ಗೀತಗೋವಿಂದ17
ಜಯದೇವಕವಿಯ ಗೀತಗೋವಿಂದ
*ಸಂಕ್ಷಿಪ್ತ ಭಾವ*
ಅಷ್ಟಪದಿ 16
ಹರಿಯ ಸಂಗದಲ್ಲಿದ್ದು ಸುಖಪಟ್ಟವರಿಗೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲವೆನ್ನುವುದನ್ನು ರಾಧೆಯು ಆ ತನ್ನ ಕಾಲ್ಪನಿಕ ಸುಂದರಿಯನ್ನು ಕುರಿತು ಹೇಳುವ ಮಾತುಗಳು ಇಲ್ಲಿವೆ.
ಚಿಗುರಿನ ಹಾಸಿಗೆಯಲ್ಲಿ ವನಮಾಲಿಯೊಡನೆ ವಿಹರಿಸಿದ ಅವಳು ಬಿಸಿಗಾಳಿಯಲ್ಲಿಯೂ ಬೇಯುವುದಿಲ್ಲ. ತಾವರೆಯಂತಹ ಮುರಾರಿಯೊಡನೆ ನಲಿದವಳು ಮದನನ ಬಾಣಗಳಿಂದ ನೋಯಳು.
ಅಮೃತದಂತಹ ಸವಿಯಾದ ಮೆಲ್ನುಡಿಗಳಲ್ಲಿ ಮಿಂದವಳು ಚಂದನದ ತಂಪಿಗಿಂತ ಹಿತವಾಗಿರುವಳು. ತಾವರೆಯ ಕರಕಮಲಗಳನ್ನು ಹೊಂದಿದವನೊಡನೆ ಇರುವವಳಿಗೆ ಹಿಮಕರಗಳ ಕಿರಣ ಬೇಕೆನಿಸದು.
ನೀಲಮೇಘಶ್ಯಾಮನೊಡನೆ ಬೆರೆತವಳು ನನ್ನ ಹಾಗೆ ಕಡು ವಿರಹದಿಂರ ಬೇಯುವುದಿಲ್ಲ. ಚಿನ್ನದ ಉಡುಗೆಯನ್ನು ತಳೆದವನನ್ನು ಬೆರೆತವಳು ಯಾರ ಹಾಸ್ಯದ ಮಾತುಗಳನ್ನೂ ಪರಿಗಣಿಸುವುದಿಲ್ಲ.
ಸಕಲ ಭುವಿಯ ಜನರಲ್ಲಿ ಸುಂದರನಾದವನನ್ನು ಬೆರೆತವಳು ಎಂದಿಗೂ ರೋಗ ರುಜಿನಗಳ ಬಾಧೆಯಲ್ಲಿ ದೈನ್ಯಪಡುವುದಿಲ್ಲ.
ಜಯದೇವನು ರಚಿಸಿದ ಈ ಮಾತುಗಳಿಂದ ಹರಿಯು ಜನರ ಹೃದಯಗಳಲ್ಲಿ ಪ್ರವೇಶಿಸಲಿ.
( ಇಲ್ಲಿಗೆ ಏಳನೆಯ ಸರ್ಗ ಮುಗಿಯಿತು )
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೧೬
ಆವಳು ಬೆರೆದಳು ಸಖಿ ವನಮಾಲಿಯೊಳು
ಅನಿಲವಿಕಂಪಿತ ಕುವಲಯ ನಯನನೊಳು
ಬೇಯಳು ಅವಳಹ ಕಿಸಲಯ ಶಯನನೊಳು. 1
ತಾವರೆಯಂದದ ಮೊಗದ ಮುರಾರಿಯೊಳು
ನಲಿದವಳುರಿಯಳನಂಗನ ಬಾಣದೊಳು. 2
ಸೊದವೊಲು ಸವಿಯಹ ಮೆಲುನುಡಿ ನುಡಿವನೊಳು
ಬೆರೆದವಳುರಿಯಳು ಚಂದನದಣ್ಪಿನೊಳು. 3
ತಾವರೆ ತೆರ ಕರಚರಣಗಳಿರುವನೊಳು ಬೆರೆವವಳುರುಳಳು ಹಿಮಕಣ ಕಿರಣನೊಳು. 4
ನೀರಿನ ಮೋಡದೊಲೆಸೆವನ ಬೆರೆದವಳು
ನನ್ನವೊಲೆದೆಯೊಡೆಯಳು ಕಡು ವಿರಹದೊಳು. 5
ಚಿನ್ನದ ಒರೆಯೊಲು ಉಡೆಯನು ತಳೆದನೊಳು
ಬೆರೆದಳು ಸುಯ್ಯಳು ಪರಿಜನ ಹಾಸ್ಯದೊಳು. 6
ಸಕಲ ಭುವನಜನ ಸುಂದರ ತರುಣನೊಳು
ಬೆರೆದವನುರಿಯಳು ರುಜೆಯೊಳು ದೈನ್ಯದೊಳು. 7
ಶ್ರೀ ಜಯದೇವನು ರಚಿಸಿದ ವಚನದೊಳು
ಹರಿ ಸಹ ಒಳ ಹೊಗಲೀ ಜನ ಹೃದಯದೊಳು.8
*ಮೂಲಭಾಗ*
ಗೀತಂ-ಅಷ್ಟಪದೀ-16-ನಾರಾಯಣ ಮದನಾಯಾಸಮ್
ದೇಶವರಾಡೀರಾಗ, ರೂಪಕತಾಲ
ಅನಿಲತರಲಕುವಲಯನಯನೇನ
ನ ಸಾ ಕಿಸಲಯಶಯನೇನ
ಯಾ ರಮಿತಾ ವನಮಾಲಿನಾ ||ಧ್ರುವಮ್|| ೧
ವಿಕಸಿತಸರಸಿಜಲಲಿತಮುಖೇನ ಸ್ಪುಟತಿ ಸಾ ಮನಸಿಜ ವಿಶಿಖೇನ. ೨
ಅಮೃತಮಧುರಮೃದುತರವಚನೇ ನ
ಜ್ವಲತಿ ಸಾ ಮಲಯಜಪವನೇನ. ೩
ಸ್ಥಲಜಲರುಹರುಚಿಕರಚರಣೇನ
ದಹತಿ ಸಾ ಹಿಮಕರಕಿರಣೇನ. ೪
ಸಜಲಜಲದಸಮುದಯರುಚಿರೇಣ ದಲತಿ ಸಾ ಹೃದಿ ವಿರಹಭರೇಣ. ೫
ಕನಕನಿಕಷ ರುಚಿಶುಚಿವಸನೇನ
ಶ್ವಸಿತಿ ನ ಸಾ ಪರಿಜನಹಸನೇನ. ೬
ಸಕಲಭುವನಜನವರತರುಣೇ
ವಹತಿ ಸಾ ರುಜಮತಿಕರುಣೇನ. ೭
ಶ್ರೀಜಯದೇವಭಣಿತವಚನೇನ ಪ್ರವಿಶತು ಹರಿರಪಿ ಹೃದಯಮನೇನ ೮
ಮನೋಭವಾನಂದನ ಚಂದನಾನಿಲ ಪ್ರಸೀದ ರೇ ದಕ್ಷಿಣ ಮುಂಚ ವಾಮತಾಂ ಕ್ಷಣಂ ಜಗತ್ಪಾಣ ವಿಧಾಯ ಮಾಧವಂ ಪುರೋ ಮಮ ಪ್ರಾಣಹರೋ ಭವಿಷ್ಯಸಿ ೯
ರಿಪುರಿವ ಸಖೀಸಂವಾಸೋsಯಂ ಶಿಖೀವ ಹಿಮಾನಿಲೋ
ವಿಷಮಿವ ಸುಧಾರಶ್ಮಿರ್ಯಸ್ಮಿಂದುನೋತಿ ಮನೋಗತೇ
ಹೃದಯಮದಯೇ ತಸ್ಮಿನ್ನೇವಂ ಪುನರ್ವಲತೇ ಬಲಾ_
ತುವಲಯದೃಶಾಂ ವಾಮಃ ನಿಕಾಮನಿರಂಕುಶಃ ೧೦
ಬಾಧಾಂ ವಿದೇಹಿ ಮಲಯಾನಿಲ ಪಂಚಬಾಣ
ಪ್ರಾಣಾನ್ ಗೃಹಾಣ ನ ಪುನರಾಶ್ರಯಿಷ್ಯೇ
ಕಿಂ ತೇ ಕೃತಾಂತಭಗಿನೀ ಕ್ಷಮಯಾ ತರಂಗೈ_
ರಂಗಾನಿ ಸಿಂಚ ಶಾಮೃತು ದೇಹದಾಹಃ ೧೧
ಪ್ರಾತರ್ನಿಲನಿಚೋಲಮಚ್ಯುತಮುರ: ಸಂವೀತಪೀತಾಂಬರಂ ರಾಧಾಯಾಶ್ಚಕಿತಂ ವಿಲೋಕ್ಯ ಹಸತಿ ಸ್ವೈರಂ ಸಖೀಮಂಡಲೇ ವ್ರೀಡಾಚಂಚಲಮಂಚಲಂ ನಯನಯೋರಾಧಾಯ ರಾಧಾನನೇ ಸ್ವಾದುಸ್ಮೇರಮುಖೋsಯಮಸ್ತು ಜಗದಾನಂದಾಯ ನಂದಾತ್ಮಜಃ ೧೨
|| ಇತಿ ಗೀತಗೋವಿಂದೇ ಮಹಾಕಾವ್ಯೇ ವಿಪ್ರಲಬ್ಧಾ ವರ್ಣನೇ ನಾಗರ ನಾರಾಯಣೋ ನಾಮ ಸಪ್ತಮ ಸರ್ಗ: ||
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು