ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರ್ಜುನ್ ಕುಮಾರ್



 ಬೆಂಗಳೂರು ಅರ್ಜುನ್ ಕುಮಾರ್


ಬೆಂಗಳೂರು ಅರ್ಜುನ್ ಕುಮಾರ್ ಅಂತರರಾಷ್ಟ್ರೀಯ ಖ್ಯಾತಿಯ ಮೃದಂಗ ವಿದ್ವಾಂಸರು. 

ನವಂಬರ್ 11  ಬೆಂಗಳೂರು ಅರ್ಜುನ್ ಕುಮಾರ್ ಅವರು  ಹುಟ್ಟಿದ ದಿನ. ಹಿರಿಯ ಹಾಗೂ ಗೌರವಾನ್ವಿತ ಸಂಗೀತಗಾರರಲ್ಲಿ ಒಬ್ಬರಾದ ಶ್ರೀಯುತರು ಮೃದಂಗ ವಾದನದಲ್ಲಿ ಐದು ದಶಕಗಳಿಂದ  ಅನೇಕ ಹಿರಿಯ ಕಲಾವಿದರಿಗೆ ಪಕ್ಕವಾದ್ಯ ದಲ್ಲಿ ಸಹಕರಿಸಿದ್ದಾರೆ. ಮೃದಂಗ‌ ಕಲಾವಿದರ  ಕುಟುಂಬದಲ್ಲಿ ಜನಿಸಿದ ಇವರು  5ನೇ ವಯಸ್ಸಿನಿಂದಲೇ ತಮ್ಮ ತಂದೆ ವಿದ್ವಾನ್  ಅರ್ಜುನನ್ ಬಳಿ ಅಭ್ಯಾಸ ಪ್ರಾರಂಭಿಸಿದರು. ನಂತರ ವಿದ್ವಾನ್ ಟಿ.ಎ.ಎಸ್. ಮಣಿ ಅವರಲ್ಲಿ ಅಭ್ಯಾಸ ಮುಂದುವರಿಸಿ ಬಾಲ್ಯದಲ್ಲೇ ಅನೇಕ ಹಿರಿಯ ವಿದ್ವಾಂಸರಿಗೆ ಪಕ್ಕವಾದ್ಯ ನುಡಿಸಿದರು.  ನಂತರ ಮೇರು  ಕಲಾವಿದರಾದ ಪದ್ಮವಿಭೂಷಣ ಉಮಾಯಾಲಪುರಂ ಕೆ ಶಿವರಾಮನ್ ಅವರ ಬಳಿ ಅಭ್ಯಸಿಸಿದ ಇವರು  ದೇಶ ವಿದೇಶಗಳಲ್ಲಿ  ಮೃದಂಗವಾದನದ  ಸೊಬಗನ್ನು ಹರಡುತ್ತ ಬಂದಿದ್ದಾರೆ. 

ಸೊಗಸಾದ ನಾದ, ಕರಾರುವಕ್ಕಾದ ಲೆಕ್ಕಾಚಾರ, ಸೊಬಗಿನ ನುಡಿಸಾಣಿಕೆಯಿಂದ ಯಾವುದೇ ಕಚೇರಿ ಕಳೆಗಟ್ಟಿಸುವ ಕುಮಾರ್ ಅವರು  ನಾಡಿನ ಹೆಮ್ಮೆಯ ಕಲಾವಿದರಲ್ಲೊಬ್ಬರಾಗಿದ್ದಾರೆ. ಇವರ ನಿರ್ದೇಶನದ  "ಸ್ವರ ಲಯ ಸಮ್ಮೇಳನ" ವಾದ್ಯವೃಂದ‌ ಶಾಸ್ತ್ರೀಯ ಸಂಗೀತದ  ಅನೇಕ ವೈಶಿಷ್ಟ್ಯ ಪೂರ್ಣ  ರಚನೆಗಳನ್ನು ಪ್ರಸ್ತುತ ಪಡೆಸುತ್ತಿದೆ. ಇವರು ಅಧ್ಯಕ್ಷ ರಾಗಿರುವ "ಅನುಭೂತಿ"  ಟ್ರಸ್ಟ್‌ ಕರ್ನಾಟಕ ಸಂಗೀತದ ಸೇವೆಗಾಗಿ ಅನೇಕ ವಿಶಿಷ್ಟ ಯೋಜನೆಗಳನ್ನು  ಕಾರ್ಯರೂಪಕ್ಕೆ ತಂದಿದೆ. ಇವರ ಅನೇಕ‌ ಶಿಷ್ಯರು ದೇಶ ವಿದೇಶಗಳಲ್ಲಿ ಮೃದಂಗದ ನಾದವನ್ನು ಪಸರಿಸುತ್ತಿದ್ದಾರೆ. 

1979 ರಲ್ಲಿ ಶ್ರೀಮದ್ ಆಂಡವನ್ ಸ್ವಾಮಿ ಯವರಿಂದ "ಮೃದಂಗ ಪುಂಗವ",  1981ರಲ್ಲಿ ಬೆಂಗಳೂರು ಗಾಯನ ಸಮಾಜದ  ಅತ್ಯತ್ತಮ ಮೃದಂಗ ವಾದಕ, 1985ರಲ್ಲಿ ಅನಂತ ಕೃಷ್ಣ ಸ್ವಾಮಿ ಟ್ರಸ್ಟ್‌ ನಿಂದ  "ಮೃದಂಗ ಯುವ ಜ್ಯೋತಿ ",  ದತ್ತ ಪೀಠದ ಆಸ್ಥಾನ ವಿದ್ವಾನ್, 2019ರಲ್ಲಿ  ಇಂಡಿಯನ್  ಫೈನ್ ಆರ್ಟ್ಸ್ ಸೊಸೈಟಿ ನೀಡುವ ಡಾ. ಉಮಾಯಾಲಪುರಂ ಕೆ ಶಿವರಾಮನ್ ಪ್ರಶಸ್ತಿ ಮುಂತಾದ ಅನೇಕ‌‌ ಗೌರವಗಳು ಅರ್ಜುನ್ ಕುಮಾರ್ ಅವರಿಗೆ ಸಂದಿವೆ.

ಕೃತಜ್ಞತೆ: ಲೇಖಕಿ ಜಾನಕಿ ಮುರಳಿ ಅವರಿಗೆ

On the birthday of great Percussionist Bengaluru Arjun Kumar
ಲೇಖನ: ಜಾನಕಿ ಮುರಳಿ Janaki Muraliಅರ್ಜು

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ