ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಎಸ್. ಅನುಪಮಾ


 ಎಚ್ಎಸ್ಅನುಪಮಾ


ವೃತ್ತಿಯಲ್ಲಿ ವೈದ್ಯರಾದ ಡಾಎಚ್ಎಸ್ಅನುಪಮಾ ಕನ್ನಡ ಸಾಹಿತ್ಯ ಲೋಕದ ಹೆಸರಾಂತಬರಹಗಾರ್ತಿ.


ಫೆಬ್ರುವರಿ 6 ಅನುಪಮಾ ಅವರ ಜನ್ಮದಿನಅನುಪಮಾ ಶಿಕ್ಷಕ ವೃತ್ತಿಯಸಾಂಪ್ರದಾಯಿಕಮನಃಸ್ಥಿತಿಯ ತಾಯ್ತಂದೆಯರ ಮಗಳಾಗಿ ಹುಟ್ಟಿದರು ತಂದೆಯ ಊರು ಶಿವಮೊಗ್ಗ ಜಿಲ್ಲೆಯತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲುತಾಯಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಕಣಕಟ್ಟೆಯವರುಅವರಿಬ್ಬರು ಪ್ರೌಢಶಾಲೆಯಲ್ಲಿ ಶಿಕ್ಷಕಶಿಕ್ಷಕಿಯರಾಗಿ ಕೆಲಸ ಮಾಡುತ್ತವರ್ಗಾವಣೆಗೊಳಗಾಗುತ್ತ ಇದ್ದದರಿಂದ ಇವರ ವಿದ್ಯಾಭ್ಯಾಸ ಮೂರ್ನಾಲ್ಕು ಜಿಲ್ಲೆಗಳ ಹಳ್ಳಿಗಳಲ್ಲಿಆಯಿತುಯಾವುದೋ ಒಂದು ಊರಿನಒಂದು ಜಾತಿಯ ಕೇರಿಯಲ್ಲಿ ತಾನು ಬೆಳೆಯಲಿಲ್ಲಎನ್ನುವುದು ಬಾಲ್ಯಕಾಲ ತಮಗಿತ್ತ ಕೊಡುಗೆಯೆಂದೇ ಅನುಪಮಾ ಭಾವಿಸಿದ್ದಾರೆ


ಅನುಪಮಾ ಮನೆಗೆ ತಂದೆಯವರು ತರುತ್ತಿದ್ದ ಪತ್ರಿಕೆ ನಿಯತಕಾಲಿಕಗಳನ್ನೆಲ್ಲ ಓದುತ್ತಿದ್ದರುಲಂಕೇಶ್ ಪತ್ರಿಕೆ ಓದುವಾಗ ಲಂಕೇಶರ ಬರಹದ ರೀತಿ ಬಹಳ ಮೆಚ್ಚುಗೆಯಾಗುತ್ತಿತ್ತುಏಳನೇತರಗತಿಯಲ್ಲಿರುವಾಗ ಇವರ ಮನೆಯ ಪ್ರೀತಿಯ ಮೊಲ ಶೆಲ್ಲಿಯು ನಾಯಿ ಬಾಯಿಗೆ ತುತ್ತಾದಾಗದುಃಖದಿಂದ ಬರೆದ ಪದ್ಯ

'ವನಿತಾಪತ್ರಿಕೆಯಲ್ಲಿ ಪ್ರಕಟಗೊಂಡು  ಐದು ರೂಪಾಯಿ ಬಹುಮಾನದ ಸಂಭಾವನೆ ಸಂದಿತ್ತುನಂತರ ಪದ್ಯ ಬರೆಬರೆದು ಯಾರಿಗೂ ತೋರಿಸದೇ ಬಚ್ಚಿಟ್ಟುಕೊಂಡು ಡೈರಿ ತುಂಬಿಸುತ್ತಹೋದರು ಅಂದಿನ ದಿನಗಳಲ್ಲಿ ಊರಿನಲ್ಲಿ ಕಂಡ ಹೆಣ್ಣುಮಕ್ಕಳ ದಾರುಣ ಪರಿಸ್ಥಿತಿಯ ಬದುಕುಇವರ ಮೇಲೆ ಅಪಾರ ಪ್ರಭಾವ ಬೀರಿತ್ತು.


ಪಿಯುಸಿಗೆ ಶಿವಮೊಗ್ಗದ ಡಿವಿಎಸ್ ಕಾಲೇಜು ಸೇರಿದರು ಇವರು ವಿಜ್ಞಾನ ವಿದ್ಯಾರ್ಥಿಯಾದರೂಕಾಲೇಜಿನಲ್ಲಿ ಕನ್ನಡ ಬೋಧಿಸುತ್ತಿದ್ದ ಶಿವಮೊಗ್ಗ ಮುನೀರ್ರಹಮತ್ ತರೀಕೆರೆ  ಅವರಪ್ರೋತ್ಸಾಹದಿಂದ ಕವನಸ್ಪರ್ಧೆಭಾಷಣಚರ್ಚಾ ಸ್ಪರ್ಧೆಪ್ರಬಂಧ ಸ್ಪರ್ಧೆಗಳಲ್ಲಿಪಾಲ್ಗೊಳ್ಳುತ್ತಿದ್ದರುಮುಂದೆ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪ್ರವೇಶದೊರೆಯಿತುಓದಿನ ದಿನಗಳಲ್ಲೂ ಬರೆದರು ಮುಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರತಾಲೂಕಿನ ಕವಲಕ್ಕಿಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸಲು ತೊಡಗಿದರುವೃತ್ತಿ ಮತ್ತುವೈವಾಹಿಕ ಜೀವನದಲ್ಲಿ ಬರೆಯಲು ಪುರಸೊತ್ತಿಲ್ಲದಿದ್ದರೂ ಕ್ರಮೇಣ ಬರಹಕ್ಕಿಳಿದರು 'ಕೆಂಡಸಂಪಿಗೆ'ಯಲ್ಲಿ ಬರೆದರು ಅನೇಕ ಪತ್ರಿಕೆಗಳಲ್ಲೂ ಬರೆದರು


"ಸಾಹಿತ್ಯ ಮತ್ತು ವೈದ್ಯಕೀಯ ಎರಡೂ ಬೇರೆ-ಬೇರೆ ಅಲ್ಲಅವು ಒಂದಕ್ಕೊಂದು ಪೂರಕಏಕೆಂದರೆ ವೈದ್ಯರಿಗೆ ಸಾಹಿತ್ಯಕೃಷಿಗೆ ಬಿತ್ತಲು ಬೇಕಾದ ಅತ್ಯಮೂಲ್ಯ ಬೀಜಗಳು ವಿಪುಲವಾಗಿದೊರೆಯುತ್ತವೆಬದುಕಿನ ಎಲ್ಲ ಬಣ್ಣಗಳನ್ನುಮನುಷ್ಯ ಸ್ವಭಾವಗಳನ್ನು ನೇರವಾಗಿ ಹತ್ತಿರದಿಂದನೋಡಲು ವೈದ್ಯವೃತ್ತಿಯಲ್ಲಿ ಸಾಧ್ಯವಿದೆಸಾಹಿತಿ ಅಥವಾ ಸಾಹಿತಿಯ ಮುಖ್ಯ ಉದ್ದೇಶಸಮಾಜದಲ್ಲಿ ಇರುವ ನೋವುದುಃಖಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಜನಸಮುದಾಯಕ್ಕೆಹೇಳುವುದುವೈದ್ಯರು ಮಾಡುವುದೂ ಅದನ್ನೇಹಾಗಾಗಿ ವೃತ್ತಿನಿರತರಾಗಿಯೂಚಳವಳಿಕಾರಳಾಗಲು ಚಿಮ್ಮುಹಲಗೆಯಂತೆ ವೈದ್ಯಕೀಯವು ಒದಗಿಬರುತ್ತದೆಹೀಗೆ ಪ್ರತಿನಿತ್ಯಹಳ್ಳಿಯ ಜನರ ಜೊತೆಗಿನ ಒಡನಾಟ ಓದುಗಳಾದ ನನ್ನನ್ನು ಬರಹಗಾರ್ತಿಯಾಗಿಸಂಘಟಿತಚಟುವಟಿಕೆಯಲ್ಲಿ ವಿಶ್ವಾಸವುಳ್ಳವಳನ್ನಾಗಿ ನನ್ನ ವೃತ್ತಿಯೂ ರೂಪಿಸಿತುಎನ್ನುತ್ತಾರೆ ಅನುಪಮಾ.


ಅನುಪಮಾ ಅವರು ಸಮಾನಾಸಕ್ತರೊಡನೆ 2007-08 ವೇಳೆಗೆ ಸಾಹಿತ್ಯಿಕಸಾಂಸ್ಕೃತಿಕಕಾರ್ಯಕ್ರಮಗಳನ್ನು ಹೊನ್ನಾವರದಲ್ಲಿ ಸಂಘಟಿಸಲು ಆರಂಭಿಸಿದರು ಸಂಪರ್ಕ ಜಾಲಬೆಳೆಯುತ್ತ ಹೋಯಿತುಸಾಹಿತಿಗಳಹೋರಾಟಗಾರರಸಂಘಟನೆಗಳ ನಂಟು ಬೆಳೆಯುತ್ತಹೋದಹಾಗೆ ವೈಚಾರಿಕವಾಗಿ ಬೆಳೆಯತೊಡಗಿದರು ಅಂಬೇಡ್ಕರ್ ಗಾಢವಾಗಿ ಪ್ರಭಾವಿಸಿದರುಇನ್ನಿತರ ಬರಹಗಾರರ ಬರಹಗಳೂ ಪ್ರಭಾವಿಸುತ್ತ ಹೋದವು.


ಹೀಗೆ ಗಾಢ ಬದುಕಿನ ಅನುಭವನೋಟವೃತ್ತಿಸಂಘಟನೆಓದು ಹೀಗೆ ಬಹುಮುಖಿತ್ವ ಏಕತ್ರನೆಲೆಯಾಗಿ ಸಂಪೂರ್ಣ ಅನುಭವದ ಸೆಲೆಯಲ್ಲಿ ಡಾಎಚ್ಎಸ್ಅನುಪಮಾ ಅವರಬರಹಗಳು ಪೂರ್ಣತೆ ಗಳಿಸಿಕೊಂಡಿವೆ


ವಿಫುಲವಾದ ಸಾಹಿತ್ಯ ರಚನೆ ಮಾಡಿರುವ ಅನುಪಮಾ ಅವರ ಬರಹಗಳಲ್ಲಿ ಕಾಡುಹಕ್ಕಿಯಹಾಡುಸಹಗಮನಬುದ್ಧ ಚರಿತೆ (ಖಂಡ ಕಾವ್ಯ), ಸಬರಮತಿ (ಕಥನ ಕಾವ್ಯ), ನೆಗೆವ ಪಾದದಜಿಗಿತ  ಸೇರಿದಂತೆ ಹಲವು ಕವನಸಂಕಲನಗಳುಬೆಳಗಿನೊಳಗು ಮಹಾದೇವಿಯಕ್ಕ ಕಾದಂಬರಿಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರುಕೋವಿಡ್ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಮುಂತಾದ  ಕಥಾಸಂಕಲನಗಳುಡಾಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾಬಿಆರ್ಅಂಬೇಡ್ಕರ್ ಜೀವನ ಚರಿತ್ರೆನಾನುಕಸ್ತೂರ್ – ಕಸ್ತೂರಬಾ ಜೀವನ ಕಥನಜನ ಸಂಗಾತಿ ಭಗತ್ಜ್ಯೋತಿಬಾ ಫುಲೆಕ್ರಾಂತಿ ಜ್ಯೋತಿಸಾವಿತ್ರಿಬಾಯಿ ಫುಲೆ  ಚರಿತ್ರೆ ಸೇರಿದಂತೆ ಹಲವು ಜೀವನ ಚರಿತ್ರೆಗಳುಮಹಿಳೆಸಂತಾನೋತ್ಪತ್ತಿಮತ್ತು ಮಾನಸಿಕ ಆರೋಗ್ಯಮುಟ್ಟು – ವಿಜ್ಞಾನಸಂಸ್ಕೃತಿ ಮತ್ತು ಅನುಭವ ಮುಂತಾದ  ವೈದ್ಯಕೀಯ ಬರಹಗಳ ಸಂಕಲನಗಳುನೈಲ್ ನದಿಯಗುಂಟ ಶರಾವತಿಯನರಸುತ್ತಅಂಡಮಾನ್ಕಂಡ ಹಾಗೆಚೆಗೆವಾರನ ನೆಲದಲ್ಲಿ ಸೇರಿದಂತೆ ಮೂರು ಪ್ರವಾಸಕಥನಬುದ್ಧಬೆಳಕಿನಲ್ಲಿ ಅಂಬೇಡ್ಕರ್ ಭಾರತಲೇಖನ ಸಂಗ್ರಹಸಂವಿಧಾನ ಮತ್ತು ಮಹಿಳೆಹೆಣ್ಣು ಹೆಜ್ಜೆ(ಮಹಿಳಾ ಮಾದರಿ ಮತ್ತು ಮಾರ್ಗ), ಅಭಿವ್ಯಕ್ತಿ ಸ್ವಾತಂತ್ರ್ಯ ವಿವಿಧ ಆಯಾಮಗಳುಮೋಟಾರ್ ಸೈಕಲ್ ಡೈರಿ, ಹಲವು ಅನುವಾದಸಂಪಾದನೆಸಹಸಂಪಾದನೆ ಸೇರಿದಂತೆ  59 ಕೃತಿಗಳನ್ನು ಪ್ರಕಟಿಸಿದ್ದು, 60ನೇ ಕೃತಿ ಶೀಘ್ರವೇ ಬರಲಿದೆ.



ಡಾಅನುಪಮಾ ಅವರಿಗೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳ ಸೇವೆಗಾಗಿ ಕರ್ನಾಟಕ ಸಾಹಿತ್ಯಅಕಾಡೆಮಿ ಪ್ರಶಸ್ತಿರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನಸಕಾಲಿಕ ಸಾಹಿತ್ಯ ಪ್ರಶಸ್ತಿಎಚ್ಶಾಂತಾರಾಂ ಪ್ರಶಸ್ತಿದೆಹಲಿ ಕರ್ನಾಟಕ ಸಂಘ ಪ್ರಶಸ್ತಿರಾಜಲಕ್ಷ್ಮಿ ಬರಗೂರು ಪ್ರಶಸ್ತಿಐಎಂಎ ಕನ್ನಡ ವೈದ್ಯ ಬರಹಗಾರರ ಸಂಘದ ಪ್ರಶಸ್ತಿ,  ಶಾಂತಾದೇವಿ ಕಣವಿ ಕಥಾ ಪ್ರಶಸ್ತಿಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ


Doctor, writer and activist Dr. H. S. Anupama 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ