ಮಂಜುನಾಥ ಕೊಳ್ಳೇಗಾಲ
ಮಂಜುನಾಥ ಕೊಳ್ಳೇಗಾಲ
ವೃತ್ತಿಯಲ್ಲಿ ಆರ್ಥಿಕ ಮತ್ತು ಐಟಿ ತಜ್ಞರಾದ ಮಂಜುನಾಥ ಕೊಳ್ಳೇಗಾಲ ಅವರು ಪ್ರವೃತ್ತಿಯಿಂದ ಭಾಷಾಶಾಸ್ತ್ರಜ್ಞರಾಗಿ ಹಾಗೂ ಅಳವಾದ ಅಧ್ಯಯನಗಳ ಹಿನ್ನೆಲೆಯನ್ನು ಹೊಂದಿರುವ ವಿದ್ವಾಂಸರಾಗಿ, ಬೆರಗು ಹುಟ್ಟಿಸುವ ಬರಹಗಾರರಾಗಿ ನಮ್ಮ ನಡುವೆ ಕಂಗೊಳಿಸುತ್ತಿದ್ದಾರೆ.
ಕೊಳ್ಳೇಗಾಲದಲ್ಲಿ ಓದಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದ ಮಂಜುನಾಥ್ ಅವರು ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಇಂಟರ್ ಸಾಧನೆ ಮಾಡಿದರು.
ಮಂಜುನಾಥ ಕೊಳ್ಳೇಗಾಲ ಅವರು ಭಾರತದಲ್ಲಿನ ಅಂತರರಾಷ್ಟ್ರೀಯ ಪ್ರಸಿದ್ಧವಾದ ಐಟಿ ಉದ್ಯಮಗಳಲ್ಲಿ ERP ತಜ್ಞ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರವೃತ್ತಿಯಿಂದ ಮಂಜುನಾಥ್ ಅವರು ಮಹತ್ವದ ಭಾಷಾ ಶಾಸ್ತ್ರಜ್ಞ ಮತ್ತು ಬಹುಮುಖಿ ವಿದ್ವಾಂಸರು. ಇವರಿಗೆ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಸಂಸ್ಕೃತವೂ ಸೇರಿದಂತೆ ಬಹುಭಾಷಾ ತಜ್ಞತೆ ಇದೆ. ಸುಶ್ರಾವ್ಯವಾಗಿ ಹಾಡುತ್ತಾರೆ.
ಯಾವುದೇ ವಿಚಾರವನ್ನಾಗಲಿ ಸುದೀರ್ಘ ಅಧ್ಯಯನದ ಆಳದಿಂದ, ವಿವೇಚನೆಯುಳ್ಳ ಪರಾಮರ್ಶೆಯಿಂದ, ಹೃದಯ ಸಂವೇದನೆಗಳುಳ್ಳ ಆಪ್ತತೆಯಿಂದ ತೆರೆದಿಡುವ ಮಂಜುನಾಥರ ಬರಹಗಳು ಆಪ್ತತೆ ಹುಟ್ಟಿಸುವಂತದ್ದು. ಅವರ ಉಪನ್ಯಾಸಗಳೂ ಅಷ್ಟೇ ಸುಮಧುರ.
ಎಲ್ಲರೊಡನೆ ಒಂದಾಗಿರುವ ಸಹೃದಯಿ ವಿದ್ವಾಂಸರಾದ ಮಂಜುನಾಥ ಕೊಳ್ಳೇಗಾಲ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
Manjunatha Kollegala 🌷🙏🌷
ಕಾಮೆಂಟ್‌ಗಳು