ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾತೃದೇವೋಭವ


 ಮಾತೃದೇವೋಭವ 

Maatru Devo Bhava

ಶಾಲೆಯಲ್ಲಿ ಹೆಚ್ಚುಕಲಿಯದಿದ್ದರೂ ಬದುಕಿನ ಶಾಲೆಯಲ್ಲಿ ಬಹಳಷ್ಟನ್ನು  ಕಲಿತು ತನ್ನ ಮಕ್ಕಳಿಗೂ, ತನ್ನ ಓರಗೆಯವರಿಗೂ ಕಲಿಸಿ, ತನ್ನ ಕಷ್ಟ ಏನೇ ಇದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಪ್ರತಿಕ್ಷಣ ಅವರಿಗಾಗಿಯೇ ಮಿಡಿದ ನಮ್ಮಮ್ಮ ತಾನು ಜನಿಸಿದ್ದು “ಮಹಾಲಯ ಅಮಾವಾಸ್ಯೆಯ ದಿನ” ಎಂದು ಬದುಕಿದ್ದಾಗ ಹೇಳುತ್ತಿದ್ದಳು. ಬಡತನದಿಂದ ತುಂಬಿದ್ದ ನಮ್ಮ ಮನೆಗೆ ಅನೇಕ ಬಡ ವಿದ್ಯಾರ್ಥಿಗಳು ವಾರಾನ್ನಕ್ಕೆ ಬಂದಾಗಲೂ ಅಮ್ಮ ಅನ್ನಪೂರ್ಣೆಯೇ ಆಗಿದ್ದಳು.  ತಾಯಿ ನೀಡಿದ  ಪ್ರೀತಿಗೆ  ಸಮಾನವಾದ  ಪ್ರೀತಿಯನ್ನು  ಮಕ್ಕಳಾದ  ನಾವು  ತಾಯಿಗೆ   ಹಿಂದಿರುಗಿಸುತ್ತೇವೆ ಎಂಬುದು  ಊಹಿಸಲಿಕ್ಕೂ  ಸಾಧ್ಯವಿಲ್ಲ.   ಆದರೆ, ಆ ಪ್ರೀತಿಯ ಅಮ್ಮಾ ಎಂಬ ಪಿಸು ಶಬ್ದದ ಇನಿದನಿಯ ಮಿಡಿತ ಸದಾ ಹೃದಯಾಂತರಾಳದಲ್ಲಿ ಮೀಟುತ್ತಿರುವಂತದ್ದು. ಆ ಅಂತರಂಗದ ಅಮ್ಮಾ ಎಂಬ ನಿನಾದಕ್ಕೆ ಮನ ಸದಾ  ಮಣಿದಿರುತ್ತದೆ.

Maa didn’t had much of opportunity to do schooling. But  in school of life she learnt herself and gave education to us - her children and so many around her. In spite of being in poverty, she didn’t leave any effort in making her children educated and self-reliant. She had the heart of feeding many a poor children, along with her own children who used to come to our home of poverty for weekly meal in rotation. Mom used to say she was born on ‘Mahalaya Amavasya Day’ when she was alive. It is quite obvious that children can never match mother’s love,  when it comes to giving back.  But nevertheless, our heart bows down to that whisper of deep within  called ‘Amma....ma.......ma....’ all the time.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ