ತಳುಕು ಶ್ರೀನಿವಾಸ
ಟಿ. ವಿ. ಶ್ರೀನಿವಾಸ ಫೇಸ್ಬುಕ್ ವಲಯದಲ್ಲಿನ ಅತ್ಯುತ್ತಮ ಕನ್ನಡ ಬರಹಗಾರರಲ್ಲಿ ಒಬ್ಬರಾಗಿದ್ದರು. ಇಂದು ಅವರ ಸಂಸ್ಮರಣೆ ದಿನ.
ತಳುಕಿನ ವೆಂಕಣ್ಣಯ್ಯನವರ ವಂಶಸ್ಥರಾದ ಶ್ರೀನಿವಾಸ ಮೈಸೂರಿನಲ್ಲಿ ಓದುವ ದಿನಗಳಲ್ಲಿ ನನ್ನ ಸಮಕಾಲೀನರಾಗಿದ್ದವರು.
ಶ್ರೀನಿವಾಸ ಅವರು ವಾಣಿಜ್ಯ ಪದವಿ ಪಡೆದು ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉದ್ಯೋಗಿಯಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಆರಂಭಿಸಿ, ಭಾರತದ ವಿವಿದೆಡೆಗಳಲ್ಲಿ, ಅಧಿಕಾರಿಗಳ ಸ್ಥಾನವನ್ನು ನಿರ್ವಹಿಸಿದವರು.
ನಾನು ಫೇಸ್ಬುಕ್‍ಗೆ ಬಂದ 2010ರ ವರ್ಷದಲ್ಲೇ ಕನ್ನಡ ಸಂವಹನದಲ್ಲಿ ಆಪ್ತರಾಗಿದ್ದ ಶ್ರೀನಿವಾಸ್ ತಳುಕಿನ ಮನೆತನದ ಕಥೆಗಳು, ಬ್ಯಾಂಕಿಂಗ್ ವೈಖರಿ, ಮುಂಬೈ ಜೀವನ, ಚೆನ್ನೈ ವಿಶೇಷ, ಕನ್ನಡ ನಾಡಿನಲ್ಲಿರಬೇಕೆನಿಸುವ ಹಂಬಲ ಇತ್ಯಾದಿಗಳನ್ನು ಆಪ್ತವಾಗಿ ತೆರೆದಿಡುತ್ತಿದ್ದರು. ಅವರ ಭಾವಮೈದುನ ಬಾಲಸುಬ್ರಹ್ಮಣ್ಯ ಎಚ್ಎಮ್‍ಟಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದು ನಮ್ಮ ಸ್ನೇಹಕ್ಕೆ ವಿಶೇಷ ಕೊಂಡಿಯಾಗಿದ್ದರು.
ಕಳೆದ ದಶಕದ ಬಹುತೇಕ ದಿನಗಳಲ್ಲಿ ನನ್ನ ಪೋಸ್ಟಿಗೆ ದಿನದ ಮೊದಲ ಕಾಮೆಂಟ್ ಶ್ರೀನಿವಾಸರದಿರುತ್ತಿತ್ತು. ನಮ್ಮಿಬ್ಬರ ಭೇಟಿ ಆಗಬೇಕು ಎಂಬ ಹಂಬಲ ಕೂಡಿ ಬರಲಿಲ್ಲ. ದೇಶದ ವಿವಿದೆಡೆ ಸೇವೆ ಸಲ್ಲಿಸಿದ್ದ ಶ್ರೀನಿವಾಸರಿಗೆ ಇನ್ನೇನು ನಿವೃತ್ತಿಯ ಸಮೀಪ ಬೆಂಗಳೂರಿಗೆ ವರ್ಗವಾಯಿತು, ನಿವೃತ್ತಿಯಲ್ಲಿ ಕನ್ನಡದ ಮಣ್ಣಿನ ಜೀವನ ದಕ್ಕಿತು ಎಂಬ ಅನಿಸಿಕೆ ಮೂಡಿದ ಕೆಲವೇ ವರ್ಷದಲ್ಲಿ ಅವರಿಗೆ (29.08.2022ರಂದು) ಈ ಲೋಕದಿಂದಲೇ ಬಿಡುಗಡೆಯಾಗಿದ್ದಕ್ಕೆ ಏನೆನ್ನಬೇಕು!
ನನಗೆ ಇಷ್ಟವಾದ ಅವರ ಚಿಂತನ ಲಹರಿಯ ಕವಿತೆ ಇಂತಿದೆ:
ನಾನೊಬ್ಬ ಏದುಸಿರು ಬಿಡುತಿಹ ಕಲ್ಲಿದ್ದಲು
ಉಗಿಬಂಡಿ
ನನ್ನ ಬಳಿ ಎಂದಿಗೂ ಸುಳಿಯಲಿಲ್ಲ ಬಂಗಾರದ ಗಿಂಡಿ
ಟ್ಯಾಕ್ಸು ಪಾಕ್ಸು ಮುರಿದು ಮಾಹೆಯಾನ
ಬರುತಿಹುದು ----- ರೂಪಾಯಿ
ಚಾತಕದಂತೆ ತಾರೀಖು ಒಂದಕೆ ಕಾದು ಬಿಡುತಿಹೆ ನಾ
ಬಾಯಿ ಬಾಯಿ
ಬರುವುದರಲಿ ಒಂದು ಪಾಲು ಕೈ ತುತ್ತನಿಟ್ಟ ಆ
ತಾಯಿಗೆ
ಇನ್ನೊಂದು ದೊಡ್ಡ ತುತ್ತು ನನ್ನ ನಂಬಿದ ನನ್ನ ಮಕ್ಕಳ
ತಾಯಿಗೆ
ಹೆಚ್ಚಿನ ಖರ್ಚಿಗೆ ಗಟ್ಟಿಯಾಗಿರುವುದು ಸಾಲ
ಕೊಡುವ ಸೊಸೈಟಿ
ಉಳಿಸುವ ಮಾತೇ ಇಲ್ಲ ಈ ನನ್ನ ಸರಕಾರದ
ಖಜಾನೆಯಲ್ಲಿ
ಮುಚ್ಚಿದಷ್ಟೂ ಮತ್ತೆ ಮತ್ತೆ ತೆರೆದುಕೊಳ್ಳುವ ಖರ್ಚಿನ
ಬಾಬ್ತುಗಳು
ಭೂತ ತೃಪ್ತಿಗಾಗಿ ಹೊಸ ಹೊಸ ಯೋಜನೆಯ
ಸಾಲಗಳು ( ಭೂತ ಅಂದ್ರೆ ಹೊಟ್ಟೆ)
ಇದೆಲ್ಲದರ ನಡುವೆ ಅನುಭವ ಆಗುತಿಹುದು
ಅಭಾವ ವೈರಾಗ್ಯ
ಅದೇಕೋ ಸುತ್ತ ಮುತ್ತಲಿನವರೆಲ್ಲ ಹೇಳುತಿಹರು ನಾ
ಅಯೋಗ್ಯ
ನಾ ಚಿರಂಜೀವಿ ಆಗಲು ಸಾಲ ಕೊಟ್ಟ ಮಂದಿ
ಪ್ರಾರ್ಥಿಸುತಿಹರು
ಎಮ್ ವಿ ಸಿ ಎಂದು ಸೊಸೈಟಿಯವರು ಎನಗೆ
ಬಿರುದಿತ್ತಹರು (ಮೋಸ್ಟ್ ವ್ಯಾಲ್ಯೂಡ್ ಕಸ್ಟಮರ್)
ಸಾವಿರಾರು ಮಂದಿಗಳ ನಂಬಿಸಿ ಮೋಸ
ಮಾಡಲಾದೀತೇ
ಅದಕಾಗಿ ಹೊಸ ಹೊಸ ಯೋಜನೆಗಳ ರೂಪಿಸುತಿಹೆ
ಮತ್ತೆ ಕಾಯುವೆ ಮುಂದಿನ ತಿಂಗಳ ಒಂದನೇ
ತಾರೀಖಿಗೆ
ಆನಂದ ತುಂದಿಲನಾಗಿ ಬೀಗುವೆ
ಅಂದೊಂದು ದಿನವೇ ನನ್ನ ಹತ್ತಿರವೂ ಇದೆಬ್ಯಾಂಕ್
ಬ್ಯಾಲೆನ್ಸು
ಆದರದು ಎಲ್ಲರಂತಹದಲ್ಲದ ಡೆಬಿಟ್ ಬ್ಯಾಲೆನ್ಸು
ನನಗಿಷ್ಟವಾದ ಹಾಡು
ಒಂದರಿಂದ ಇಪ್ಪತ್ತರವರೆಗೆ ಉಂಡಾಟ
ಉಂಡಾಟಇಪ್ಪತ್ತೊಂದರಿಂದ ಮೂವತ್ತರವರೆಗೂ
ಭಂಡಾಟಸಂಬಲ ತೇದಿ ಒಂದರಿಂದ ಇಪ್ಪತ್ತರವರೆಗೆ
ಉಂಡಾಟ ಉಂಡಾಟ
ಫೇಸ್ಬುಕ್ ಕನ್ನಡ ಎಂದಾಗ ನನಗೆ ಮೊದಲು ನೆನಪಾಗುವ ತಳುಕು ಶ್ರೀನಿವಾಸ ಅವರು ಸದಾ ಸ್ಮರಣೀಯರು. 🌷🙏🌷
Respects to departed soul Taluku Srinivas
ಕಾಮೆಂಟ್‌ಗಳು