ಸೌಮ್ಯ ಸನತ್
ಸೌಮ್ಯ ಸನತ್
ಸೌಮ್ಯ ಸನತ್ ಪ್ರತಿಭಾನ್ವಿತ ಬರಹಗಾರ್ತಿ.
ನವೆಂಬರ್ 20, ಸೌಮ್ಯ ಅವರ ಜನ್ಮದಿನ. ತುಮಕೂರು ಬಳಿಯ ಸಿಎಸ್ ಪುರಂ ಅವರ ಊರು. ತುಮಕೂರು ಸಿದ್ಧಗಂಗಾ ಮಹಿಳೆಯರ ಕಾಲೇಜಿನಲ್ಲಿ ಅವರ ವ್ಯಾಸಂಗ ನಡೆಯಿತು. ಬಿ.ಎಸ್ಸಿ, ಬಿ.ಎಡ್ ಓದಿರುವ ಅವರಿಗೆ ಗಾಯನ, ಚಿತ್ರಕಲೆ ಮತ್ತು ಕರಕುಶಲ ಕಲೆಗಳ ಹವ್ಯಾಸವೂ ಜೊತೆಗೂಡಿದೆ. ಅವರು ಬೆಂಗಳೂರು ಅಂತರರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಪತಿ ಸನತ್. ಪುತ್ರ ಸುಹಾಸ್ ಇಂಜಿನಿಯರಿಂಗ್ ಓದುತ್ತಿದ್ದಾರೆ.
ಅಪಾರ ಸಾಹಿತ್ಯಾಸಕ್ತಿ ಉಳ್ಳ ಸೌಮ್ಯ ಸನತ್ ಅವರು ಬುಕ್‍ಬ್ರಹ್ಮ ಅಂತರಜಾಲದ ತಾಣದಲ್ಲಿ ಅನೇಕ ಕಾವ್ಯವಾಚನ ಮಾಡಿದ್ದಾರೆ. ವಿಜ್ಞಾನ, ಪ್ರಜ್ಞಾವಂತ ಚಿಂತನೆ, ಅಧ್ಯಾತ್ಮ, ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ ವಿಚಾರಗಳ ಕುರಿತು ಪತ್ರಿಕೆಗಳಲ್ಲಿ ನಿರಂತರ ಲೇಖನಗಳನ್ನು ಮೂಡಿಸುತ್ತ ಬಂದಿದ್ದಾರೆ
ಸುಮಧುರ ಧ್ವನಿ, ಬರವಣಿಗೆ ಮತ್ತು ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವ ಮುಂತಾದವು ಸೌಮ್ಯ ಅವರ ವ್ಯಕ್ತಿತ್ವದಲ್ಲಿದೆ. ಇತರರನ್ನು ಪ್ರೋತ್ಸಾಹಿಸುವುದೂ ಅವರ ವಿಶಿಷ್ಟ ನಿಸ್ವಾರ್ಥ ಗುಣ.
ಬರಹಗಾರ್ತಿಯಾಗಿ, ಶಿಕ್ಷಕಿಯಾಗಿ, ಕಾವ್ಯಧ್ವನಿಯಾಗಿ, ಜೊತೆಗೆ ಎಲ್ಲರಿಗೂ ಆಪ್ತರಾದ ಸೌಮ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಮಾಹಿತಿ ಕೊಡುಗೆ: Rashmi Prasad
Happy birthday Sowmya Sanath 🌷🌷🌷
ಕಾಮೆಂಟ್‌ಗಳು