ಅರ್ಷಿತಾ
ಅರ್ಷಿತಾ ಅಯ್ಯಂಗಾರ್
ಕನ್ನಡತಿ ಡಾ. ಅರ್ಷಿತಾ ಅಯ್ಯಂಗಾರ್ ಕಿರು ವಯಸ್ಸಿನಲ್ಲೇ ಉದ್ಯಮಿಯಾಗಿ ಯಶ ಸಾಧಿಸಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದವರು.
ಜೂನ್ 4 ಅರ್ಷಿತಾ ಅವರ ಜನ್ಮದಿನ. ಸ್ವರ್ಣ ಪದಕದೊಂದಿಗೆ ಎಂಜಿನಿಯರಿಂಗ್ ಪದವಿ, ಪಿಎಚ್.ಡಿ ಪದವಿ ಪಡೆದಿರುವ ಅರ್ಷಿತಾ ವಿಜ್ಞಾನಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ.
ಹಲವು ಉದ್ಯಮದಲ್ಲಿ ಸಾಕಷ್ಟು ಸಾಧಿಸಿರುವ ಅರ್ಷಿತಾ ಅವರ ಸಾಧನೆಗಳು, ಉದ್ಯಮ ಸಾಧಕ ಮಹಿಳೆಯರಲ್ಲಿ ಅವರಿಗೆ ಸ್ಥಾನ ಗಳಿಸಿಕೊಟ್ಟಿವೆ. ಅವರ ನೇತೃತ್ವದಲ್ಲಿನ ಸಂಸ್ಥೆಗಳಲ್ಲಿ ಆಯುಷ್ ಎಕ್ಸ್ಪೋರ್ಟ್ಸ್, ಆಯುಷ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಅಂಡ್ ಅಪೇರಲ್ ಇಂಜಿನಿಯರಿಂಗ್, ಆಸ್ಪೈರ್ ಹೆಲ್ತ್ ಕೇರ್ ಪ್ರಾಡಕ್ಟ್ಸ್, ಆಯುಷ್ ಸಿಮೆಂಟ್ ಪ್ರಾಡಕ್ಟ್ಸ್, ಸ್ವಾನಿಷ್ ಕನ್ಸ್ಟ್ರಕ್ಷನ್ ಅಂಡ್ ಕನ್ಸಲ್ಟೆನ್ಸಿ, ಆಡ್ ಎಂಜಿನಿಯರಿಂಗ್ ಕಂಪೊನೆಂಟ್ಸ್ ಉದ್ಯಮಗಳು ಸೇರಿವೆ. JICE IAS Academy ಎಂಬ ಉನ್ನತ ಪ್ರವೇಶ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಸಂಸ್ಥೆಯ ಪಾಲುದಾರಿಕೆಯ ನಿರ್ವಹಣೆ ಸಹಾ ಇವರ ಸುಪರ್ದಿಯಲ್ಲಿದೆ.
ಅರ್ಷಿತಾ ಅವರ ಬರಹಗಳು ಅನೇಕ ಪತ್ರಿಕೆಗಳು ಮತ್ತು ಉದ್ಯಮ ಸಂಬಂಧಿತ ನಿಯತಕಾಲಿಕಗಳಲ್ಲಿ ಮೂಡಿವೆ.
ಜನಪರ ಕಾಳಜಿಗಳ ಅರ್ಷಿತಾ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತೂ ಒಲವುಳ್ಳವರು.
ಅರ್ಷಿತಾ ಅವರಿಗೆ ಎಂ .ಎಸ್ .ಎಂ.ಇ. ಬ್ಯುಸಿನೆಸ್ ಟೈಕೂನ್ ಅವಾರ್ಡ್, ಎಂ .ಎಸ್ .ಎಂ.ಇ. ಮ್ಯಾನುಫ್ಯಾಕ್ಚರಿಂಗ್ ಎಕ್ಸೆಲೆನ್ಸ್ ಅವಾರ್ಡ್, ಯಂಗ್ ವುಮನ್ ಅಚೀವರ್ ಅವಾರ್ಡ್, 13760 ಜನರಿಗೆ ತರಬೇತಿ ನೀಡಿ ಗಾರ್ಮೆಂಟ್ಸ್ ಉದ್ಯಮದಲ್ಲಿ ಸೇರ್ಪಡೆಗೊಳಿಸಿದ ಜೀವಮಾನ ಸಾಧನೆಗಾಗಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ ಮುಂತಾದ ಅನೇಜ ಪ್ರಶಸ್ತಿ ಗೌರವಗಳು ಸಂದಿವೆ.
ಅರ್ಷಿತಾ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ
Happy birthday Arshitha Iyengar
ಕಾಮೆಂಟ್‌ಗಳು