ಶಾಂತಾ ಅನಂತಸ್ವಾಮಿ
ಶಾಂತಾ ಅನಂತಸ್ವಾಮಿ
ಹಿರಿಯರಾದ ಶಾಂತಾ ಅನಂತಸ್ವಾಮಿ ಅವರು ಸುಗಮ ಸಂಗೀತ ಲೋಕದ ಆಚಾರ್ಯ ಅನಂತಸ್ವಾಮಿ ಕುಟುಂಬದ ಸೂತ್ರಧಾರಿಣಿ. ಇಂದು ಶಾಂತಾ ಅನಂತಸ್ವಾಮಿ ಅವರ ಜನ್ಮದಿನ.
ಶಾಂತಾ ಅವರು ತಮ್ಮ ಪತಿ ಅನಂತಸ್ವಾಮಿಗಳ ಭವ್ಯ ಸಾಧನೆಗೆ ನೆರಳಾಗಿದ್ದುದರ ಜೊತೆಗೆ ತಮ್ಮ ಮಕ್ಕಳಾದ ಸುನೀತಾ ಅನಂತಸ್ವಾಮಿ, ರಾಜು ಅನಂತಸ್ವಾಮಿ ಮತ್ತು ಅನಿತಾ ಅನಂತಸ್ವಾಮಿ ಅವರೂ ಸುಗಮ ಸಂಗೀತ ಲೋಕದ ದೀಪಗಳಾಗುವಂತೆ ಪೋಷಿಸಿದವರು. ಜೊತೆಗೆ ಈ ಮಹಾನ್ ಕಲಾವಿದರುಗಳ ಮೂಲಕ ಕನ್ನಡ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಸ್ರಾರು ಕಾವ್ಯ ರಚನಾಕಾರರು, ಸಂಗೀತಕಾರರು ಮತ್ತು ಕಾವ್ಯಾಭಿಮಾನಿಗಳು ಕನ್ನಡಕ್ಕೆ ನಿರಂತರವಾಗಿ ದೊರಕುವಂತೆ ಮಾಡಿದ ಶ್ರೇಯಸ್ಸು ಇವರದು.
ಪೂಜನೀಯರಾದ ಶಾಂತಾ ಅನಂತಸ್ವಾಮಿ ಅವರಿಗೆ ತುಂಬು ಹೃದಯದ ನಮನಗಳು ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Shantha Ananthaswamy Amma 🌷🙏🌷
ಕಾಮೆಂಟ್ಗಳು