ಗೀತಗೋವಿಂದ20
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 19
*ಸಂಕ್ಷಿಪ್ತ ಭಾವ*
ಹಗಲು ಕರಗುತ್ತ ಬಂದಂತೆ ರಾಧೆಯ ಕೋಪ ಸಹಾ ಕರಗತೊಡಗಿತು. ಅದೇ ಸಮಯದಲ್ಲಿ ಮಾಧವನು ಬಂದು ಅವಳ ಕಿವಿಯಲ್ಲಿ ಮಧುರವಾಗಿ ಮಾತನಾಡಿದನು. ಅವಳು ಲಜ್ಜೆಯಿಂದ ತಲೆಬಾಗಿದಳು.
ಪ್ರಿಯೇ, ಸುಂದರಶೀಲವುಳ್ಳವಳೇ, ನನ್ನ ಮೇಲಿನ ಕೋಪವನ್ನು ಬಿಡು. ಮದನನು ನನ್ನನ್ನು ಸುಡುತ್ತಿರುವನು. ತಂಪನ್ನು ನೀಡು. ನೀನು ನುಡಿಯದಿದ್ದರೆ ಬೆಳದಿಂಗಳಿನಂತಹ ದಂತಕಾಂತಿಯಿದ್ದೂ ಪ್ರಯೋಜನವೇನು?
ನಿನಗೆ ನನ್ನಮೇಲೆ ಇನ್ನೂ ಕೋಪವಿದ್ದರೆ ನಿನ್ನ ಹಲ್ಲುಗಳಿಂದ ಕಚ್ಚು. ಉಗುರುಗಳಿಂದ ಗಾಯಗೊಳಿಸು. ತೋಳಿನಿಂದ ಹೊಡೆದುಬಿಡು. ಸುಖದ ಸುಗ್ಗಿಯನ್ನು ನೀಡು.
ನೀನೆ ನನ್ನ ಹೃದಯ. ನೀನೇ ನನ್ನ ಭೂಷಣ. ನನ್ನ ಜೀವನವು ನೀನೆ. ನೀನು ಈ ಭವಸಾಗರದಲ್ಲಿನ ಅಮೂಲ್ಯ ರತ್ನ. ನನ್ನಲ್ಲಿ ಸದಾ ಕೃಪೆಯನ್ನು ತೋರು. ಮನ್ಮಥನ ಬಾಣಗಳಿಂದ ಕಂಗೆಟ್ಟಿರುವ ನನ್ನನ್ನು ನಿನ್ನ ಕಣ್ಣನೋಟದಿಂದ ಸಂತೈಸು ಪ್ರಿಯೆ.
ಕೊಡದಂತಹ ನಿನ್ನ ಸ್ತನಗಳ ಮೇಲೆ ಹಾರಗಳು ಅಲುಗಾಡಿ ಅವುಗಳ ಸೌಂದರ್ಯವನ್ನು ಹೆಚ್ಚಿಸಲಿ. ಒಡ್ಯಾಣವು ಘಲಿರೆನಲಿ. ವಿಶಾಲವಾದ ಜಘನಗಳಲ್ಲಿ ಮನ್ಮಥನ ರೂಪ ಕಂಗೊಳಿಸಲಿ. ತಾವರೆಯನ್ನೂ ಅಂಜಿಸುವ, ನನ್ನೆದೆಯನ್ನು ರಂಜಿಸುವ ನಿನ್ನ ಕೆಂಪಾದ ಚಿಗುರಿನಂತಹ ಪಾದಗಳಿಗೆ ಹಚ್ಚಿರುವ ಮದರಂಗಿಯು ಎಲ್ಲೆಡೆಗೂ ಕೆಂಪು ಸೂಸಲಿ. ಜೇನಿನಂತೆ ಸಿಹಿಯಾದ ಧ್ವನಿಯುಳ್ಳವಳೆ, ಪ್ರಿಯೆ, ನನ್ನಲ್ಲಿ ಅನುರಾಗವನ್ನು ತೋರು.
ನಿನ್ನ ಚರಣಗಳನ್ನು ನನ್ನೆಡೆಗೆ ನೀಡು. ಮದನನು ಸುಡುತ್ತಿರುವನು. ಹಾಗಾದರೂ ತಂಪಾಗಲಿ. ತಾಪವನ್ನು ಪರಿಹರಿಸಲಿ. ಪ್ರೀತಿ ಹರಿಯಲಿ.
ಈ ರೀತಿಯಲ್ಲಿ ಚತುರವಾದ ನುಡಿಗಳನ್ನು ರಾಧೆಯ ಕುರಿತು ನುಡಿದ ಮುರವೈರಿಯನ್ನು ಕೊಂಡಾಡುತ್ತಾ ಜಯದೇವನು ತನ್ನ ಮಾತುಗಳಲ್ಲಿ ಲೋಕದ ಎಲ್ಲ ಪ್ರೇಮಿಗಳಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಾನೆ.
( ಹತ್ತನೆಯ ಸರ್ಗ ಮುಗಿಯಿತು )
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ 19
ಬಿಡು ನನ್ನೊಳನಿದಾನಮಾನವನು ಹೇ ಪ್ರಿಯೇ ಚಾರುಶೀಲೆ
ಒಡನೆ ಮದನಾನಲನು ಮನವಿದನು ಸುಡುತಿಹನು
ಮುಖಕಮಲ ಮಧುವನೆರೆ ಬಾಲೆ. 1
ನೀನಿನಿಸು ನುಡಿವೆಯೆನೆ ದಂತರುಚಿಕೌಮುದಿಯೊಳತಿಘೋರ ದರತಿಮರ ಹರಿವುದೆಲೆ ಬಾಲೆ
ಲೋಚನ ಚಕೋರವನು ತವವದನ ಚಂದ್ರಮನು ಕೆರಳಿಪನು ಚೆಂದುಟಿಯ ಜೇನೀಂಟುವೋಲೆ. 2
ನನ್ನೊಳುರುಕೋಪವಿದು ಸುದತಿ ನಿಜವೆನ್ನುವೊಡೆ ಕುಡು ನನಗೆ ಖರನಖರ ಶರಘಾತಗಳನು
ಘಟಿಸು ಭುಜಬಂಧವನು ಜನಿಸು ರದಖಂಡವನು ಎಂತಾದರೂ ಸರಿಯೆ ಸುಖವನನುಗೊಳಿಸು. 3
ನೀನೆ ಮನ ಭೂಷಣವು ನೀನೆ ಮಮ ಜೀವನವು ಪ್ರಿಯೆ ನೀನೆ ಮಮ ಭವಾಂಬುಧಿಯಮಳ ರತ್ನ
ಸತತ ನೀನೆನ್ನೊಳು ಕೃಪಾಭರಿತಳಾಗುವೊಲು ನಡೆಯುತಿಹುದೆನ್ನಮನದಿಂದಲತಿಯತ್ನ. 4
ನೀಲನಲಿನಾಭದೊಲು ಮೆರೆದ ತವ ಲೋಚನವು ಕೋಕನದ ರೂಪವನು ಧರಿಸಿರುವುದಿಂದು
ಕಂದರ್ಪಭಾವವೆರೆದೀಕೃಷ್ಣ ದೇಹವನು ಕುಡಿನೋಟದಲರಂಬನೆಸೆದರುಣಗೊಳಿಸು. 5
ಕೊಡಮೊಲೆಯ ನಿನ್ನೆದೆಯ ಮೇಲೆ ನಲಿದಿರಲಿ ಸಲೆ ಮಣಿಮಯದ ಚಾರುತರ ಹಾರವೆಲೆ ಬಾಲೆ
ರಶನ ಘಲಿಘಲಿರೆನಲಿ ಘನಜಘುನಮಂಡಲದೊಳಂಗಜನ ಆಣೆಯನು ಘೋಷಿಸುವವೋಲೆ. 6
ತಾವರೆಯ ಗ೦ಜಿಸುವ ನನ್ನೆದೆಯ ರಂಜಿಸುವ ರತಿಯ ನರ್ತನ ಗತಿಯ ರಾಗವನೆ ಮೆರೆವ
ನಿನ್ನಡಿಯನಲತಿಗೆಯ ತೊಡೆದರುಣಗೊಳಿಸುವೆನು ಜೇನ್ದನಿಯ ನುಡಿಯವಳೆ ತೋರು ಕರುಣೆಯನು. 7
ಸ್ಮರಗರಲ ಖ೦ಡನವಿದೆನುವ ತವ ಚರಣವನು ನನ್ನ ಶಿರಮಂಡನವನೆಸಗೆಲಗೆ ನೀಡು
ಸುಡುತಿಹನು ದಾರುಣನು ಮದನ ಕದನಾರುಣನು ನಿನ್ನ ಪದ ತಾಪವನು ಪರಿಹರಿಸಲಿಂದು. 8
ಚಟುಲ ಚಾಟೂಕ್ತಿ ಪಟು ರಾಧೆಯನು ಕುರಿತಂದು ಪೇಳಿದನು ಚಾರು ಮುರವೈರಿ ತಾನಿಂತು
ಮಾನಿನಿಯನನುನಯಿಪ ಜಯದೇವ ವಾಣಿಯಿದು ಲೋಕದೊಳು ಇನಿಯರನು ಜಯಿಸುಗೆ ಸಮಂತು. 9
*ಮೂಲ ಭಾಗ*
ದಶಮಸರ್ಗಃ_ ಚತುರ ಚತುರ್ಭುಜಮ್
ಅತ್ರಾಂತರೇ ಮಸೃಣರೋಷವಶಾಮಪಾರ_
ನಿಃಶ್ವಾಸನಿಸ್ಸಹಮುಖೀಂಸುಮುಖೀಮುಪೇತ್ಯ
ಸವ್ರೀಡಮೀಕ್ಷಿತಸಖೀವದನಾಂ ದಿನಾಂತೇ
ಸಾನಂದಗದ್ಗದಪದಂ ಹರಿರಿತ್ಯುವಾಚ ೧
ಗೀತಂ – ಅಷ್ಟಪದೀ – 19 - ಚತುರ ಚತುರ್ಭುಜ ರಾಗರಾಜಿ_
ಚಂದ್ರೋದ್ಯೋತಮ್
ದೇಶವರಾಡೀರಾಗ, ಅಷ್ಟತಾಲ
ವದಸಿ ಯದಿ ಕಿಂಚಿದಪಿ ದಂತರುಚಿ ಕೌಮುದೀ ಹರತಿ ದರತಿಮಿರಮತಿಘೋರಂ
ಸ್ಪುರದಧರಶೀಧವೇ ತವ ವದನಚಂದ್ರಮಾ
ರೋಚಯತು ಲೋಚನಚಕೋರಂ ೧
ಪ್ರಿಯೇ ಚಾರುಶೀಲೇ ಮುಂಚ ಮಯಿ ಮಾನಮನಿದಾನಂ
ಸಪದಿ ಮದನಾನಲೋ ದಹತಿ ಮಮ ಮಾನಸಂ
ದೇಹಿ ಸುಖಕಮಲಮಧುಪಾನಂ ||ಧ್ರುವಮ್||
ಸತ್ಯಮೇವಾಸಿ ಯದಿ ಸುದತಿ ಮಯಿ ಕೋಪಿನೀ
ದೇಹಿ ಖರನಖರಶರಘಾತಂ
ಘಟಯ ಭುಜಬಂಧನಂ ಜನಯ ರದಖಂಡನಂ
ಯೇನ ವಾ ಭವತಿ ಸುಖಜಾತಂ ೨
ತ್ವಮಸಿ ಮಮ ಭೂಷಣಂ ತ್ವಮಸಿ ಮಮ ಜೀವನಂ
ತ್ವಮಸಿ ಮಮ ಭವಜಲಧಿರತ್ನಂ
ಭವತು ಭವತೀಹ ಮಯಿ ಸತತಮನುರೋಧಿನೀ
ತತ್ರ ಮಮ ಹೃದಯಮತಿಯತ್ನಂ ೩
ನೀಲನಲಿನಾಭಮಪಿ ತನ್ನಿ, ತವ ಲೋಚನಂ
ಧಾರಯತಿ ಕೋಕನದ ರೂಪಂ
ಕುಸುಮಶರಬಾಣಭಾವೇನ ಯದಿ ರಂಜಯಸಿ
ಕೃಷ್ಣಮಿದಮೇತದನುರೂಪಂ ೪
ಸ್ಸುರತು ಕುಚಕುಂಭಯೋರುಪರಿ ಮಣಿಮಂಜರೀ
ರಂಜಯತು ತಪ ಹೃದಯೇಶಂ
ರಸತು ರಶನಾsಪಿ ತವ ಘನಜಘನಮಂಡಲೇ
ಘೋಷಯತು ಮನ್ಮಥನಿದೇಶಂ ೫
ಸ್ಥಲಕಮಲಗಂಜನಂ ಮಮ ಹೃದಯರಂಜನಂ
ಜನಿತರತಿರಂಗಪರಭಾಗಂ
ಭಣ ಮಸೃಣವಾಣಿ ಕರವಾಣಿ ಚರಣದ್ವಯಂ
ಸರಸಸದಲಕ್ತಕಸರಾಗಂ ೬
ಸ್ಮರಗರಲಖಂಡನಂ ಮಮ ಶಿರಸಿ ಮಂಡನಂ
ದೇಹಿ ಪದಪಲ್ಲವಮುದಾರಂ
ಜ್ವಲತಿ ಮಯಿ ದಾರುಣೋ ಮದನಕದನಾನಲೋ
ಹರತು ತದುಪಾಹಿತಏಕಾರಂ ೭
ಇತಿ ಚಟುಲಚಾಟುಪಟುಚಾರು ಮುರವೈರಿಣೋ
ರಾಧಿಕಾಮಧಿ ವಚನಜಾತಂ
ಜಯತಿ ಜಯದೇವಕವಿಭಾರತೀ ಭೂಷಿತಂ
ಮಾನಿನೀಜನಜನಿತಶಾತಂ ೮
ಪರಿಹರ ಕೃತಾತಂಕೇ ಶಂಕಾಂ ತ್ವಯಾ ಸತತಂ ಘನ -
ಸ್ತನಜಘನಯಾಕ್ರಾಂತೇ ಸ್ವಾಂತೇ ಪರಾನವಕಾಶಿನಿ
ವಿಶತಿ ವಿತನೋರನ್ಯೋ ಧನ್ಯೋ ನ ಕೋsಪಿ ಮಮಾಂತರಂ
ಪ್ರಣಯಿನಿ ಪರೀರಂಭಾರಂಭೇ ವಿಧೇಹಿ ವಿಧೇಯತಾಂ ೯
ಮುಗ್ಧೇ ವಿಧೇಹಿ ಮಯಿ ನಿರ್ದಯದಂತದಂಶ –ದೋರ್ವಲ್ಲಿ ಬಂಧನಿಬಿಡಸ್ತನಪೀಡನಾನಿ
ಚಂಡಿ ತ್ವಮೇವ ಮುದಮುದ್ವಹ ಪಂಚಬಾಣ_ ಚಂಡಾಲಕಾಂಡದಲನಾದಸವಃ ಪ್ರಯಾಂತಿ ೧೦
ಶಶಿಮುಖಿ ತವ ಭಾತಿ ಭಂಗುರಭ -
ರ್ಯುವಜನಮೋಹಕರಾಲಕಾಲಸರ್ಪಿ
ತದುದಿತಭಯಭಂಜನಾಯ ಯೂನಾಂ ತ್ವದಧರಸೀಧುಸುದೈವ ಸಿದ್ಧಮಂತ್ರ: ೧೧
ವ್ಯಥಯತಿ ವೃಥಾ ಮೌನಂ ತನ್ವಿ, ಪ್ರಪಂಚಯ ಪಂಚಮಂ
ತರುಣಿ ಮಧುರಾಲಾಪೈಸ್ತಾಪಂ ವಿನೋದಯ ದೃಷ್ಟಿಭಿಃ
ಸುಮುಖಿ ವಿಮುಖೀಭಾವಂ ತಾವದ್ವಿ ಮುಂಚ ನ ಮುಂಚ ಮಾಂ ಸ್ವಯಮತಿಶಯಸ್ಸಿಗ್ಧೋ ಮುಗ್ಧೇ ಪ್ರಿಯೋsಹಮುಪಸ್ಥಿತಃ ೧೨
ಬಂಧಕದ್ಯುತಿಬಾಂಧವೋsಯಮಧರಃ ಸ್ನಿಗ್ಧೋ ಮಧೂಕಚ್ಛವಿ
ರ್ಗಂಡಶ್ಚಂಡಿ ಚಕಾಸ್ತಿ ನೀಲನಲಿನಶ್ರೀಮೋಚನಂ ಲೋಚನಂ ನಾಸಾಭೀತಿ ತಿಲಪ್ರಸೂನಪದವೀಂ ಕುಂದಾಭದಂತಿ ಪ್ರಿಯೇ ಪ್ರಾಯಸ್ತ್ವುನ್ಮುಖಸೇವಯಾ ವಿಜಯತೇ ವಿಶ್ವಂ ಸ ಪುಷ್ಪಾಯುಧಃ ೧೩
ದೃಶೌ ತವ ಮದಾಲಸೇ ವದನಮಿಂದುಸಂದೀಪನಂ ಗತಿರ್ಜನಮನೋರಮಾ ವಿಜಿತರಂಭಮೂರುದ್ವಯಂ
ರತಿಸ್ತವ ಕಲಾವತೀ ರುಚಿರಚಿತ್ರಲೇಖೇ ಭ್ರುವಾ -
ವಹೋ ವಿಬುಧಯೌವತಂ ವಹಸಿ ತನ್ನಿ ಪೃಥ್ವಿಗತಾ ೧೪
ಸ ಪ್ರೀತಿಂ ತನುತಾಂ ಹರಿಃ ಕುವಲಯಾಪೀಡೇನ ಸಾರ್ಧಂ ರಣೇ ರಾಧಾಪೀನಪಯೋಧರಸ್ಮರಣಕೃತ್ಕುಂಭೇನ ಸಂಭೇದವಾನ್
ಯತ್ರ ಸ್ವಿದ್ಯತಿ ಮೀಲತಿ ಕ್ಷಣಮಪಿ ಕ್ಷಿಪ್ರಂ ತದಾಲೋಕನ -
ವ್ಯಾಮೋಹನ ಜಿತಂ ಜಿತಂ ಜಿತಮಭೂತ್ಕಂಸಸ್ಯ ಕೋಲಾಹಲಃ ೧೫
|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಮಾನಿನೀ ವರ್ಣನೇ ಚತುರ ಚತುರ್ಭುಜೋನಾಮ ದಶಮ ಸರ್ಗ: ||
ಕೃತಜ್ಞತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು