ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಘುನಂದನ್ ಶೇಷಣ್ಣ


ರಘುನಂದನ್ ಶೇಷಣ್ಣ


ರಘುನಂದನ್ ಶೇಷಣ್ಣ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಲೋಕದಲ್ಲಿ ಪ್ರತಿಭಾನ್ವಿತ ಕಲಾವಿದರಾಗಿ ಜನಪ್ರಿಯರು.  ಅಂತೆಯೇ ಅವರು ವೃತ್ತಿಯಲ್ಲಿಯೂ ಯಶಸ್ವೀ ಸಿವಿಲ್ ಇಂಜಿನಿಯರ್ ಆಗಿದ್ದಾರೆ.  ಅಪಾರ ಸಾಹಿತ್ಯಾಸಕ್ತಿ ಉಳ್ಳ ಅವರು ಬರಹಗಾರರೂ ಆಗಿದ್ದಾರೆ.

ಆಗಸ್ಟ್ 6 years ರಘುನಂದನ್ ಶೇಷಣ್ಣ ಅವರ ಜನ್ಮದಿನ. ಅವರ ವಿದ್ಯಾಭ್ಯಾಸವೆಲ್ಲ ಬೆಮಗಳೂರಿನಲ್ಲಿ ನೆರವೇರಿತು.  ಬೆಂಗಳೂರು ಹೈಯರ್ ಸೆಕೆಂಡರಿ ಶಾಲೆ, ನ್ಯಾಷನಲ್ ಕಾಲೇಜು ಮತ್ತು ಎಂಇಐ ಪಾಲಿಟೆಕ್ನಿಕ್ ಅವರು ಓದಿದ ಸಂಸ್ಥೆಗಳು. 

ರಘುನಂದನ್ ಶೇಷಣ್ಣ ಸಿವಿಲ್ ಇಂಜಿನಿಯರ್ ಆಗಿ ಪ್ರಸಿದ್ಧ ಸಂಸ್ಥೆಗಳಲ್ಲಿ ಅಧಿಕಾರಿಗಳಾಗಿ ದುಡಿದವರು.  ಜೊತೆಗೆ ನಟನೆ, ಸಾಹಿತ್ಯಾಧ್ಯಯನ, ಬರವಣಿಗೆ ಸಹಾ ಅವರ ಜೊತೆಗೂಡಿತ್ತಾ ಸಾಗಿತು. 

ರಘುನಂದನ್ ಶೇಷಣ್ಣ ಅವರು ಬಾಲನಟನಾಗಿ ಆರಂಭಿಸಿ, ಕನ್ನಡದ ವಿಖ್ಯಾತ ರಂಗತಂಡಗಳಾದ ನಾಟ್ಯದರ್ಪಣ, ಸ್ಪಂದನ, ಪ್ರಯೋಗರಂಗ ಮುಂತಾದ ತಂಡಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿ ಯಶಸ್ವಿಯಾಗಿದ್ದಾರೆ. ಸಿಕ್ಕು, ಲಕ್ಷಾಪತಿ ರಾಜನ ಕಥೆ, ಕರಿಮಾಯಿ, ಮಂಟೇಸ್ವಾಮಿ ಕಥಾ ಪ್ರಸಂಗ ಮುಂತಾದ ಅನೇಜ ನಾಟಕಗಳಲ್ಲಿ ಗಮನ ಸೆಳೆದ ಪಾತ್ರಪೋಷಣೆ ಇವರದ್ದು. ಧಾರಾವಾಹಿಗಳು, ಕಿರುಚಿತ್ರಗಳು, ಜಾಹೀರಾತು ಚಿತ್ರಗಳು ಮತ್ತು ಚಲನಚಿತ್ರಗಳಲ್ಲೂ ಹೀಗೆ ಎಲ್ಲೆಲ್ಲೂ ಅವರ ಅಭಿನಯ ಪ್ರತಿಭೆ ಬೆಳಗಿದೆ. ಧ್ವನಿ ನೀಡಿಕೆಯಲ್ಲೂ ಅವರದ್ದು ಹೆಸರಾಂತ ಪ್ರತಿಭೆ.  

ರಘುನಂದನ್ ಶೇಷಣ್ಣ ಮತ್ತು ಅವರ ಪತ್ನಿ ರೋಹಿಣಿ ರಘುನಂದನ್ Rohini Raghunandan ಇಬ್ಬರೂ ಕಲಾಲೋಕದಲ್ಲಿ ತಮ್ಮ ಅಪ್ರತಿಮ ಪ್ರತಿಭೆಗಳಿಗೆ ಹೆಸರಾಗಿರುವುದು ವಿಶೇಷವಾದದ್ದು.
 
ಆಪ್ತರಾದ ರಘುನಂದನ್ ಶೇಷಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Raghunandan Seshanna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ