ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಜುಳ ಭದ್ರಸ್ವಾಮಿ


 ಮಂಜುಳ ಭದ್ರಸ್ವಾಮಿ


ಮಂಜುಳ ಭದ್ರಸ್ವಾಮಿ ಕನ್ನಡ ಮತ್ತು ಇಂಗ್ಲಿಷ್  ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.

ಜುಲೈ 17, ಮಂಜುಳ ಅವರ ಜನ್ಮದಿನ. ಮೂಲತಃ ಮೈಸೂರಿನವರಾದ ಅವರು ಶಾಲಾ ಕಾಲೇಜಿನ ದಿನಗಳಲ್ಲಿ ರ್‍ಯಾಂಕ್ ವಿಜೇತರಾಗಿ  ಪ್ರಸಿದ್ಧಿ ಪಡೆದಿದ್ದರು. ಅವರು ಸ್ಯಾನ್ ಫ್ರಾನ್ಸಿಸ್ಕೊ  ಸ್ಟೇಟ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮಾಸ್ಟರ್ಸ್ ಪದವಿ ಗಳಿಸಿದ್ದಾರೆ.  ಕ್ಯಾಲಿಫೋರ್ನಿಯಾದ ಫ್ರಿಮಾಂಟ್‍ನಲ್ಲಿ ಕುಟುಂಬದೊಂದಿಗೆ ಕೆಲಕಾಲ ನೆಲೆಸಿದ್ದ ಅವರು ಅನಲಿಸ್ಟ್ ಆಗಿ ವೃತ್ತಿಯನ್ನು ನಿರ್ವಹಿಸಿದ್ದರು.

ಅಪಾರ ಓದಿನ ಆಸಕ್ತಿಯುಳ್ಳ ಮಂಜುಳ ಕನ್ನಡ ಮತ್ತು ಇಂಗ್ಲಿಷಿನ ಬರಹಗಾರ್ತಿಯಾಗಿಯೂ ಹೆಸರಾಗಿದ್ದಾರೆ. ಇವರ ಬರಹಗಳು ಅನೇಕ ಕನ್ನಡ ಮತ್ತು ಇಂಗ್ಲಿಷ್ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಮೂಡಿವೆ. ಮಂಜುಳ ಅವರ ಪ್ರಕಟಿತ ಕೃತಿಗಳಲ್ಲಿ ‘ಕಥಾಗುಚ್ಛ’ ಕನ್ನಡ ಕಥಾ ಸಂಗ್ರಹ, 'ಇನ್ ದ ಲ್ಯಾಂಡ್ ಆಫ್ ಗೋಲ್ಡನ್ ಗೇಟ್ ಬ್ರಿಜ್’ ಎಂಬ ಇಂಗ್ಲಿಷ್ ಲೇಖನಗಳ ಸಂಗ್ರಹಗಳು ಸೇರಿವೆ. ಬಹುಮುಖಿ ಚಟುವಟಿಕೆಗಳಲ್ಲಿ ಆಸಕ್ತರಾದ ಇವರು ಅನೇಕ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತ ಬಂದಿದ್ದಾರೆ.

ಆತ್ಮೀಯ ಪ್ರತಭಾನ್ವಿತರಾದ ಮಂಜುಳ ಭದ್ರಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Manjula Bhadraswamy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ