತ್ತಿದ್ದರು.

ತಿಪಟೂರು ರಘು 2021ರ ಮೇ 29ರಂದು 83ನೇ ವಯಸ್ಸಿನಲ್ಲಿ ನಿಧನರಾದರು.

ಮಾಹಿತಿ ಕೃಪೆ: ಶ್ರೀಧರ ಮೂರ್ತಿ ಸಾರ್ Sreedhara Murthy Sir

On Remembrance Day of Director Tiptur Raghu 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ