ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕವಿತಾ ಗಿರೀಶ್


 ಕವಿತಾ ಗಿರೀಶ್


ಕವಿತಾ ಗಿರೀಶ್ ಉತ್ಸಾಹಿ ಬರಹಗಾರ್ತಿ. 

ಮಾರ್ಚ್ 5 ಕವಿತಾ ಅವರ ಜನ್ಮದಿನ. ಮೂಲತಃ ಇವರು ಉತ್ತರ ಕನ್ನಡದ ಯಲ್ಲಾಪುರದವರು. ತಂದೆ ಮಹಾನ್ ವಿದ್ವಾಂಸರಾದ ಅನಂತ ವೈದ್ಯ ಅವರು. ಕವಿತಾ  ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಎಮಿರೇಟ್ಸ್ ದೇಶದ ಶಾರ್ಜಾ ನಗರದಲ್ಲಿ ನೆಲೆಸಿದ್ದಾರೆ.

"ಓದುವುದು ನನ್ನ ಹವ್ಯಾಸ. ಓದಿನಿಂದ ಬರವಣಿಗೆ" ಎಂಬುದು ಕವಿತಾ ಅವರ ಸರಳ ಸುಸ್ಪಷ್ಟ ಮಾತು.  ಅವರ ಓದೇ ಅವರಲ್ಲಿನ ಅನುಭೂತಿಗಳಿಗೆ ಅಭಿವ್ಯಕ್ತಿ ತಂದು, ಅವರನ್ನು ಬರಹಗಾರ್ತಿಯಾಗಿಸಿದೆ.

ಕವಿತಾ ಅವರು ಹಲವು ನೀಳ್ಗತೆಗಳು, ಕವನಗಳು,‍ ಸಣ್ಣ ಕತೆಗಳು, ಲಲಿತ ಪ್ರಬಂಧಗಳನ್ನು ಮೂಡಿಸಿದ್ದು ಅವು ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಕಂಗೊಳಿಸಿವೆ. ಕೆಲವು ಸಂಕಲನಗಳಲ್ಲೂ ಕಂಗೊಳಿಸಿವೆ.

ಸಮಧುರ ಬರಹ ಶೈಲಿಯ, ಆಳ ಚಿಂತನಾಭಿವ್ಯಕ್ತಿಗಳುಳ್ಳ ಕವಿತಾ ಅವರ ಬರಹಗಳು ಕೃತಿಗಳಾಗಿಯೂ ಹೊರಹೊಮ್ಮುವ ದಿನಗಳು ದೂರವಿಲ್ಲ. 

ಕವಿತಾ ಗಿರೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Kavita Gireesh 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ