ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚೀನಿ

 


ಚೀನಿ ನಮನ 🌷🙏🌷


ರಂಗ ಸಂಗೀತಲೋಕದ ಸುನಾದ, ಚೀನಿ ಸಾರ್ ಎಂದು ಪ್ರಖ್ಯಾತರಾಗಿದ್ದ ಶ್ರೀನಿವಾಸ ಭಟ್ 2023ರ ಜನವರಿ 25ರಂದು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. 

ಚೀನಿ ಕುರಿತು ಮಂಡ್ಯ ರಮೇಶ್ ಅವರ ಈ ಮಾತುಗಳು ಮನನೀಯವಾದ್ದು:

"ಚೀನಿಯ ಗಿಟಾರ್ ಇನ್ನು ನುಡಿಯುವುದಿಲ್ಲ!'

ಮಂಗಳೂರಿನ ನೈಟ್ ಕ್ಲಬ್ ಶಾಲಿಮಾರ್ನಲ್ಲೀ, ಪ್ರಖ್ಯಾತ ಗಿಟಾರ್ ನುಡಿಸುತ್ತಿದ್ದವನೊಬ್ಬ ಉಡುಪಿಯಲ್ಲಿನ 'ರಥಬೀದಿ ಗೆಳೆಯರ' 'ಮೂರು ಕಾಸಿನ ಕಾಸಿನ ಸಂಗೀತ ನಾಟಕ"ಕ್ಕೆ ನುಡಿಸಿದ ಪರಿಕಂಡು ಕೆ .ವಿ .ಅಕ್ಷರ ನೀನಾಸಂಗೆ ಎಳೆದು ತಂದ ಈ ಹದಿಹರೆಯದ ಯುವಕ ನೀನಾಸಂ ತಿರುಗಾಟದಲ್ಲಿ ಗುರು ಶ್ರೀ ಬಿ ವಿ ಕಾರಂತರ ಕಣ್ಣಿಗೆ ಬಿದ್ದು ಅವರ ರಂಗ ಸಂಗೀತ ಪರಂಪರೆಯಲ್ಲಿ ಪಟ್ಟ ಶಿಷ್ಯನಾಗಿ ಬೆಳೆದ ಪ್ರಕ್ರಿಯೆ ಮಾತ್ರ ಅತ್ಯಂತ ವಿಸ್ಮಯ ರೀತಿ ಯದ್ದು.!  ಗುರು -ಗೆಳೆಯ ಚೀನಿಗಿದ್ದ ವಿದ್ವತ್ತು ಮತ್ತು ರಂಗ ಸಂಗೀತದ ಗ್ರಹಿಕೆ ಮಾತ್ರ ಅದ್ಭುತವಾದದ್ದು!  ಅವನು ಈಗಿಲ್ಲ. ಅವನ ಕೆಲಸ ಉಳಿಯುತ್ತದೆ ಅವನ ಮಗ ಮತ್ತು   ಅವನ ಶ್ರೀಮತಿಗೆ ಸಂತಾಪಗಳನ್ನು ಹೇಗೆ ಹೇಳುವುದೆಂದು ತಿಳಿಯದೆ ನಾನೇ ಮನದೊಳಗೆ ಬಿಕ್ಕಿದ್ದೇನೆ."

ರಂಗಾಯಣದ ಸಂಗೀತ ನಿರ್ದೇಶಕರಾಗಿ 30 ವರ್ಷ ಸೇವೆ ಸಲ್ಲಿಸಿದ್ದ ಚೀನಿ ಅವರು, ನೂರಾರು ನಾಟಕಗಳಿಗೆ ಸಂಗೀತ ನೀಡಿದ್ದರು.  ರಂಗಭೀಷ್ಮ ಬಿ.ವಿ.ಕಾರಂತರ ಮೆಚ್ಚಿನ ಶಿಷ್ಯರಾಗಿದ್ದ ಅವರು ‘ಚೀನಿ’ ಎಂದೇ ರಂಗವಲಯದಲ್ಲಿ ಹೆಸರಾಗಿದ್ದರು. ‘ಕಾರಂತ ಸಂಗೀತ’ ಮಾದರಿಯನ್ನು ರಂಗಭೂಮಿಯಲ್ಲಿ ಮುಂದುವರಿಸಿದ್ದರು.

ಚೀನಿ ನಾಡಿನ ವಿವಿಧ ಹವ್ಯಾಸಿ ರಂಗ ತಂಡಗಳ ನಾಟಕಗಳಿಗೂ ಸಂಗೀತ ನೀಡಿದ್ದರು. ಗಿಟಾರ್, ಹಾರ್ಮೊನಿಯಂ ಹಾಗೂ ತಾಳವಾದ್ಯಗಳಲ್ಲೂ ಪರಿಣತರಾಗಿದ್ದರು.

ಅಗಲಿದ ಮಹಾನ್ ಚೇತನಕ್ಕೆ ನಮನ 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ