ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಂಬಿಕಾ ಶಾಸ್ತ್ರೀ

ಅಂಬಿಕಾ ಶಾಸ್ತ್ರೀ

ವಿದುಷಿ ಡಾ. ಅಂಬಿಕಾ ಶಾಸ್ತ್ರೀ ಅವರು ಸಂಗೀತ, ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ ತಳೆದವರಾಗಿದ್ದಾರೆ.

ಏಪ್ರಿಲ್ 6 ಅಂಬಿಕಾ ಶಾಸ್ತ್ರೀ ಅವರ ಜನ್ಮದಿನ.  ತಂದೆ ಆನಂದ ಶಾಸ್ತ್ರೀ.  ತಾಯಿ ಪದ್ಮಾವತಿ.  ಬಿ. ಎಸ್ಸಿ ಹಾಗೂ ಬಯೋಟೆಕ್ನಲ್ಲಿ ಎಂ. ಎಸ್‍ಸಿ ಪದವಿ ಪಡೆದಿರುವ ಅಂಬಿಕಾ ಅವರು ಸಂಗೀತದಲ್ಲಿ ಉನ್ನತ ದರ್ಜೆಯಲ್ಲಿ ವಿದ್ವತ್ ಪದವಿಯ ಸಾಧನೆ ಮಾಡಿದ್ದಾರೆ.  ಅವರು ಹರಿದಾಸರ ಜಾವಳಿಗಳನ್ನು ಕುರಿತು ಎಂ. ಫಿಲ್  ಮತ್ತು ಡಾಕ್ಟರೇಟ್ ಸಾಧನೆಯನ್ನೂ ಮಾಡಿದ್ದಾರೆ. 

ಅಂಬಿಕಾ ಶಾಸ್ತ್ರೀ ಅವರು ಮಹಾರಾಣಿ ಆರ್ಟ್ಸ್, ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಂಗೀತ ಅಧ್ಯಾಪನ ವೃತ್ತಿಯನ್ನೂ ಮಾಡುತ್ತಿದ್ದಾರೆ. ರಸಋಷಿ ಎಂಬ ಡಾ. ರಾ. ಸತ್ಯನಾರಾಯಣ ಅವರ ಸಂಸ್ಮರಣ ಸಂಸ್ಥೆಯಲ್ಲಿ ಎಂ. ಎ. ಸಂಗೀತ ಪದವಿಗೆ ಅಧ್ಯಾಪನ ಮಾಡುತ್ತಿದ್ದಾರೆ. ಪಂಚಮುಖಿ, ಷಣ್ಮುಖಿ ಮುಂತಾದ ತಾಳ ಅವಧಾನಗಳನ್ನು  ತಮ್ಮ ಗುರುಗಳ ಶಿಷ್ಯ ವೃಂದದ ಜೊತೆ, ಮೈಸೂರು ದಸರಾ,  ಗಾಯನ ಸಮಾಜ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ನಡೆಸಿಕೊಟ್ಟಿದ್ದಾರೆ.

ಅಂಬಿಕಾ ಶಾಸ್ತ್ರೀ ಅವರು ಶ್ರೀವಿದ್ಯಾ ಸಂಗೀತ   ಕಲಾಕ್ಷೇತ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ತಾತನವರಾದ ಸಂಗೀತ ವಿದ್ವಾನ್  ಸುಬ್ರಹ್ಮಣ್ಯ ಶಾಸ್ತ್ರಿಗಳ ಸ್ಮರಣೆಯಲ್ಲಿ ನೆಲಮಂಗಲ ಹಾಗೂ ಬೆಂಗಳೂರಿನಲ್ಲಿ ಸಂಗೀತ ತರಗತಿಗಳು, ಕಚೇರಿಗಳು, ವಿದ್ವತ್ ಗೋಷ್ಠಿಗಳು  ಮತ್ತು ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.

ತಮ್ಮ ಸಂಗೀತ ಗುರುಗಳಾದ ಚಿಂತಲಪಲ್ಲಿ ಪರಂಪರೆಯ ಡಾ. ಶ್ರೀಕಾಂತಮ್ ನಾಗೇಂದ್ರಶಾಸ್ತ್ರಿಗಳಲ್ಲಿ ಅಪಾರ ಗೌರವವುಳ್ಳ ಅಂಬಿಕಾ ಶಾಸ್ತ್ರೀ ಅವರು ಸಂಗೀತದಲ್ಲಿ ನಿಷ್ಠೆಯ ಸಾಧನೆ ಮಾಡಿ, ಹಲವು ಕಚೇರಿಗಳನ್ನೂ ಮಾಡುತ್ತಿದ್ದಾರೆ.  ತಮ್ಮ ಸಾಧನೆಯ ಹಾದಿಯಲ್ಲಿ ಅವರು ಪಡೆದ ಬಹುಮಾನಗಳೂ ಅನೇಕ. 

ಸದಾ ಹಸನ್ಮುಖ, ಸಂಗೀತ ಪ್ರೀತಿ, ಗುರು ಭಕ್ತಿ, ಆಧ್ಯಾತ್ಮ ವಿಚಾರಗಳ ಕುರಿತಾದ ನಿಷ್ಠೆ, ಆತ್ಮೀಯ ಸ್ವಭಾವಗಳಿಂದ ಕೂಡಿದ ಅಂಬಿಕಾ ಶಾಸ್ತ್ರಿ ಅವರು ನನ್ನ ಬರಹಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ.

ವಿದುಷಿ ಡಾ. ಅಂಬಿಕಾ ಶಾಸ್ತ್ರೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Ambika Shastry

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ