ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರಿಪ್ರಿಯಾ


 ಹರಿಪ್ರಿಯಾ 

ಹರಿಪ್ರಿಯಾ ಕನ್ನಡ ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ.  

ಹರಿಪ್ರಿಯಾ 1991ರ ಅಕ್ಟೋಬರ್ 29ರಂದು ಜನಿಸಿದರು. ಇವರ ಬಾಲ್ಯದ ಹೆಸರು ಶೃತಿ.  ಬಾಲ್ಯವನ್ನು ಚಿಕ್ಕಬಳ್ಳಾಪುರದಲ್ಲಿ ಸವಿದ ಅವರು ಮುಂದೆ ಬೆಂಗಳೂರಿನ ವಿದ್ಯಾಮಂದಿರ ಶಾಲೆಯಲ್ಲಿ  ಓದಿದರು. ಭರತನಾಟ್ಯ ಕಲಿತ ಇವರು ಅನೇಕ ಕಾರ್ಯಕ್ರಮಗಳನ್ನು ನೀಡಿದರು. ಒಮ್ಮೆ ಇವರ ಭರತನಾಟ್ಯದ ಚಿತ್ರಗಳನ್ನು ಗಮನಿಸಿದ ನಿರ್ದೇಶಕ ರಿಚರ್ಡ್ ಇವರಿಗೆ 2008ರಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು.
 
ಹರಿಪ್ರಿಯಾ ಅವರು 2008ರಲ್ಲಿ ತೆರೆಕಂಡ 'ಮನಸುಗಳ ಮಾತು ಮಧುರ' ಎಂಬ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ನಂತರ ವಸಂತ ಕಾಲ, ಈ ಸಂಭಾಷಣೆ, ಮಳೆ ಬರಲಿ ಮಂಜು ಇರಲಿ, ಕಳ್ಳರ ಸಂತೆ, ಚೆಲುವೆಯೇ ನಿನ್ನ ನೋಡಲು, ಕಿಲಾಡಿ ಕಿಟ್ಟಿ, ಸಾಗರ್, ಸೂಪರ್ ಶಾಸ್ತ್ರಿ, ಉಗ್ರಂ, ರನ್ನ, ಬುಲೆಟ್ ಬಸ್ಯಾ, ರಿಕಿ, ಭಲೇ ಜೋಡಿ, ರಣತಂತ್ರ, ನೀರ್ ದೋಸೆ, ಭರ್ಜರಿ, ಅಂಜನಿಪುತ್ರ, ಕನಕ, ಸಂಹಾರ, ಜೈಸಿಂಹ, ಲೈಫ್ ಜೊತೆ ಒಂದು ಸೆಲ್ಫಿ, ಬೆಲ್ ಬಾಟಮ್, ಡಾಟರ್ ಆಫ್  ಪಾರ್ವತಮ್ಮ, ಸೂಜಿದಾರ, ಕನ್ನಡ ಗೊತ್ತಿಲ್ಲ, ಕಥಾಸಂಗಮ, ಬಿಚ್ಚುಗತ್ತಿ, ಎಲ್ಲಿದ್ದೆ ಇಲ್ಲಿತನಕ, ಕುರುಕ್ಷೇತ್ರ, ಪೆಟ್ರೊಮ್ಯಾಕ್ಸ್, ಯದಾ ಯದಾ ಹಿ, ಅಮೃತಮತಿ ಮುಂತಾದ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸುತ್ತ ಬಂದಿದ್ದಾರೆ. ಕೆಲವು ತಮಿಳು, ತೆಲುಗು, ಮಲಯಾಳಂ, ತುಳು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕೆಲವು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
 
ಹರಿಪ್ರಿಯಾ  ಅವರು ನಟ ವಸಿಷ್ಠ ಸಿಂಹ ಅವರನ್ನು ವಿವಾಹವಾಗಿದ್ದಾರೆ. 

On the birthday of actress Haripriya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ