ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಈಶ್ವರ ಕಮ್ಮಾರ


 

ಈಶ್ವರ ಕಮ್ಮಾರ


ಸ್ಫರ್ಗದಾ ಒಂದು ತುಣುಕು

ಭೂಮಿsಗೆ ಬಂದು ಬಿತ್ತು ||


ಸೌಭಾಗ್ಯದಿಂದ ಸಂತಾನವಾಗಿ

ಭಾರತದ ಭೂಮಿ ಮೇಲೆ

ಅರಳಿಹೆವು ನಾವು ಸೌಗಂಧ ಸೂಸಿ

ಸಂತಸದ ಸರಸಿಯೊಳಗೆ

ಧರತಿs ತುಂಬ ಹರಡಿರುವ ಸಿರಿಯ

ಬಳಕೊಂಡು ಉಡಿಯ ತುಂಬಿ

ಕೊಡುತಿರಲಿ ನಮಗೆ ಭಾರತದ ತಾಯಿ

ನಮಗೇನು ಕಡಿಮೆಯಿಲ್ಲ


ವೈಕುಂಠವಿಲ್ಲೆ ಕೈಲಾಸವಿಲ್ಲೆ

ನೆಲೆಸಿಹವು ಜಾಗದಲ್ಲೆ

ಜಲತೀರ್ಥವಾಗಿ ಫಲಪ್ರಸಾದವಾಗಿ

ಕೊಡುತಿಹಳು ತಾಯಿ ನಮಗೆ


ವೈಮನಸು ತರುವ ಸಂಗತಿಯ ನೆನಪು

ಕನಸಲ್ಲು ಕೂಡ ಬೇಡ

ತನುಮನಗಳಲ್ಲಿ ಭಾರತಮಹಿಮೆ

ತುಳುಕಿರಲು ಭಯವು ಬೇಡ


ಇಂತಹ ಭವ್ಯ ಕವಿತೆಗಳನ್ನು ಬರೆದ ಈಶ್ವರ ಕಮ್ಮಾರ ಮಹಾನ್ ಮಕ್ಕಳ ಸಾಹಿತಿಗಳಾಗಿಪ್ರಸಿದ್ಧರಾಗಿದ್ದವರು.


ಈಶ್ವರ ಕಮ್ಮಾರರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇನಂದಿಹಳ್ಳಿಯಲ್ಲಿ1933 ಜನವರಿ 4ರಂದು ಜನಿಸಿದರುತಂದೆ ಶಂಕರಪ್ಪತಾಯಿ ಶಿವಬಸಮ್ಮಸಾತ್ವಿಕವಾತಾವರಣದಲ್ಲಿ ಬೆಳೆದ ಇವರಿಗೆ ಬಾಲ್ಯದಿಂದಲೇ ಮನೆಯಲ್ಲಿ ಸಾಹಿತ್ಯದ ವಾತಾವರಣದೊರೆಯಿತುತಂದೆಯವರು ಶಿಲ್ಪವಾಸ್ತುಶಿಲ್ಪಜ್ಯೋತಿಷ್ಯ ಶಾಸ್ತ್ರಗಳಲ್ಲಿ ತಿಳಿವಳಿಕೆ ಹೊಂದಿದ್ದರುಇವರಮನೆಗೆ ಸಾಕಷ್ಟು ಜನ ಚರ್ಚೆಗೆ ಬರುತ್ತಿದ್ದರು

ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದ ಇವರು ನಂತರ ಇಟಗಿಬೈಲಹೊಂಗಲಬೆಳಗಾವಿಧಾರವಾಡಗಳಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು


ಈಶ್ವರ ಕಮ್ಮಾರರು ಶಿಕ್ಷಕರಾಗಿ ಸೇವೆಗೆ ಸೇರಿದ ನಂತರ ಹೆಚ್ಚಿನ ಅಧ್ಯಯನ ನಡೆಸಿ ಬಿಎಎಂಎಪದವಿಗಳನ್ನು ಗಳಿಸಿದರುಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನಾ ಗ್ರಂಥ ರಚಿಸಿಪ್ರಸಿದ್ಧರಾದರುಸಾಹಿತಿಗಳೊಡನೆ ಒಡನಾಟದಿಂದ ಇವರ ಸಾಹಿತ್ಯ ರಚನೆ ಬೆಳೆಯಿತುಖ್ಯಾತಸಾಹಿತಿ ಶಿಸು ಸಂಗಮೇಶರೊಡನೆ ಹಲವಾರು ವರ್ಷಗಳ ಜೊತೆ ಇವರದು


ಈಶ್ವರ ಕಮ್ಮಾರರ 40 - 45 ವರ್ಷಗಳ ಸಾಹಿತ್ಯ ರಚನೆಯಲ್ಲಿ ಹೆಚ್ಚಿನ ಭಾಗ ಮಕ್ಕಳ ಸಾಹಿತ್ಯಕ್ಷೇತ್ರಕ್ಕೆ ಕೊಡುಗೆ

ಆಕಾಶವಾಣಿ ಕಲಾವಿದೆಯಾಗಿದ್ದ ಮಲ್ಲಮ್ಮನವರು ಇವರ ಧರ್ಮಪತ್ನಿಇವರಿಗೆ ಅವರುಸಂಸಾರಕ್ಕಷ್ಟೇ ಅಲ್ಲದೆ ಸಾಹಿತ್ಯಕ್ಷೇತ್ರಕ್ಕೂ ಜೊತೆಯಾಗಿದ್ದರುಪ್ರತಿವರ್ಷ ಶ್ರಾವಣಮಾಸದವಚನದಾಸೋಹ ಕಾರ್ಯಕ್ರಮದ ನಿರ್ವಹಣೆ ಇವರದಾಗಿತ್ತುಇವರ ಮನೆಯೊಂದು ಸಾಹಿತ್ಯಕುಟೀರಸದಾ ಜನರಿರುತ್ತಿದ್ದರುಇವರಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿಯಿದ್ದು ಎಲ್ಲರೂವಿದ್ಯಾವಂತರಾಗಿ ಅವರವರ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ

ಆಕಾಶವಾಣಿ ಧಾರವಾಡದ ಗಿಳಿವಿಂಡುಎಳೆಯರ ಬಳಗ ಕಾರ್ಯಕ್ರಮಗಳಲ್ಲಿ ಇವರ ಕೃತಿಗಳುಬಹಳಷ್ಟು ಪ್ರಸಾರವಾಗಿವೆಇವರ ಮಕ್ಕಳ ಸಾಹಿತ್ಯದ ಭಂಡಾರ ಸಮೃದ್ಧವಾಗಿ ರಚನೆಯಾಗಿದ್ದುಹಲವರಿಗೆ ಸಂಶೋಧನೆಗೂ ವಿಷಯವಾಗಿದೆಪಳೆಯುಳಿಕೆಗಳ ಪುನರುಜ್ಜೀವನದ ಆಶಯವನ್ನುಇಟ್ಟುಕೊಂಡು ಸ್ಥಾಪನೆಗೊಂಡ  "ಕಲೆಸಾಹಿತ್ಯಸಂಸ್ಕೃತಿ ಟ್ರಸ್ಟ್ಇವರ ಮಹತ್ವಾಕಾಂಕ್ಷೆಯಕೊಡುಗೆಯಾಗಿದೆ.


ಈಶ್ವರ ಕಮ್ಮಾರರು  ರಚಿಸಿದ ಸಾಹಿತ್ಯ ಅಪಾರವಾದುದಾಗಿದ್ದು ಮಕ್ಕಳ ಸಾಹಿತ್ಯದ ಕೊಡುಗೆಹೆಚ್ಚಿನದಾಗಿದೆ. 'ಪಾಪಾ', 'ಮಕ್ಕಳಲೋಕ', 'ಎಡತಾಕ ಪಟ್ಟಿ' 'ಕೊಟ್ಟಿಗೆಯೊಳಗಿನ ಕೋಣಪ್ಪಮುಂತಾದುವು ಮಕ್ಕಳ ಕವನ ಸಂಕಲನಗಳಾಗಿವೆ. 'ಶಾಲಾರಂಗ' 'ಚೂಡಾರತ್ನ', 'ದಾರಿದೀಪ', 'ರಕ್ಷಾಬಂಧನ' 'ಕೋರ್ಟಿನಲ್ಲಿ ಕಟವಿಮುಂತಾದವು ಮಕ್ಕಳ ನಾಟಕಗಳು. 'ಸಂಕಲ್ಪ', ‘ತಿಪ್ಪಮಾಡಿದ ತಪಸ್ಸು', ‘ಗಿಳಿಯು ಹೇಳಿದ ಗುಲಾಬಿ ಕಥೆಮುಂತಾದ ಕಾದಂಬರಿಗಳಿವೆಇದಲ್ಲದೆಮಹಾನ್ ವ್ಯಕ್ತಿಗಳ ಪರಿಚಯದ ಬರಹಗಳಾಗಿ 'ಸಾರ್ಥಕ ಬದುಕಿನ ಸರದಾರರು', ‘ಕಾಯಕದಲ್ಲಿಕೈಲಾಸ ಕಂಡವರು', ‘ಕೀರ್ತಿವಂತರುಮುಂತಾದ ರಚನೆಗಳಿವೆಮಕ್ಕಳ ಕಥಾ ಸಾಹಿತ್ಯಸಂಶೋಧನಾ ಗ್ರಂಥ ಒಂದು ಮುಖ್ಯ ಆಕರಗ್ರಂಥವಾಗಿದೆ 'ಮನೆಯ ದೀಪ', 'ಮಕ್ಕಳ ಆಟಮುಂತಾದ ಒಂಬತ್ತು ಸಂಪಾದಿತ ಕೃತಿಗಳನ್ನು ತಂದಿದ್ದಾರೆಪ್ರೌಢ ಸಾಹಿತ್ಯದಲ್ಲಿ 'ಗೀತಾಂಜನಕವನಸಂಗ್ರಹ, 'ಸ್ವರ್ಗದಾ ಒಂದು ತುಣುಕುಭಾವಗೀತೆಗಳ ಸಂಕಲನ ಮುಂತಾದ ಎಂಟುಕೃತಿಗಳು ಮೂಡಿಬಂದಿವೆ.


ಈಶ್ವರ ಕಮ್ಮಾರನ್ನು ಹುಡುಕಿಕೊಂಡು ಅನೇಕ ಪ್ರಮುಖ ಪ್ರಶಸ್ತಿ ಪುರಸ್ಕಾರಗಳು ಬಂದವುಆದರ್ಶ ಶಿಕ್ಷಕ ಪ್ರಶಸ್ತಿಮಕ್ಕಳ ಲೋಕ ಕವನ ಸಂಕಲನಕ್ಕೆ ರಾಜ್ಯ ಪ್ರಶಸ್ತಿಭಾರತ ಸರ್ಕಾರದ ಶಿಶುಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನಕಸಾಪದ ವಸುದೇವ ಭೋಪಾಲಂ ದತ್ತಿನಿಧಿ ಪ್ರಶಸ್ತಿಉತ್ತರಪ್ರದೇಶದ ಬಾಲಕಲ್ಯಾಣ ಸಂಸ್ಥಾನದ ಗಂಗಾ ಪ್ರಸಾದ ದ್ವಿವೇದಿಯವರ ಹೆಸರಿನ ಸನ್ಮಾನಧೀಮಂತರು ರಾಜ್ಯೋತ್ಸವ ಪ್ರಶಸ್ತಿಶಿವಮೊಗ್ಗದ ಕರ್ಣಾಟಕ ಸಂಘ ಕೊಡುವ ಶಿವರಾಮಕಾರಂತರ ಹೆಸರಿನ ಪ್ರಶಸ್ತಿಪುರಸ್ಕಾರಶಿಕ್ಷಣಸಿರಿ ರಾಜ್ಯಪ್ರಶಸ್ತಿರಾಷ್ಟ್ರಪತಿಗಳೊಂದಿಗೆ ಚಹಾಕೂಟಕ್ಕೆ ಆಹ್ವಾನಶ್ರವಣಬೆಳಗೊಳದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯಪರಿಷತ್ತಿನಿಂದ ಸನ್ಮಾನಧಾರವಾಡದ ವಿದ್ಯಾವರ್ಧಕ ಸಂಘದ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಅನೇಕಪ್ರಶಸ್ತಿಗಳು ಇವರ ಮುಡಿಗೇರಿದ್ದವು.


ಈಶ್ವರ ಕಮ್ಮಾರರು ಅನೇಕ ಸಂಘಟನೆಗಳ ಮೂಲಕ ಅಪಾರ ಸೇವೆಯನ್ನು ಮಾಡಿದ್ದರುಮಕ್ಕಳಮನೆ ಸಂಸ್ಥೆ ಸ್ಥಾಪಿಸಿ ಅನೇಕ ಸಾಹಿತ್ಯಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆಲೆಕಲ್ಪಿಸಿದರು ಪರಿಸರವಾದಿಯಾಗಿ ಜನಸಂಘಟನೆ ನಡೆಸಿದರು ರಾಜ್ಯಮಟ್ಟದ ಮಕ್ಕಳ ಸಾಹಿತ್ಯಸಮ್ಮೇಳನ ನಡೆಸಿದ್ದು ಪ್ರಮುಖ ಸಂಗತಿಇದಲ್ಲದೆ ಮಕ್ಕಳ ಮಂದಿರ ಎಂಬ ಮಾಸಪತ್ರಿಕೆಯಪ್ರಕಟಣೆಮಕ್ಕಳ ಸಾಹಿತ್ಯ ಕಮ್ಮಟಗಳುಪ್ರಖ್ಯಾತ ಸಾಹಿತಿಗಳ ಭೇಟಿ ಇತ್ಯಾದಿ ಚಟುವಟಿಕೆಗಳನ್ನುಹಮ್ಮಿಕೊಂಡು ಸದಾ ಕಾರ್ಯನಿರತರಾಗಿರುತ್ತಿದ್ದ ಇವರ ಬಗ್ಗೆ ಏಶಿಯಾದ ಪ್ರತಿಷ್ಠಿತರ ಪಟ್ಟಿಯಲ್ಲಿಬರಹ ದಾಖಲಾಗಿದೆ


ಹಿರೇಮಗಳೂರು ಕಣ್ಣನ್ಅನುಪಮಾ ನಿರಂಜನಶಿವರುದ್ರಪ್ಪನಾಡಿಸೋಜ ಮುಂತಾದಅನೇಕ ಗಣ್ಯರು ಇವರನ್ನು ಕುರಿತು ಮೆಚ್ಚುಗೆಯ ನುಡಿಗಳನ್ನು ನುಡಿಯುವ ಮೂಲಕ ಇವರಸಾಹಿತ್ಯ ಸೇವೆಯನ್ನು ಕೊಂಡಾಡಿದ್ದಾರೆ


ಹೀಗೆ ಸದಾ ಮಕ್ಕಳ ಸಾಹಿತ್ಯ ಕುರಿತು ಚಿಂತಿಸುತ್ತಕ್ರಿಯಾಶೀಲರಾಗಿದ್ದ ಈಶ್ವರ ಕಮ್ಮಾರರು2020 ಜನವರಿ 21ರಂದು ತಮ್ಮ ಇಹಲೋಕದ ಪಯಣವನ್ನು ಮುಗಿಸಿದರು

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ