ಗೀತಗೋವಿಂದ18
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 17
*ಸಂಕ್ಷಿಪ್ತ ಭಾವ*
ರಾಧೆಯ ಕೋಪ ಇನ್ನೂ ಹೋಗಿಲ್ಲ. ಮಾಧವನು ಬಂದು ಎದುರಿಗೆ ನಿಂತಿದ್ದರೂ ಅವಳು ಅವನನ್ನು ಅನುಮಾನಿಸುವ ಪ್ರಸಂಗ ಇಲ್ಲಿದೆ.
ಹೋಗು ಹರಿ, ಹೋಗು ಮಾಧವ, ಹೊರಟುಹೋಗು ಕೇಶವ..ನಿನ್ನ ಕಣ್ಮನಗಳ ದುಗುಡವನ್ನು ಯಾರು ಪರಿಹರಿಸುತ್ತಾರೆಯೋ ಅವರ ಬಳಿಗೇ ಹೋಗು. ರಾತ್ರಿಯೆಲ್ಲ ಎಚ್ಚರವಾಗಿದ್ದೆಯೆಂಬುದನ್ನು ನಿನ್ನ ಕಣ್ಣುಗಳ ಕೆಂಪು ಹೇಳುತ್ತಿದೆ. ನಿನ್ನ ಅನುರಾಗವನ್ನು ಅವಳಿಗೆ ಸೂಸಿರುವುದನ್ನು ಹೇಳುತ್ತಿದೆ.
ನಿನ್ನ ನೀಲಿಯ ತನುವಿನಲ್ಲಿ ಅವಳ ಕಣ್ಣ ಕಾಡಿಗೆಯು ಕೂಡಿರುವುದು ಗೊತ್ತಾಗುತ್ತಿದೆ. ಅದರಂತೆ ನಿನ್ನ ತುಟಿಗಳೂ ಸಹ ಅವಳ ತುಟಿಯ ಕೆಂಪುಬಣ್ಣವನ್ನು ತಾಳಿವೆ.
ನಿನ್ನ ಮೈಯಲ್ಲಿ ಅಲ್ಲಲ್ಲಿ ತೋರುತ್ತಿರುವ ಗುರುತುಗಳು ರತಿಜಯಪತ್ರಗಳೆಂದು ತಿಳಿಯುತ್ತಿದೆ. ಹಸಿರು ಶಿಲೆಯಲ್ಲಿ ಚಿನ್ನದಿಂದ ಕೆತ್ತಿದಂತೆ ಎದ್ದು ಕಾಣುತ್ತಿವೆ.
ಅವಳು ಪಾದಗಳಿಗೆ ಹಚ್ಚಿಕೊಂಡ ಮದರಂಗಿಯ ಕೆಂಪು ನಿನ್ನೆದೆಯಲ್ಲಿ ಮೂಡಿಹುದು. ಮದನನ ಚಿಗುರಿನ ಪರಿವಾರದಂತೆ ಕೆಂಪಾಗಿ ತೋರುವುದು.
ನಿನ್ನ ತುಟಿಗಳಲ್ಲಿ ಉಂಟಾಗಿರುವ ಹಲ್ಲುಗಳ ಗಾಯಗಳು ನನ್ನನ್ನು ನೋಯಿಸುತ್ತಿವೆ. ನನ್ನ ಮುಂದೆ ನಿನ್ನದೇನೂ ತಪ್ಪಿಲ್ಲವೆಂದು ಹೇಗೆ ಹೇಳುತ್ತಿಹೆ?
ನಿನ್ನ ಹೊರಗಿನ ಮೈಯಿನ ಕಪ್ಪಿನಂತೆ ಒಳಗಿನ ಮನಸ್ಸೂ ಕಪ್ಪಾಗಿದೆ. ನಿನ್ನನ್ನು ಅನುಸರಿಸಿ ಬರುವ ಮದನಜ್ವರ ಪೀಡಿತರನ್ನು ವಂಚಿಸುತ್ತಿರುವೆ.
ಅಬಲೆಯರನ್ನು ಕಬಳಿಸಲೆಂದೇ ನೀನು ಅಡವಿಯಲ್ಲಿ ಸಂಚರಿಸುತ್ತಿರುವೆ. ನಿನ್ನ ಈ ಚರಿತ್ರೆಯನ್ನು ಪೂತನಿಯು ನಾಡಿನೆಲ್ಲೆಡೆ ಹೇಳುವಳು.
ರತಿವಂಚಿತೆಯ ಈ ವಿಲಾಪವನ್ನು ಹಾಡಿದವನು ಜಯದೇವ ಕವಿ. ಬುದ್ಧಿವಂತರೆ, ಪಂಡಿತರೆ, ಕೇಳಿ ಈ ಅಮೃತಧಾರೆಯನ್ನು. ಎಲ್ಲರಿಗೂ ಸುಖವಾಗುವುದು.
( ಎಂಟನೆಯ ಸರ್ಗ ಮುಗಿಯಿತು )
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೧೭
ಹೋಗು ಹರಿ ಹರಿ ಹೋಗು ಮಾಧವ ಹೋಗು ಕೇಶವ ಮಾಣು ಮೋಸದ ಮಾತನು
ತೆರಳು ಸರಸಿಜ ನಯನ ದುಗುಡವನಾರು ಪರಿಹರಿಸುವರು ಅನುಸರಿಸವರನು. 1
ಇರುಳಿನೊಳೆಚ್ಚರದಿಂದಿರಲಾದುದು ಅಲಸನಿವೇಷವಿದೆನುವುದನು ಅರುಣಾಂಬಕವಿದು ನಿಚ್ಚಳಮೆನೆ ಸಲೆ ಸೂಚಿಸುತಿಹುದನುರಾಗವನು. 2
ಕಾಡಿಗೆಗಪ್ಪಿನ ಕಣ್ಣನು ಅಪ್ಪಿದ ಕತದೊಳು ಕೃಷ್ಣನೆ ಕಪ್ಪಿಡಿದು
ಕೆಂಪಿನ ಬಣ್ಣದ ತುಟಿ ಸಹ ತನುವಿನ ಬಣ್ಣವನಹ ತಳೆದೆಸೆದಿಹುದು. 3
ಕಾಮನ ಕಳನೊಳು ಕೂರುಗುರೂರಿರುವೇರನು ಮೈಯಿದು ಮೆರೆದಪುದು
ಪಚ್ಚೆಯ ಶಿಲೆಯೊಳು ಚಿನ್ನದ ಲಿಪಿಯೊಳು ಕೆತ್ತಿದ ರತಿಜಯಪತ್ರವೆನೆ. 4
ಅವಳಡಿದಾವರೆಯಲತಿಗೆ ರಸದೊಳು ನಿನ್ನೆದೆ ಸಲೆ ನಾಂದಿಹುದಿಂದು ಮದನದ್ರುಮನವಕಿಸಲಯ ಪರಿವಾರವನಹ ತೋರುವೊಲೆಸೆದಿಹುದು. 5
ನಿನ್ನೀ ತುಟಿಯೊಳು ತೋರುವ ಪಲ್ಗಳ ಗಾಯವಿದೆನ್ನನು ನೋಯಿಪುದು ಮತ್ತಿನ್ನೆನಗೆಂತುಸುರುವೆ ತತ್ವದೊಳೊಂದೆಯೆ ತೋರ್ಕೆಯ ಮೈಯೆಂದು. 6
ಹೊರಗಿನ ಮೈವೊಲು ಒಳಗಿನ ಮನ ಸಹ ಕಪ್ಪಾಗುತಲಿದೆ ಸಟೆಯಲ್ತು
ಪೂತನಿಯೊರೆವಳು ನಿನ್ನ ವಧೂವಧನಿರ್ದಯ ಚರಿತೆಯ ಪೊಡವಿಯೊಳು. 7
ಶ್ರೀ ಜಯದೇವನು ಹಾಡಿದನೀ ರತಿವಂಚಿತಖಂಡಿತಯುವತಿ ವಿಲಾಪವನು
ವಿಬುಧರೆ ಕೇಳಿ ಸುಧಾಮಧುರವನಿದು ವಿಬುಧಾಲಯಕಿಂ ಸುಖವಹುದು. 8
*ಮೂಲ ಭಾಗ*
ಅಷ್ಟಮ ಸರ್ಗಃ_ವಿಲಕ್ಷ್ಯ ಲಕ್ಷ್ಮೀಪತಿಮ್
ಅಥ ಕಥಮಪಿ ಯಾಮಿನೀಂ ವಿನೀಯ
ಸ್ಮರಶರಜರ್ಜರಿತಾsಪಿ ಸಾ ಪ್ರಭಾತೇ
ಅನುನಯವಚನಂ ವದಂತಮಗ್ರೇ
ಪ್ರಣತಮಪಿ ಪ್ರಿಯಮಾಹ ಸಾಭ್ಯಸೂಯಂ
ಗೀತಂ ಅಷ್ಟಪದೀ_ 17
ಲಕ್ಷ್ಮೀಪತಿ ರತ್ನಾವಳೀಮ್
ಭೈರವೀರಾಗ, ಯತಿತಾಲ
ರಜನಿಜನಿತಗುರುಜಾಗರರಾಗಕಷಾಯಿತಮಲಸನಿಮೇಶಂ
ವಹತಿ ನಯನಮನುರಾಗಮಿವ ಸ್ಫುಟಮುದಿತರಸಾಭಿನಿವೇಶಂ ೧
ಹರಿಹರಿ ಯಾಹಿ ಮಾಧವ ಯಾಹಿ ಕೇಶವ ಮಾ ವದ ಕೈತವವಾದಂ
ತಾಮನುಸರ ಸರಸೀರುಹಲೋಚನ ಯಾ ತವ ಹರತಿ ವುಷಾದಂ ||ಧ್ರುವಮ್||
ಕಜ್ವಲ ಮಲಿನಲೋಚನಚುಂಬನವಿರಚಿತನೀಲಿಮರೂಪಂ
ದಶನವಸನಮರುಣಂ ತವ ಕೃಷ್ಣ ತನೋತಿ ತನೋರನುರೂಪಂ ೨
ವಪುರನುಹರತಿ ತವ ಸ್ಮರಸಂಗರಖರನಖರಕ್ಷತರೇಖಂ ಮರಕತಶಕಲಕಲಿತಕಲಧೌತಲಿಪೇರಿವ ರತಿಜಯಲೇಖಂ ೩
ಚರಣಕಮಲಗಲದಲಕಸಿಶ್ರಮಿದಂ ತವ ಹೃದಯಮುದಾರಂ
ದರ್ಶಯತೀವ ಬಹಿರ್ಮದನದ್ರು ಮನವಕಿಸಲಯಪರಿವಾರಂ ೪
ದಶನಪದಂ ಭವದಧರಗತಂ ಮಮ ಜನಯತಿ ಚೇತಸಿ ಖೇದಂ
ಕಥಯತಿ ಕಥಮಧುನಾsಪಿ ಮಯಾ ಸಹ ತವ ವಪುರೇತದಭೇದಂ ೫
ಬಹಿರಿವ ಮಲಿನತರಂ ತವ ಕೃಷ್ಣ ಮನೋsಪಿ ಭವಿಷ್ಯತಿ ನೂನಂ ಕಥಮಥ ವಂಚಯಸೇ ಜನಮನುಗತಮಸಮಶರಜ್ವರದೂರಂ ೬
ಭ್ರಮತಿ ಭವಾನಬಲಾಕವಲಾಯ ವನೇಷು ಕಿಮತ್ರ ವಿಚಿತ್ರಂ
ಪ್ರಥಯತಿ ಪೂತನಿಕೈವ ವಧೂವಧನಿರ್ದಯಬಾಲಚರಿತ್ರಂ ೭
ಶ್ರೀ ಜಯದೇವಭಣಿತರತಿವಂಚಿತಖಂಡಿತಯುವತಿವಿಲಾಪಂ
ಸ್ವಣುತ ಸುಧಾಮಧುರಂ ವಿಬುಧಾ ವಿಬುಧಾಲಯತೋಽಪಿ ದುರಾಪಂ ೮
ತವೇದಂ ಪಶ್ಯಂತ್ಯಾಃ ಪ್ರಸರದನುರಾಗಂ ಬಹಿರಿವ ಪ್ರಿಯಾಪಾದಾಲಚ್ಛುರಿತಮರಣದ್ಯೋತಿ
ಹೃದಯಂ ೯
ಮಮಾದ್ಯ ಪ್ರಖ್ಯಾತಪ್ರಣಯಭರಭಂಗೇನ ಕಿತವ
ತ್ವದಾಲೋಕಃ ಶೋಕಾದಪಿ ಕಿಮಪಿ ಲಜ್ಜಾಂ ಜನಯತಿ ೧೦
ಅಂತರ್ಮೋಹನಮೌಲಿಘೂರ್ಣನಚಲನ್ಮಂದಾರವಿಭ್ರಂಶನ_
ಸ್ತಂಭಾಕರ್ಷಣದೃಪ್ತಿಹರ್ಷಣಮಹಾಮಂತ್ರಃ ಕುರಂಗೀದೃಶಾಂ
ದೃಪ್ಯದ್ದಾನವರೂಯಮಾನದಿವಿಷದ್ದುರ್ವಾರದುಃಖಾಪದಾಂ
ಭ್ರಂಶಃ ಕಂಸರಿಪೋರ್ವಿಲೋಪಯತು ವಃ ಶ್ರೇಯಾಂಸಿ ವಂಶೀರವಃ ೧೧
||ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಖಂಡಿತಾವರ್ಣನೇ ವಿಲಕ್ಷ್ಯಲಕ್ಷ್ಮೀಪತಿರ್ನಾಮ ಅಷ್ಟಮ ಸರ್ಗಃ ||
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು