ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದರ್ಶನ್ ಜಯಣ್ಣ


 ದರ್ಶನ್ ಜಯಣ್ಣ


ಆತ್ಮೀಯ ಗೆಳೆಯ ದರ್ಶನ್ ಜಯಣ್ಣ ಅಪರಿಮಿತ ಉತ್ಸಾಹಿ ಜೀವಿ ಮತ್ತು ವಿಶಿಷ್ಟ ಬರಹಗಾರ.  ಸೌದಿ ಅರೇಬಿಯಾದಲ್ಲಿದ್ದು ಚೆಲುವಾದ ಸಿರಿಗನ್ನಡವನ್ನು ಉಸುರುವ ದರ್ಶನ್ ಜಯಣ್ಣ  ಅವರು ನೀಡುವ ದರ್ಶನ ವಿಶಿಷ್ಟ ಚೆಲುವಿನದು.

ಆಗಸ್ಟ್ 16, ನಮ್ಮ ದರ್ಶನ್ ಜಯಣ್ಣ ಅವರ ಜನ್ಮದಿನ.  ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು.  ಆಡಿ ಬೆಳೆದದ್ದು ಮತ್ತು ಶಾಲೆ ಕಲಿತದ್ದು ತುಮಕೂರಲ್ಲಿ. ಮುಂದೆ ಬೆಂಗಳೂರಿನ ಆರ್‍.ವಿ.ಸಿ.ಇ. ಇಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. 

ದರ್ಶನ್ ಜಯಣ್ಣ ಮಂಗಳೂರಿನ ಎಂಸಿಎಫ್,  ಬೆಂಗಳೂರಿನ ಜಿಇ ಮುಂತಾದ ಸಂಸ್ಥೆಗಳಲ್ಲಿ ಕೆಲಕಾಲ ಕೆಲಸ ನಿರ್ವಹಿಸಿದ ನಂತರದಲ್ಲಿ  ಕಳೆದ ಕೆಲವು ವರ್ಷಗಳಿಂದ ಸೌದಿ ಅರೇಬಿಯಾ ದೇಶದಲ್ಲಿ ಪೆಟ್ರೋಕೆಮಿಕಲ್ಸ್ ನಲ್ಲಿ (ಈ ಪುಟ್ಟ ಯುವಕ) 'ಹಿರಿಯ ವಿಜ್ಞಾನಿಯಾಗಿ' ಕಾರ್ಯ ನಿರ್ವಹಿಸುತ್ತಿದ್ದಾರೆ. 

ದರ್ಶನ್ ಜಯಣ್ಣ ಅವರಲ್ಲಿ ಅಪರಿಮಿತ ಕನ್ನಡ ಸಾಹಿತ್ಯ ಪ್ರೇಮ ಮತ್ತು ಬರಹ ಸಾಮರ್ಥ್ಯ ತುಂಬಿರುವುದನ್ನು ಕನ್ನಡದ ಓದುಗರು ಮತ್ತು ಹಿರಿಯ ಬರಹಗಾರರು ಮೆಚ್ಚುಗೆಗಳಿಂದ ಗುರುತಿಸಿದ್ದಾರೆ. ಇವರ ಬರಹಗಳು ಪ್ರಸಿದ್ಧ ಪತ್ರಿಕೆಗಳು ಮತ್ತು ಅಂತರಜಾಲಗಳಲ್ಲಿ ಪ್ರವಹಿಸುತ್ತಿದೆ. “ಪದ್ಯ ಸಿಕ್ಕಿತು" ಕವನ ಸಂಕಲನ ಹಾಗೂ "ಅಪ್ಪನ ರ್‍ಯಾಲೀಸ್ ಸೈಕಲ್" ಪ್ರಬಂಧ ಸಂಕಲನ ಪ್ರಕಟಗೊಂಡು ಬಹಳಷ್ಟು ಭವಿಷ್ಯದ ಭರವಸೆಗಳನ್ನು ಮೂಡಿಸಿವೆ. 

"ಓದು ಮತ್ತು ದೇಶ ಸುತ್ತುವುದು ಬದುಕಿನ ಒಂದು ಭಾಗ" ಎಂಬುದು ದರ್ಶನ್ ಜಯಣ್ಣ ಅವರ  ಬಲವಾದ ನಂಬಿಕೆ. ಅರ್ಥಶಾಸ್ತ್ರ ಮತ್ತು ಇತಿಹಾಸ ಸಂಬಂಧಿ ವಿಷಯಗಳಲ್ಲಿಯೂ ಇವರಿಗೆ ವಿಶೇಷ ಆಸಕ್ತಿ.

ಆತ್ಮೀಯ ಉತ್ಸಾಹಿ ದರ್ಶನ್ ಜಯಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.  ನನಗೆ ವೈಯಕ್ತಿಕವಾಗಿ ದುಬೈಗೆ ಮತ್ತು ಬೆಂಗಳೂರಿಗೆ ತಾವು ಪುಸ್ತಕಗಳನ್ನು ತಲುಪಿಸಿದ ಅಕ್ಕರೆಯನ್ನು ಮರೆಯಲಾರೆ. ತಮಗೂ ತಮ್ಮ ಕುಟುಂಬದವರಿಗೂ ಬದುಕು ಭವ್ಯವಾಗಿರಲಿ. 

Happy birthday Darshan Jayanna 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ