ಚಕ್ರವರ್ತಿ ರಾಮಗೋಪಾಲಾರ್ಯ
ಚಕ್ರವರ್ತಿ ರಾಮಗೋಪಾಲಾರ್ಯ
ಚಕ್ರವರ್ತಿ ರಾಮಗೋಪಾಲಾರ್ಯ, ಪತ್ರಿಕಾಲೋಕದಲ್ಲಿ, ಕಿರುತೆರೆ ಲೋಕದಲ್ಲಿ ಸಿನಿಮಾಲೋಕದಲ್ಲಿ, ವನ್ಯಜೀವಿಗಳ ಛಾಯಾಗ್ರಹಣದಲ್ಲಿ, ವ್ಯಂಗ್ಯಚಿತ್ರ ಕಲೆಯಲ್ಲಿ ಹೀಗೆ ಬಹುಮುಖಿಯಾಗಿ ಬಹಳಷ್ಟು ಕೆಲಸ ಮಾಡಿದವರು.
ಅಕ್ಟೋಬರ್ 16 ಚಕ್ರವರ್ತಿ ರಾಮಗೋಪಾಲಾರ್ಯ ಅವರ ಜನ್ಮದಿನ. ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಓದಿದ ನಂತರದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎರಡನೇ ರ್ಯಾಂಕ್ ಸಾಧನೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು.
ರಾಮಗೋಪಾಲಾರ್ಯ ಅವರು ಪ್ರಸಕ್ತದಲ್ಲಿ 'ಕನ್ನಡ ಟೈಮ್ಸ್' ಮಾಸಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ಇವರು ಮುದ್ರಣ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ, ಗಣ್ಯಸಾಧಕರಿಂದ ಜನಸಾಮಾನ್ಯನವರೆಗೆ 600ಕ್ಕೂ ಹೆಚ್ಚು ಅಮೂಲ್ಯ ಸಂದರ್ಶನಗಳನ್ನು ಮಾಡಿದ್ದಾರೆ. ಪತ್ರಿಕಾಲೋಕವಲ್ಲದೆ, ಸಿನಿಮಾ ಮತ್ತು ಕಿರು ತೆರೆ ರಾಮಗೋಪಾಲಾರ್ಯ ಅವರ ಪ್ರಮುಖ ವೃತ್ತಿ ಕ್ಷೇತ್ರಗಳು. ಸಹ ನಿರ್ದೇಶನ (Associate Director), ಚಿತ್ರಕಥೆ ರಚನೆ, ವನ್ಯ ಜೀವಿ ಛಾಯಾಗ್ರಹಣ, ಸಾಂಸ್ಕೃತಿಕ ಛಾಯಾಗ್ರಹಣ, ಸಂಗೀತ, ಕಲೆ, ಪ್ರಕೃತಿ ಪ್ರೇಮ ಹೀಗೆ ಅವರ ಆಸಕ್ತಿಗಳ ಕ್ಷೇತ್ರ ಅನಂತವಾದದ್ದು. ಎಲ್ಲ ರೀತಿಯ ಸಂಗೀತವನ್ನೂ ಆರಾಧಿಸುವ ಇವರು ಸ್ವಸಂತೋಷಕ್ಕಾಗಿ ವೀಣೆ ನುಡಿಸುತ್ತಾರೆ.
ರಾಮಗೋಪಾಲಾರ್ಯ ಅವರು ದೂರದರ್ಶನದ 'ಲಕ್ಷ್ಯಾ - ದ ಲಿವಿಂಗ್ ಪ್ಲಾನೆಟ್' ಮತ್ತು 'ಕಾಲಚಕ್ರ' ಸರಣಿಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಜವಾಬ್ದಾರಿ ನಿರ್ವಹಿಸಿದ್ದರು. ಡಿಸ್ಕವರಿ ಚಾನೆಲ್ಲಿನ Mahindra Adventures”, “Queens of Gir”, “Dual Survior” ಸಾಕ್ಷ್ಯಚಿತ್ರಗಳಿಗೆ ಚಿತ್ರಕಥಾ ಅನುವಾದಕರಾಗಿದ್ದರು. ಈTvಯ ಪ್ರಸಿದ್ಧ ಸವಿರುಚಿ, ನಮ್ಮೂರ ಯುವರಾಣಿ ರಿಯಾಲಿಟಿ ಕಾರ್ಯಕ್ರಮಗಳ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದರು. ಈTvಯ ಧಾರಾವಾಹಿಗಳಾದ ಪದ್ಮಜಾ ರಾವ್ ನಿರ್ದೇಶನದ 'ಶಿಖರ', ವೈಶಾಲಿ ಕಾಸರವಳ್ಳಿ ನಿರ್ದೇಶನದ 'ಮೂಕರಾಗ' ಮತ್ತು 'ಮೂಡಲ ಮನೆ' ಧಾರಾವಾಹಿಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು. ಶ್ರೀ ಶಂಕರ ಟಿವಿಯ ಭಜನ್ ಸಾಮ್ರಾಟ್, ನಮಸ್ತೆ ಶಂಕರ, ಸುವಾಸಿನಿ ರಿಯಾಲಿಟಿ ಶೋಗಳಿಗೆ ಪ್ರೋಗ್ರಾಮ್ ಪ್ರೊಡ್ಯೂಸರ್ ಆಗಿದ್ದರು. ಉದಯ ಟಿವಿ ವಾಹಿನಿಯ ಸತ್ಯಕತೆ, ಸೀರಿಯಲ್ ದಿಬ್ಬಣ ಮತ್ತು ಕೈರುಚಿ ರಿಯಾಲಿಟಿ ಶೋಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು.
ರಾಮಗೋಪಾಲಾರ್ಯ ಅವರು ಪ್ರತಿಷ್ಟಿತ ಕಾರ್ಯಕ್ರಮ ನಿರ್ಮಾಣ ಸಂಸ್ಥೆ “Miditech” ನಿರ್ಮಾಣಗಳಾದ “Take Off” reality show for BBC world, Airtel Scholar Hunt”, reality show for NDTV, “Super Twins”, “Swayamvara”, “ಕನ್ನಡದ ಕೋಟ್ಯಾಧಿಪತಿ” ಸುವರ್ಣಾ ಟಿವಿ ಕಾರ್ಯಕ್ರಮಗಳು ಹಾಗೂ ZEE Tvಯ 'ಬದುಕು ಜಟಕ ಬಂಡಿ', 'ಸರಿಗಮಪ', 'ಶ್ರೀಮತಿ ಕರ್ನಾಟಕ' ಕಾರ್ಯಕ್ರಮಗಳಿಗೆ ಅಸೋಸಿಯೇಟ್ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇವರು 'ಈTv ಬಾಲ ಜಗತ್'ನ ಅನೇಕ ಕಾರ್ಟೂನ್ ಚಿತ್ರಗಳಿಗೆ ಕನ್ನಡದ ಅನುವಾದಕರಾಗಿದ್ದಾರೆ. ಇವರು '1857' ಚಲನಚಿತ್ರದ ಸಹಾಯಕ ನಿರ್ದೇಶಕರಾಗಿದ್ದರು. 'ಮಿನಿಸ್ಟರ್ ವೈಟ್, ಧೋತಿ ಅಂಡ್ ಶರ್ಟ್ಸ್' ಜಾಹೀರಾತು ಚಿತ್ರದ ಸಲಹೆಗಾರರೂ ಮತ್ತು ಅನುವಾದಕರೂ ಆಗಿದ್ದರು. ಇವರು ಕೆಎಮ್ಎಫ್, ಆದಿಚುಂಚನಗಿರಿ ಮೆಡಿಕಲ್ ಕಾಲೇಜುಗಳು, ಜಿಂದಾಲ್ ಅಲ್ಯೂಮಿನಿಯಮ್, ಜೆಎಸ್ಎಸ್ ಮೆಡಿಕಲ್ ಕಾಲೇಜುಗಳು, ಟೈಟನ್ ವಾಚಸ್ ಸಾಕ್ಷ್ಯಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಮತ್ತು ಚಿತ್ರಕಥೆಗಾರರಾಗಿ ಕೆಲಸ ಮಾಡಿದ್ದಾರೆ. ಇವರು ವನ್ಯಜೀವಿ ಸಂಬಂಧಿತವಾಗಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ "ನಮ್ಮ ಬಂಡೀಪುರ" ಸಾಕ್ಷ್ಯ ಚಿತ್ರಕ್ಕೆ ಲೈನ್ ಪ್ರೊಡ್ಯೂಸರ್ ಆಗಿದ್ದರು. ಇವರ ಚಿತ್ರಗಳು ನ್ಯಾಷನಲ್ ಜಿಯಾಗ್ರಫಿಯ ಅಧಿಕೃತ ಎಫ್ಬಿ ಪುಟದಲ್ಲಿ ಮೂಡಿಬಂದಿವೆ.
ರಾಮಗೋಪಾಲಾರ್ಯ ಅವರ ಛಾಯಾಗ್ರಹಣದ ಚಿತ್ರಗಳು ಇಂಡಿಯನ್ ಎಕ್ಸ್ಪ್ರೆಸ್, ಕನ್ನಡ ಪ್ರಭ, ಸುಧಾ, ವಿಜಯಕರ್ನಾಟಕ ಮುಂತಾದ ನಿಯಯಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರ ವ್ಯಂಗ್ಯಚಿತ್ರಗಳು ಪ್ರಜಾವಾಣಿ, ತರಂಗ ನಿಯತಕಾಲಿಕಗಳಲ್ಲಿ ಮೂಡಿವೆ. ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದ ಕಾರ್ಟೂನ್ ಸ್ಪರ್ಧೆಯಲ್ಲಿ ಇವರಿಗೆ ತೃತೀಯ ಬಹುಮಾನ ಸಂದಿತ್ತು.
ರಾಮಗೋಪಾಲಾರ್ಯ ಅವರು ಅಭಿನಯ ತರಂಗದ ಚಿತ್ರನಾಟಕ ಶಿಬಿರದಲ್ಲಿಯೂ ಭಾಗಿಯಾಗಿದ್ದರು. ರಂಗ ವೈಶಾಖ 1995 ನಾಟಕ ಸ್ಪರ್ಧೆಯಲ್ಲಿ ಇವರಿಗೆ ಪ್ರಸಾಧನ ಕಲೆಗಾಗಿ ಬಹುಮಾನ ಸಂದಿತ್ತು. ಇವರು ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿದ ಚಲನಚಿತ್ರ ಕಲಿಕಾ ತರಬೇತಿ ಕಾರ್ಯಕ್ರಮದ ಸಂಚಾಲಕರಾಗಿದ್ದರು. 1997ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಂವಹನಾ ಅಧಿಕಾರಿಗಳಾಗಿದ್ದರು.
ರಾಮಗೋಪಾಲಾರ್ಯ ಅವರು ಪ್ಯಾರಾ ಸೈಲಿಂಗ್ನಲ್ಲಿ ತರಬೇತಿ ಪಡೆದಿದ್ದು ಹತ್ತಾರು ಪ್ಯಾರಾ ಸೈಲಿಂಗ್ ಉಡಾವಣೆಗಳನ್ನು ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಕೇಂದ್ರದಿಂದ ನೆರವೇರಿಸಿದ್ದಾರೆ. ಇವರು ಕೇಂದ್ರ ಸಂಪರ್ಕ ಖಾತೆಯಿಂದ ಹ್ಯಾಮ್ ರೇಡಿಯೋ ಪರವಾನಗಿಯಾದ VU3PAH ಗಳಿಸಿದ್ದಾರೆ.
ರಾಮಗೋಪಾಲಾರ್ಯ ಅವರಿಗೆ ವೃತ್ತಿಬಾಂಧವ್ಯದಲ್ಲಿ ಸಾಧಕರೊಂದಿಗಿನ ಇರುವ ಆಪ್ತ ಒಡನಾಟ ಅಪಾರ. ಇವರ ಮಾತುಕತೆ, ನಡೆ ನುಡಿ, ಸ್ನೇಹಪರತೆ ಎಲ್ಲವೂ ಮಧುರ.
ಆತ್ಮೀಯರೂ, ಸಾಧಕರೂ, ಮಹಾನ್ ಪ್ರತಿಭಾವಂತರೂ ಆದ, ಸಹೃದಯಿ ಚಕ್ರವರ್ತಿ ರಾಮಗೋಪಾಲಾರ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Chakravarthy Ramagopalarya Sir 🌷🙏🌷
😍
ಪ್ರತ್ಯುತ್ತರಅಳಿಸಿನಿಮ್ಮ ಸಾಧನೆಯ ಕೀರ್ತಿಯು ಮೇರು ಶಿಖರದಂತೆ ಕಂಗೊಳಿಸಲಿ ಎಂದು ಹಾರೈಸುವ ನಿಮ್ಮ ಮಿತ್ರ
ಪ್ರತ್ಯುತ್ತರಅಳಿಸಿಶ್ರೀಯುತ ರಾಮಗೋಪಾಲ ಚಕ್ರವರ್ತಿ ಅವರು ವಿದ್ಯಾ ವಿನಯ ಸಂಪನ್ನರು. ವಿವಿಧ ಕಲಾಕ್ಷೇತ್ರಗಳಲ್ಲಿ ನೈಪುಣ್ಯತೆಯನ್ನು ಪಡೆದಿರುವ ಇವರು ಯಾವುದೇ ಪುರಸ್ಕಾರಗಳ ಮರೀಚಿಕೆಯ ಬೆನ್ನುಹತ್ತದೆ ಎಲೆಮರೆಯ ಹೃದಯಂಗಮ ಫಲರತ್ನವಾದ ಸಹೃದಯರು. ತುಂಬಿದ ಕೊಡಕ್ಕೆ ಅನ್ವರ್ಥರಾದವರು. ಶ್ರೀಹಿಮವದ್ಗೋಪಾಲಸ್ವಾಮಿಯವರ ಅನುಗ್ರಹ ಅವರ, ಅವರ ಧರ್ಮಪತ್ನಿ ಸುಪ್ರತ್ರರ ಮೇಲೆ ನಿರಂತರವಾಗಿರಲಿ ಎಂಬ ಪ್ರಾರ್ಥನೆ 🙏🙏🙏🙏
ಪ್ರತ್ಯುತ್ತರಅಳಿಸಿ