ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೂಗಲ್




ಗೂಗಲ್ 

Happy Birth Day Google.  

26 ತುಂಬಿದ ಅಮೂಲ್ಯ ಒಡನಾಡಿ ಗೂಗಲ್ಗೆ ಹುಟ್ಟುಹಬ್ಬದ ಶುಭಾಶಯ

ಇಂದು ಮಕ್ಕಳಿಂದ ಹಿರಿಯರವರೆಗೆ, ಎಲ್ಲ ದೇಶ ಪ್ರಾಂತ್ಯಗಳ ಎಲ್ಲರಿಗೂ ಯಾವುದೇ ವಿಚಾರ ಬೇಕಾದರೂ ಮೊದಲು ನೆನಪಾಗುವ ಹೆಸರು ಗೂಗಲ್.  ಕೆಲವೇ ವರ್ಷಗಳ ಹಿಂದೆ ಏನಾದರೂ ವಿಚಾರ ತಿಳಿಯಬೇಕಾದರೆ ಊರೂರು ಅಲೆದು, ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಪುಸ್ತಕದ ಧೂಳಿನ ಮಧ್ಯೆ ಜನ ಕಳೆದುಹೋಗಬೇಕಿತ್ತು.  ಸಹಸ್ರಾರು ಪುಟಗಳ ಮಧ್ಯೆ ತಮಗೆ ಬೇಕಿದ್ದ ವಿಚಾರಗಳನ್ನು ಅರಸಿ ಕಣ್ಣಲ್ಲಿ ಕಣ್ಣಿಟ್ಟು ಹುಡುಕಬೇಕಿತ್ತು.  ಇಂದು ವಿಶ್ವದಲ್ಲಿ ಸಣ್ಣ ಸೂಜಿಯಿಂದ ಮೊದಲ್ಗೊಂಡು ಬೃಹತ್ ಬ್ರಹ್ಮಾಂಡದವರೆವಿಗೆ ಯಾವುದೇ ಜ್ಞಾನವನ್ನು ಬೇಕಾದರೂ ಈ ಗೂಗಲ್ ಎಂಬ ಕಿಂಡಿಯ ಮೂಲಕ ನಾವು ಪಡೆದುಕೊಳ್ಳಬಹುದಾಗಿದೆ. ಎಲ್ಲಿಗೆ ಹೋಗಬೇಕಾದರೂ 'ದಾರಿ ಯಾವುದಯ್ಯಾ?' ಎಂದು ದಾಸರಪದ ಹಾಡಬೇಕಿಲ್ಲ.  ಗೂಗಲ್ ಇದೆಯಲ್ಲಾ ಇನ್ಯಾಕೆ ಚಿಂತೆ?  

ಆದರೆ ಒಂದು ವಿಚಾರ ನಾವು ನೆನಪಿಡಬೇಕು.  ಗೂಗಲ್ನಲ್ಲಿ ಏನು ಬೇಕಾದರೂ ಉತ್ತರ ಸಿಗಬಹುದು.  ಅದಕ್ಕೆ ಏನು ಪ್ರಶ್ನೆ ಕೇಳಬೇಕು ಎಂದು ನಾವು ತಿಳಿದಿರಬೇಕು. ಅಂತೆಯೇ ಪರಮಾತ್ಮನ ಬಳಿ ಕೂಡಾ ಏನೆಲ್ಲ ಇರುತ್ತೆ. ಆತ ಕೊಡಬಲ್ಲ. ಅವನನ್ನು ಏನು ಕೇಳಬೇಕು, ಏನು ಕೇಳಬಾರದು ಎಂಬ ಅರಿವಿನಲ್ಲಿ ನಾವು ಬದುಕಬೇಕು.

ಈ ಗೂಗಲ್ ಎಂಬ ಸುಲಭಸಾಧ್ಯತೆಯ ಅಸಾಮಾನ್ಯತೆಗೆ, ಇಂತಹ ಸೃಷ್ಟಿಯನ್ನು ಯೋಚಿಸಿದಾಗ ಮನುಷ್ಯನಿಗಿರುವ ಅಪರಿಮಿತ ಸೃಷ್ಟಿ ಸಾಧ್ಯತೆಗಳಿಗೆ, ಇಂತಹ ಏನನ್ನು ಬೇಕಾದರೂ ಸೃಷ್ಠಿಯನ್ನು ಮಾಡಲು ಸಮಗ್ರತೆಯ ಸೃಷ್ಠಿಕರ್ತ ನೀಡಿರುವ ಸ್ವಾತಂತ್ರ್ಯಕ್ಕೆ  ಮೆಚ್ಚುಗೆ ಮತ್ತು ವಂದನೆಗಳನ್ನು ಸೂಚಿಸುತ್ತಾ ಈ ವಿಶ್ವಪ್ರಿಯ ಗೂಗಲ್ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸೋಣ.

Once were the days, we were depending upon the dust occupied books in Government libraries to search for anything by walking/travelling several kilometers.  Still there was no guarantee to the precision with which we were looking for the information. Today whether it is for the school projects of the kids, way to friends house, unknown shopping mall, tourist place or any subject to the extent from tiny needle to comprehensive view of the universe, we are able to search for the information by a click of a word or better to say the world itself 'GOOGLE'.  

But let us not forget one thing.  Google may give any answers. We should have appropriate questions.  So is almighty have everything to give.  We should live in the awareness of what to seek and what not.

Thanks for those who did it so enormous, with such a simplicity and thanks also to the creator who is kind and magnanimous to give such a beautiful freedom to the mankind  to do such wonderful things amongst themselves.  Thanks and long live GOOGLE.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ