ರಾಜೀವ್ ಮಲ್ಹೋತ್ರಾ
ರಾಜೀವ್ ಮಲ್ಹೋತ್ರಾ
ರಾಜೀವ್ ಮಲ್ಹೋತ್ರಾ ಒಬ್ಬ ಮಹತ್ವದ ಬರಹಗಾರರು. ಭಾರತದಲ್ಲಿ ಜನಿಸಿ ಅಮೆರಿಕದಲ್ಲಿ ನೆಲೆಸಿರುವ ಅವರು ಭಾರತೀಯತೆಯ ಕುರಿತಾಗಿ ಇತರ ದೇಶಿಗರ ಅಪಪ್ರಚಾರಗಳಿಗೆ ಸಮರ್ಥ ಪ್ರತಿಕ್ರಿಯಾತ್ಮಕ ರೂಪದಲ್ಲಿ ಬರಹಗಳನ್ನು ಮಾಡುತ್ತ ಬಂದಿದ್ದಾರೆ.
ರಾಜೀವ್ ಮಲ್ಹೋತ್ರಾ 1950ರ ಸೆಪ್ಟೆಂಬರ್ 15ರಂದು ದೆಹಲಿಯಲ್ಲಿ ಜನಿಸಿದರು. ಕಂಪ್ಯೂಟರ್ ಮತ್ತು ಟೆಲ್ಕಾಮ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅವರು 1995ರಲ್ಲಿ ತಮ್ಮ ವೃತ್ತಿಯನ್ನು ಬಿಟ್ಟು ಭಾರತೀಯ ಶಾಸ್ತೃಗಳನ್ನು ಕುರಿತ ಅಧ್ಯಯನಗಳನ್ನು ಪ್ರೇರಿಸುವ ಇನ್ಫಿನಿಟಿ ಫೌಂಡೇಷನ್ ಸ್ಥಾಪಿಸಿದರು.
ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್, ಬ್ಯಾಟಲ್ ಫಾರ್ ಸಂಸ್ಕೃತ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ಧರ್ಮದ ಕುರಿತು ಚಿತ್ರ ವಿಚಿತ್ರ ಸುದ್ಧಿ ಹರಡುತ್ತಿದ್ದವರಿಗೆ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ.
ತನ್ನ ಮಗು ಓದುತ್ತಿರುವ ಪ್ರಿನ್ಸ ಟನ್‍ನ ಶಾಲೆಯೊಂದು ಆತನಲ್ಲಿ ಭಾರತದ ಕುರಿತಂತೆ, ಹಿಂದೂ ಧರ್ಮದ ಕುರಿತಂತೆ ಜಿಜ್ಞಾಸೆ ಹುಟ್ಟು ಹಾಕಿತ್ತು. ಅವರು ಅಮೇರಿಕದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಗಳಿಗೆ ಹೋಗಲು ಆರಂಭ ಮಾಡಿದರು. ಅವರಿಗೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ಜುದಾಯಿಸಂನ ಬಗ್ಗೆ ರಬ್ಬಿಗಳು, ಬುದ್ಧ ಪಂಥದ ಕುರಿತಾಗಿ ಭಿಕ್ಷುಗಳು, ಇಸ್ಲಾಂನ ಬಗ್ಗೆ ಇಮಾಮ್ಗಳು ಮಾಡನಾಡಿದರೆ, ಹಿಂದೂ ಧರ್ಮದ ಕುರಿತಾಗಿ ಮಾತ್ರ ಹಿಂದೂಗಳೇ ಅಲ್ಲದ ಯನಿವರ್ಸಿಟಿಯ ಪ್ರೊಫೆಸರುಗಳು ಮಾಡನಾಡುತ್ತಿದ್ದರು. ಸಂಸ್ಕೃತವನ್ನು ತಿಳಿಯುವುದೆಂದರೆ ಹಿಂದೂ ಧರ್ಮದ ಸಾಹಿತ್ಯವನ್ನು ಅರೆದು ಕುಡಿದಿರುವಂತೆ ಎಂಬುದು ಅವರ ಭಾವನೆಯಾಗಿತ್ತು. ರಾಜೀವ್ ಮಲ್ಹೋತ್ರಾ ಅವರಿಗೆ ಇದು ಸರಿ ಕಾಣಲಿಲ್ಲ. ಅವರು ಅಮೇರಿಕನ್ನರ ತಪ್ಪು ಗ್ರಹಿಕೆಯ ಬಗ್ಗೆ ಪತ್ರಿಕೆಗಳಿಗೆ ಲೇಖನ ಬರೆಯಲಾರಂಭಿಸಿದರು. ಭಾರತನ್ನು ಅವಹೇಳನನ ಗೈಯುವ, ಹಿಂದೂ ಧರ್ಮವನ್ನು ತುಚ್ಛವಾಗಿ ಕಾಣುವ ಇತರ ದೇಶಿಗರ ಪ್ರಯತ್ನಕ್ಕೆ ತಡೆಗೋಡೆಯಾಗಿ ನಿಂತರು.
16ನೇ ವಿಶ್ವ ಸಂಸ್ಕೃತ ಸಮ್ಮೇಳನ ಬ್ಯಾಂಕಾಕಿನಲ್ಲಿ ನಡೆದಾಗ ಅಲ್ಲಿಗೆ ರಾಜೀವ್ ಮಲ್ಹೋತ್ರಾ ವಿಶೇಷ ಅತಿಥಿಯಾಗಿದ್ದರು. ಅಲ್ಲಿ ಅವರು ಮಾತನಾಡುತ್ತಾ ತಾವು ಮುಂದೆ ಬರೆಯಲಿರುವ ಕೃತಿಯಲ್ಲಿ ದಾಖಲಿಸಲಿರುವ ಅಂಶಗಳ ಕುರಿತು ಗಮನ ಸೆಳೆದರು. ಹೇಗಾದರೂ ಮಾಡಿ ಈ ಕೃತಿ ಹೊರಬರದಂತೆ ತಡೆಯಬೇಕೆಂಬ ಪ್ರಯತ್ನವೂ ನಡೆಯಿತು. ಇದ್ಯಾವುದಕ್ಕೂ ಅಲ್ಲಾಡದೆ ತಮ್ಮ ಗುರಿಯತ್ತ ಧೈರ್ಯದಿಂದ ಮುಂದೆ ಸಾಗಿದರು. ಈ ದಾರಿಯಲ್ಲಿ ಅವರಿಗೆ ಎದುರಾದ ತೊಡಕುಗಳು ಮಾತ್ರವಲ್ಲದೆ ವಿಶ್ವದಾದ್ಯಂತ ದೊರೆತ ಜನಬೆಂಬಲವೂ ಅಪಾರ.
ರಾಜೀವ್ ಮಲ್ಹೋತ್ರಾ ಅವರ ಪುಸ್ತಕಗಳು ಇಂತಿವೆ:
Breaking India: Western Interventions in Dravidian and Dalit Faultlines
Being Different: An Indian Challenge to Western Universalism;
Indra's Net: Defending Hinduism's Philosophical Unity
Battle for Sanskrit: Dead or Alive, Oppressive or Liberating, Political or Sacred?
ಕನ್ನಡವನ್ನೊಳಗೊಂಡಂತೆ ಅನೇಕ ಭಾಷೆಗಳಲ್ಲಿ ಈ ಕೃತಿಗಳು ಮೂಡಿವೆ.
On the birth day of writer Rajeev Malhotra



ಕಾಮೆಂಟ್‌ಗಳು