ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಧರ ಬಾಣಾವರ


ಶ್ರೀಧರ ಬಾಣಾವರ


ಶ್ರೀಧರ ಬಾಣಾವರ ಅವರ, ಓದು ವಿಜ್ಞಾನ, ವೃತ್ತಿ ವಾಣಿಜ್ಯ, ಅಭಿಮಾನ ಸಾಹಿತ್ಯ, ಬರಹ ವೈವಿಧ್ಯ.

ಶ್ರೀಧರ ಅವರು 1951ನೇ ಸೆಪ್ಟೆಂಬರ್ 19ರಂದು ಜನಿಸಿದರು.  ಅವರ ಊರು ಬಾಣಾವರ.  ಬಾಣಾವರದಲ್ಲಿ ಶಾಲಾ ಓದಿನ ನಂತರ ಮೈಸೂರಿನಲ್ಲಿ ಓದಿದರು. ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಡುಕೇಷನ್ ಇಂದ ಬಿ.ಎಸ್‍ಸಿ ಬಿ.ಎಡ್ ಎಂಬ ನಾಲ್ಕುವರ್ಷದ ಸಂಯುಕ್ತ ಪದವಿ ಗಳಿಸಿದರು.

ಶ್ರೀಧರ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮೂಲಕ ಬ್ಯಾಂಕಿಗ್ ಕ್ಷೇತ್ರಕ್ಕೆ ಪ್ರವೇಶಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಸಮೂಹದ ಹಲವು ಬ್ಯಾಂಕುಗಳಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ವರೆಗಿನ ಹುದ್ದೆ ನಿರ್ವಹಿಸಿ ನಿವೃತ್ತರಾಗಿದ್ದಾರೆ.  ಬ್ಯಾಂಕಿಂಗ್ ಕ್ಷೇತ್ರದಲ್ಲಿನ ವೈವಿಧ್ಯಮಯ ಜವಾಬ್ದಾರಿಗಳನ್ನು ನಿರ್ವಹಿಸಿದ ಇವರು, ಅಲ್ಲಿನ ಐಟಿ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ನಿವೃತ್ತಿಯ ನಂತರದಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐಟಿ ತಂತ್ರಜ್ಞಾನ ನಿರ್ವಹಣಾ ಸಲಹೆಗಾರರಾಗಿ ಇವರ ಸೇವೆ ಸಂದಿದೆ. 

ಶ್ರೀಧರ ಬಾಣಾವರ ಅವರ ಹಣಕಾಸಿನ ಲೋಕದ ಕುರಿತಾದ ಬರಹಗಳು ಪತ್ರಿಕಾಲೋಕದಲ್ಲಿ ಪ್ರಸಿದ್ಧವಾಗಿವೆ. ಕನ್ನಡದಲ್ಲಿ ಅವರ ‘ವೈಯುಕ್ತಿಕ ಹಣಕಾಸು ಕಾಲಂ’ ಜನಸಾಮಾನ್ಯರ ಬದುಕಿನ ಕುರಿತಾದ ಅನೇಕ ಕಾಳಜಿಗಳ ಕುರಿತಾಗಿದ್ದು ಹೆಸರುವಾಸಿಯಾಗಿದೆ.  ತಂತ್ರಜ್ಞಾನ, ಭಾಷೆ, ಸಾಹಿತ್ಯ, ಸಂಸ್ಕೃತಿ, ಲೋಕ ಸಂಚಾರ ಇವುಗಳನ್ನೊಳಗೊಂಡ ಇವರ ಆಸಕ್ತಿಗಳ ವಿಶಾಲ ವ್ಯಾಪ್ತಿ ಹೊಂದಿದ್ದು ಆ ಕುರಿತು ಸಹ ಅವರ ಬರಹಗಳು ಮೂಡಿವೆ.

ಆತ್ಮೀಯರಾದ ಶ್ರೀಧರ ಬಾಣಾವರ ಅವರ ಪ್ರೋತ್ಸಾಹ ಮಾರ್ಗದರ್ಶನ ನಿರಂತರವಾಗಿ ನನ್ನ ಬರಹ ಕಾರ್ಯಗಳಿಗೆ ಲಭಿಸುತ್ತಿದೆ. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Sridhara Banavara 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ