ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿಳಿನೋಟ


 ತಿಳಿ ನೋಟ


ನನ್ನಿಷ್ಟದ ನೋಟವೂ ನಿನಗಷ್ಟು ಕಷ್ಟವೇ!
ಇಷ್ಟವನ್ನು ಸುಖಿಸಿ ಕಾಣುವುದರಲ್ಲೇನು ನಷ್ಟ?
ಬೇಡದ ಜಿಜ್ಞಾಸೆ, ಇಲ್ಲ ಸಲ್ಲದ ಬಿಂಕ-ಭಯ,
ನೋಡು ಎಲ್ಲವ ನೀನು ಅದು ಹೇಗಿದೆಯೊ ಹಾಗೆ,
ತಿಳಿಯಾಗಿರಲಿ ನಿನ್ನ ಹೃದಯಾಳದ ಕೊಳ
ನಯನ ಹೊರಗಿಟ್ಟಿರಲಿ ಮನದ ಕಲ್ಮಶ ದೂಳ,
ಎಲ್ಲ ಏನಿದೆಯೋ ಎಲ್ಲ, ಅದು ಕೇವಲ ‘ಅಷ್ಟೇ, ಅಷ್ಟೆ’,
ಯಾವುದೂ ನಿನದಲ್ಲ, ಯಾರೂ ನಿನಕಾಯುತ್ತಿಲ್ಲ
ಯಾರೂ, ಯಾವುದೂ, ಯಾರಿಗೂ ಬೇಕಿಲ್ಲ ತಿಳಿ
ಎಲ್ಲವೂ ನೀನೆ, ಎಲ್ಲವೂ ನಿನ್ನಲ್ಲೇ, 
ನೀನು ಜಗದಾತ್ಮ ಭಾವದ ಭಾಗ,
ಸುಖಿಸು ನೀ ಮುಗ್ಧಭಾವದಲಿ, ಹೃದಯದ ಕಣ್ತೆರೆದು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ