ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾವನಾ ರಾಮಣ್ಣ


 ಭಾವನಾ ರಾಮಣ್ಣ

ಭಾವನಾ ರಾಮಣ್ಣ ಅವರು ಚಿತ್ರರಂಗದಲ್ಲಿ ಉತ್ತಮ ಅಭಿನಯಕ್ಕೆ ಹೆಸರಾದ ಕಲಾವಿದೆ ಮತ್ತು ಉತ್ತಮ ನೃತ್ಯ ಕಲಾವಿದೆ.

ನಂದಿನಿ ರಾಮಣ್ಣ ಎಂಬ ಹುಟ್ಟು ಹೆಸರಿನ, ಚಿತ್ರರಂಗದ ಭಾವನಾ ರಾಮಣ್ಣ ಅವರ ಜನ್ಮದಿನ ಜನವರಿ 30. 

ಭಾವನಾ ಅವರ ಪ್ರಥಮ ಆಸಕ್ತಿ ನೃತ್ಯ. ಕೃಷ್ಣಪ್ಪ ಉಪ್ಪೂರ ಅವರ ತುಳು ಚಿತ್ರ 'ಮರಿಬೆಲೆ' ಮೂಲಕ ಚಿತ್ರರಂಗಕ್ಕೆ ಬಂದರು. ಕನ್ನಡ ಚಿತ್ರ 'ನಂ .1' ರಲ್ಲಿ ಪೋಲಿಸ್ ಪಾತ್ರಕ್ಕಾಗಿ ಪ್ರಸಿದ್ಧರಾದರು . ಸೀತಾರಾಂ ಕಾರಂತ್ ಅವರ ಚಂದ್ರಮುಖಿ ಪ್ರಾಣಸಖಿಯಲ್ಲಿ ರಮೇಶ್ ಮತ್ತು ಪ್ರೇಮಾ ಜೊತೆಯಲ್ಲಿ ನಟಿಸಿ ಅವರು ನೀಡಿದ ಅಭಿನಯ ಅವಿಸ್ಮರಣೀಯ ಮತ್ತು ಜನಪ್ರಿಯ. 

ಕವಿತಾ ಲಂಕೇಶ್ ಅವರ ದೇವೀರಿ, ಅಲೆಮಾರಿ, ಪ್ರೀತಿ ಪ್ರೇಮ ಪ್ರಣಯ; ಬರಗೂರು ರಾಮಚಂದ್ರಪ್ಪ ಅವರ ಶಾಂತಿ, ಭಾಗೀರಥಿ; ಕೆವಿ. ರಾಜು ಅವರ 'ರಾಷ್ಟ್ರಗೀತೆ'; ವಿಷ್ಣುವರ್ಧನರ ಪ್ರಸಿದ್ಧ 'ಆಪ್ತರಕ್ಷಕ' ಸೇರಿದಂತೆ ಭಾವನಾ ಅವರು ನಟಿಸಿದ ಚಿತ್ರಗಳು ಅನೇಕ. ಅಮಿತಾಬ್ ನಟಿಸಿದ  ಹಿಂದಿ ಚಿತ್ರದಲ್ಲಿ ಹಾಗೂ ಇತರ ಭಾಷಾ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.

ನೀ ಮುಡಿದ ಮಲ್ಲಿಗೆ, ಕ್ಷಾಮ ಮತ್ತು ಭಾಗೀರಥಿ - ಈ ಮೂರು ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಗಳಿಸಿದ ಮಹತ್ಸಾಧನೆ ಭಾವನಾ ಅವರದ್ದು. ದೇವೀರಿ ಚಿತ್ರದ ಅಭಿನಯಕ್ಕೆ ಅವರಿಗೆ ಅರವಿಂದನ್ ಪುರಸ್ಕಾರ ಸಂದಿತು.

ಭಾವನಾ ರಾಮಣ್ಣ ಅವರು 'ಹೋಮ್‌ಟೌನ್ ಪ್ರೊಡಕ್ಷನ್ಸ್ ' ಎಂಬ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯನ್ನು ಸ್ಥಾಪಿಸಿ ಕ್ರಿಯಾಶೀಲರಾಗಿದ್ದಾರೆ.  ರಾಜಕೀಯದಲ್ಲೂ ಪಾಲ್ಗೊಂಡಿದ್ದಾರೆ. 

ಕಲಾವಿದೆಯಾಗಿ, ಸಂಘಟನಾಗಾರ್ತಿಯಾಗಿ, ಸರಳ ಮಾನವೀಯ ಅಂತಃಕರಣ ಉಳ್ಳವರಾಗಿ ಹೆಸರಾದ ಭಾವನಾ ಅವರಿಗೆ ಭಾವನಾತ್ಮಕವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


Bhavana Ramanna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ