ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಮ್ಮ ಇಂಜಿನಿಯರುಗಳು


ನಮ್ಮ ಕೆಲವು ಅಮೂಲ್ಯ ಇಂಜಿನಿಯರುಗಳು

Few of our great engineers to be remembered in this Engineers Day 

ಇಂಜಿನಿಯರುಗಳ ದಿನದಂದು ನಮ್ಮ ಭಾರತೀಯ ಬದುಕಿನಲ್ಲಿ ತಂತ್ರಜ್ಞಾನದಿಂದ ಹೊಸ ರೀತಿಯ ಅಭಿವೃದ್ಧಿ ತಂದ ಅನೇಕ ಮಹನೀಯರು ನೆನಪಾಗುತ್ತಾರೆ.  ಅವರಲ್ಲಿ ಕೆಲವರನ್ನಾದರೂ ನೆನೆಯಬೇಕು ಎಂದನಿಸಿತು.

ಸರ್ ಎಂ. ವಿಶ್ವೇಶ್ವರಯ್ಯ - ಅವರ ಹೆಸರಿನಲ್ಲೇ ನಾವು ಈ ಇಂಜಿನಿಯರಗಳ ದಿನವನ್ನು ಆಚರಿಸುತ್ತಿದ್ದೇವೆ.

ವಿಕ್ರಂ ಸಾರಾಭಾಯಿ - ಭಾರತೀಯ ಅಂತರಿಕ್ಷ ಕಾರ್ಯಗಳ ಜನಕ

ಸತೀಶ್ ಧವನ್ - ಏರೋಸ್ಪೇಸ್ ತಂತ್ರಜ್ಞರು

ಶಾಂತಿ ಸ್ವರೂಪ್ ಭಟ್ನಾಗರ್ - ಅನೇಕ ಸಂಶೋಧನಾ ಪ್ರಯೋಗಾಲಯಗಳ ನಿರ್ಮಾತೃ

ರಾಜಾ ರಾಮಣ್ಣ - ಹೋಮಿ ಭಾಭಾ ಅವರ ನಂತರದಲ್ಲಿ ಪರಮಾಣು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರಧಾರಿ

ಯು. ಆರ್. ರಾವ್ - ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮಹತ್ವದ ಪ್ರಗತಿ ತಂದವರು

ಎಂ. ವಿ. ಗೋಪಾಲ ಸ್ವಾಮಿ - ಸ್ವಯಂ ಆಸಕ್ತಿಯಿಂದ ಆಕಾಶವಾಣಿ ಕೇಂದ್ರ ಸ್ಥಾಪಿಸಿದವರು

ಸ್ಯಾಮ್ ಪಿತ್ರೋಡಾ - ಆಧುನಿಕ ಭಾರತದ ಸಂವಹನ ಕ್ಷೇತ್ರದ ಸುಧಾರಣೆಯ ಹರಿಕಾರ

ಜೆ ಆರ್ ಡಿ ಟಾಟಾ - ಭಾರತೀಯ ಕೈಗಾರಿಕೋದ್ಯಮದಲ್ಲಿ ದೊಡ್ಡ ಪ್ರಗತಿ ತಂದವರು

ಇ. ಶ್ರೀಧರನ್ - ಭಾರತೀಯ ಸಾರ್ವಜನಿಕ ಪಯಣದಲ್ಲಿ ಕ್ರಾಂತಿ ತಂದ ಮಹಾನ್ ತಂತ್ರಜ್ಞ

ಅಬ್ದುಲ್ ಕಲಾಂ - ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ ಮತ್ತು ಪರಮಾಣು ಪರೀಕ್ಷಣಾ ಕಾರ್ಯಗಳ ನೇತೃತ್ವ ವಹಿಸಿದ್ದಿಲ್ಲದೆ ದೇಶದ ರಾಷ್ಟ್ರಪತಿಗಳಾಗಿದ್ದವರು

ಎಂ. ಎನ್. ಸ್ವಾಮಿನಾಥನ್ - ಹಸಿರು ಕ್ರಾಂತಿಯ ಹರಿಕಾರರು

ವರ್ಗಿಸ್ ಕುರಿಯನ್ - ಹಾಲು ಉತ್ಪದನೆಯಲ್ಲಿ ಕ್ರಾಂತಿ ತಂದವರು

ಅಜಿಮ್ ಪ್ರೇಮ್ಜಿ - ಅನೇಕ ಕ್ಷೇತ್ರಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಪಡಿಸಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೈ ದಾನಿಯಾದವರು

ಎನ್. ಆರ್. ನಾರಾಯಣ ಮೂರ್ತಿ - ಐ ಟಿ ತಂತ್ರಜ್ಞಾನದಲ್ಲಿ ಭಾರತವನ್ನು ಎತ್ತರಕ್ಕೇರಿಸಿದವರು

ಕಿರಣ್ ಮಜುಂದಾರ್ - ಬಯೊ ಟೆಕ್ನಾಲಜಿಸ್ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳಿಗೆ ನಾಂದಿ ಹಾಡಿದವರು

ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ವಿಮಾನಯಾನ ವ್ಯವಸ್ಥೆಯನ್ನು ಜನಸಾಮಾನ್ಯರ ಬಳಿತಂದು,  ಆ ಉದ್ಯಮಕ್ಕೆ ವ್ಯಾಪಕತೆ  ತಂದವರು

ಬಿಂದೇಶ್ವರ್ ಪಾಠಕ್ - ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ಸಮರ್ಥ ಮಲ ನಿರ್ವಹಣಾ ವ್ಯವಸ್ಥೆ ರೂಪಿಸಿ ಜನರ ಕಷ್ಟಗಳನ್ನು ನಿವಾರಿಸಿದವರು

ಬಿ. ಪಿ. ರಾಧಾಕೃಷ್ಣ - ಭೂಮಿಯಲ್ಲಡಗಿರುವ ನೀರನ್ನು ಕುಡಿಯುವ ನೀರಿನ ವ್ಯವಸ್ಥೆಗೆ ಬಳಸಬಹುದೆಂಬ ಒಳನೋಟವನ್ನು ನೀಡಿ ನಜೀರ್ ಸಾಬ್ ಅವರ ಮೂಲಕ ನೀರಿನ ತಾಪತ್ರಯ ನೀಗಿಸಲು ಕಾರಣರಾದವರು

ಕೆ. ಪಿ. ರಾವ್ - ಭಾರತೀಯ ಭಾಷೆಗಳು ಕಂಪ್ಯೂಟರಿನಲ್ಲಿ ಬೆಳಕು ಕಾಣುವುದಕ್ಕೆ ಪ್ರಮುಖ ಕೊಡುಗೆದಾರರಾದವರು.

ಅನಂತ ಸುಬ್ಬರಾಯರು - ಕನ್ನಡ ಟೈಪರೈಟರ್ ಮೂಡಲು ಅಗತ್ಯವಾದ ಕೀಲಿ ಮಣೆ ಅನಂತ ಕೀಬೋರ್ಡ್ ರೂಪಿಸಿದವರು

ನಂದನ್ ನೀಲೇಕಣಿ - ಆಧಾರ್ ವ್ಯವಸ್ಥೆಯನ್ನು ಸಮಾರ್ಥವಾಗಿ  ರೂಪಿಸಿದವರು 

ದಾದಾ ಸಾಹೇಬ್ ಫಾಲ್ಕೆ : ಭಾರತದಲ್ಲಿ ಚಲನಚಿತ್ರ ಯುಗ ಆರಂಭಿಸಿದವರು

ರಾಹುಲ್ ಬಜಾಜ್ - ಭಾರತೀಯ ವಾಹನ ವ್ಯವಸ್ಥೆಗಳಲ್ಲಿ ಘನ  ಹೆಸರಾದ ಬಜಾಜ್ ಉದ್ಯಮಿ

ಶ್ರೀಧರ್ ನಾಗರಾಜ್ ಅಥವಾ ಆರ್. ಎನ್.  ಶ್ರೀಧರ್ - ಇವರ ಶ್ರಮವನ್ನು ಎಲ್ಲರೂ ಬಳಸುತ್ತೇವೆ.  ಸರ್ಕಾರವಾಗಲಿ, ಪರಿಷತ್ ಆಗಲಿ, ಪತ್ರಿಕೆಗಳಾಗಲಿ, ಕನ್ನಡ ಕನ್ನಡ ಎಂದು ದೊಡ್ಡ ಮಾತಾಡುವವರಾಗಲಿ, ಜನ ಸಾಮಾನ್ಯರಾಗಲಿ ಇವರನ್ನು ನೆನೆಯುವುದೇ ಇಲ್ಲ.  ಇವರೇ 'ಜಸ್ಟ್ ಕನ್ನಡ' ಕನ್ನಡ ಕೀ ಬೋರ್ಡ್ ಅನ್ನು ಮೊಬೈಲುಗಳಿಗೆ ನೀಡಿರುವ ಯುವ ತಂತ್ರಜ್ಞ

ನೆನೆಯಬೇಕಾದ ತುಂಬಾ ತಂತ್ರಜ್ಞರಿದ್ದಾರೆ.  ಕಡೇ ಪಕ್ಷ ಪ್ರಾರಂಭವಾದರೂ ಮಾಡೋಣ ಎಂಬ ಪ್ರಯತ್ನ ಇದು.  ಇಲ್ಲಿ ಹೆಸರಿಸಿರುವ ಮತ್ತು ಇನ್ನೂ ಅನೇಕ ತಂತ್ರಜ್ಞರು ಮತ್ತು ವಿಜ್ಞಾನಿಗಳನ್ನು ನನ್ನ ಕನ್ನಡ ಸಂಪದ  Kannada Sampada ಪುಟ ಮತ್ತು www.sallapa.com ನಲ್ಲಿ ಓದಬಹುದು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ