ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ಪಾರ್ವತಿ


 ಎನ್. ಪಾರ್ವತಿ 

ಪಾರ್ವತಿ ನಂಜುಂಡಸ್ವಾಮಿ ಬಹುಮುಖಿ ಪ್ರತಿಭಾವಂತರು.

ಸೆಪ್ಟೆಂಬರ್ 7 ಪಾರ್ವತಿ ಅವರ ಹುಟ್ಟುಹಬ್ಬ. ಬರವಣಿಗೆ ಅವರಿಗೆ ಖುಷಿಯಿಂದ ಒಲಿದ ಹವ್ಯಾಸ. ಫೇಸ್ಬುಕ್ ಎಂಬ ಜಾತ್ರೆಯಲ್ಲಿ ಅವರೊಳಗಿನ ಬರಹಗಾರ್ತಿಯನ್ನು ಕಂಡುಕೊಂಡಿದ್ದು ಅವರಿಗಾದ ಚೆಂದದ ಅಚ್ಚರಿ. ಚಿತ್ರಗಾರಿಕೆ ಇವರ ಮತ್ತೊಂದು ಆಪ್ತ ಹವ್ಯಾಸ. 

ಪಾರ್ವತಿ ಅವರ ಕವಿತೆಗಳು, ಚಿಂತನೆಗಳು, ಚಿತ್ರಗಾರಿಕೆ, ಛಾಯಾಗ್ರಹಣ, ಪ್ರಕೃತಿ ಪ್ರೇಮ ಇವೆಲ್ಲ ಬಹುಮುಖಿ ರಮ್ಯತೆಯನ್ನು ಪ್ರತಿಫಲಿಸುತ್ತವೆ. ಅವರ ಒಂದು ಚಿತ್ರವನ್ನು ಗಮನಿಸಿದಾಗ ಅವರು ಬಿ. ವಿ. ಕಾರಂತರ ಮಾರ್ಗದರ್ಶನದಲ್ಲಿ ಅಭಿನಯದಲ್ಲೂ ಪ್ರವೇಶಿಸಿದ್ದರು ಅನಿಸುತ್ತದೆ. ಅವರ ವೈಯಕ್ತಿಕ ಚಿತ್ರಗಳನ್ನು ನೋಡುವಾಗಲೂ ಅಲ್ಲೊಂದು ಸೃಜನಶೀಲಯುಕ್ತ ನೋಟ ಮತ್ತು ಅಭಿವ್ಯಕ್ತಿಗಳ ಮಿನುಗು ಪ್ರತಿಫಲಿಸುವಂತಿದೆ.

ಪಾರ್ವತಿ ನಂಜುಂಡಸ್ವಾಮಿ ಅವರ ಒಂದು ಪುಟ್ಟ ಕವಿತೆ ಇಂತಿದೆ:

ತಾಯ ಗರ್ಭದಿಂದ ಎದ್ದು ಬಂದು
ಮನೆ ಎದುರು ನಿಂತಿದ್ದೇನೆ
ರಾವಣನಿಗೆ ಭಿಕ್ಷೆ ನೀಡಲು!

ಮನೆಯ ಆಚೆ ಬರಬೇಕಾದವರು ಯಾರು?!
ಗೆರೆ ದಾಟಬೇಕಾದವರು ಯಾರು!?

ಕೊಟ್ಟು-ಕೊಳ್ಳಲು
ಗೆರೆಯ ದಾಟಲೇ ಬೇಕೆ?

ಅಡಿಗಡಿಗೂ 
ಕೋಟಿ ಗಡಿಗಳ 
ದಾಟಿ ಬಂದವಳು ನಾನು!

ದಾಟುವುದಿಲ್ಲ
ಇನ್ನು
ದಾಟಿಸುವುದೂ ಇಲ್ಲ!

ಆತ್ಮೀಯರಾದ ಪಾರ್ವತಿ ನಂಜುಂಡಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Parvathi NanjundaSwamy 🌷🎁🎂🎉🎊🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ