ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯ ಕರ್ನಾಟಕ


 ವಿಜಯ ಕರ್ನಾಟಕ 26


ವಿಜಯ ಕರ್ನಾಟಕ 26 ಪೂರೈಸಿತು.  ವಿಜಯ ಕರ್ನಾಟಕ ಅಂದಿನ ಘಟಾನುಘಟಿ ಪತ್ರಿಕೆಗಳನ್ನು, ಬೆಲೆ ಮತ್ತು ಹಲವು ವೈವಿಧ್ಯಗಳಲ್ಲಿ ಎದುರಿಸಿತು.  ಅದು ಇತರ ಪತ್ರಿಕೆಗಳ ವ್ಯಾಪಾರವನ್ನು ಕುಂಠಿಸಿತು ಎಂದು ಹೇಳಲಾಗದಿದ್ದರು, ತಾನೇ ಒಂದು ಪ್ರತ್ಯೇಕ ಸ್ಥಾನ ನಿರ್ಮಿಸಿಕೊಂಡದ್ದು ಸಾಮಾನ್ಯ ಸಂಗತಿಯಲ್ಲ.  ವಿಜಯ ಕರ್ನಾಟಕ ಅನೇಕ ಹೊಸ ಪೀಳಿಗೆಯ ಬರಹಗಾರರಿಗೂ ಅವಕಾಶ ತಂದಿತು. 

ಬರೆಯುವವರಿಗೆ ಯಾವ ಪತ್ರಿಕೆಯಲ್ಲಿ ಬರೆಯುತ್ತಿದ್ದೇವೆ ಎಂದು ಗೊತ್ತಿರುವುದು ಸಹಜ.  ಆದರೆ ಓದುಗರ ನಿಟ್ಟಿನಲ್ಲಿ, ಇಂದು ಬಹುತೇಕರು ಎಲ್ಲವನ್ನೂ ಅಂತರಜಾಲದಲ್ಲಿ ಓದುವಾಗ,  ಸುದ್ದಿ ಮುಖ್ಯವಾಗಿರುತ್ತದೆಯೇ ಹೊರತು, ಸುದ್ದಿ ಮೂಲ ಯಾವ ಪತ್ರಿಕೆಯದು ಎಂಬ ಕಾಳಜಿ ಅಳಿಸಿರಬಹುದೆ ಎಂಬ ಚಿಂತನೆ ನನ್ನದು. 

26 ವರ್ಷ ಕನ್ನಡದ ಒಂದು ವ್ಯವಸ್ಥೆ ನಡೆದಿರುವುದು, ಅದು ಬೆಳೆದ ರೀತಿ, ಟೈಮ್ಸ್ ಸಮೂಹವನ್ನು ಆಕರ್ಷಿಸಿ ಅದರಲ್ಲಿ ಒಂದಾದದ್ದು ಇವೆಲ್ಲ ಗಮನ ಸೆಳೆದ ವಿಚಾರಗಳು.  ಆದರೆ, ಟಿವಿ, ಅಂತರಜಾಲ, ಸೋಷಿಯಲ್ ಮೀಡಿಯಾ, ಇತ್ಯಾದಿಗಳ ಮಧ್ಯೆ, ವೈವಿಧ್ಯಮಯ ಸ್ಪರ್ಧೆಯಲ್ಲಿ ಪತ್ರಿಕೆಗಳು ಹೇಗೆ ವ್ಯಾವಹಾರಿಕವಾಗಿ ತೇಲುತ್ತಿರುತ್ತವೆ ಎಂದು ಊಹಿಸುವುದು ಕಷ್ಟ.  ಇವೆಲ್ಲವುಗಳ ಜೊತೆಯಲ್ಲಿ, ಕನ್ನಡವನ್ನು ಬರುವ ಪೀಳಿಗೆಗೂ ಆಕರ್ಷಕವಾಗಿ ಉಳಿಸುವ ಒಂದು ಸಮುದಾಯವನ್ನು ಈ ಪತ್ರಿಕಾ ವ್ಯವಸ್ಥೆಗಳು ಕಂಕಣಬದ್ಧವಾಗಿ ಮಾಡಿದರೆ ಚಂದ ಎಂಬುದು ನನ್ನ ಆಶಯ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ