ಜರೀನಾ ವಹಾಬ್
ಜರೀನಾ ವಹಾಬ್
'ಚಿತ್‍ಚೋರ್' ಚಿತ್ರ ಹಲವಾರು ಕಾರಣಗಳಿಗಾಗಿ ನೆನಪಿನಿಂದ ಅಳಿಸಲಾಗದ ಚಿತ್ರ. ಅದರಲ್ಲಿನ ಏಸುದಾಸ್ ಮತ್ತು ಹೇಮಲತಾ ಗಾಯನ, ರವೀಂದ್ರ ಜೈನ್ ಸಂಗೀತ, ಬಸುದಾ ನಿರ್ದೇಶನ, ಕೆ. ಕೆ. ಮಹಾಜನ್ ಛಾಯಾಗ್ರಹಣ; ಅಮೊಲ್ ಪಾಲೇಕರ್, ಜರೀನಾ ವಹಾಬ್, ಮಾಸ್ಟರ್ ರಾಜು, ಎ.ಕೆ. ಹಾನಗಲ್, ದೀನಾ ಪಾಟಕ್ ಮುಂತಾದವರ ಅಭಿನಯ ಇವೆಲ್ಲ ಒಂದಕ್ಕಿಂತ ಒಂದು ಮೆಚ್ಚು.
ಯಾವುದೇ ಮನೆಯಿರಲಿ, ಸಿನಿಮಾನೇ ಇರಲಿ, ಅಲ್ಲಿ ಸರಳ ಚೆಲುವಿನ, ನಲ್ಮೆಯ ಸೊಬಗಿನ ನಡೆ ನುಡಿಯ ಯುವತಿ ಸದಾ ಮನಸೆಳೆಯುತ್ತಾಳೆ. ಹಾಗಾಗಿ ಚಿತ್‍ಚೋರ್ ಚಿತ್ರದ ಇಡೀ ವಾತಾವರಣಕ್ಕೆ ಜರೀನಾ ವಹಾಬ್ ಅವರದು ಒಂದು ಪ್ಲೆಸೆಂಟ್ ಪ್ರೆಸೆನ್ಸ್. ಅದು ಇಂದು ಕೂಡಾ ಮನದಿಂದ ಅಳಿಸಲಾಗದಂತದ್ದು.
ತು ಜೊ ಮೇರೆ ಸುರ್ ಮೇ
ಸುರ್ ಮಿಲಾ ಲ, ಸಂಗ್ ಗಾಲೇ
ತೋ ಜಿಂದಗೀ ಹೋ ಜಾಯೇ ಸಫಲ್...
ಈ ಗೀತೆಯ ಆವರಣ ಇಂದೂ ಕಣ್ಣಿಗೆ ಕಟ್ಟುವಂತದ್ದು.
ಜರೀನಾ ವಹಾಬ್ 1956ರ ಜುಲೈ 17ರಂದು ವಿಶಾಖಪಟ್ಟಣದಲ್ಲಿ ಜನಿಸಿದರು. ಪುಣೆಯ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಅಭಿನಯ ತರಬೇತಿ ಪಡೆದರು.
ಜರೀನಾ ವಹಾಬ್ ಅವರು 'ಇಷ್ಕ್ ಇಷ್ಕ್ ಇಷ್ಕ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. 'ಚಿತ್‍ಚೋರ್' ಅವರಿಗೆ ಪ್ರಖ್ಯಾತಿ ತಂದಿತು. ಅನೇಕ ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದರು. ಘರೋಂಡಾ, ಮೇರಾ ದಮಾದ್, ಜಝ್‍ಬಾತ್, ಸಾವನ್ ಕೋ ಆನೆ ದೊ, ಮೈ ನೇಮ್ ಈಸ್ ಖಾನ್ ಮುಂತಾದವು ಇವುಗಳಲ್ಲಿ ಸೇರಿವೆ. ಕಿರುತೆರೆಯ ಧಾರಾವಾಹಿಗಳಲ್ಲೂ ನಟಿಸಿದ್ದರು.
Unforgettable face of ‘Chitchor’ actress Zarina Wahab
ಕಾಮೆಂಟ್‌ಗಳು