ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ಹರಿಕೃಷ್ಣ


 ವಿ. ಹರಿಕೃಷ್ಣ 


ವಿ. ಹರಿಕೃಷ್ಣ ಚಲನಚಿತ್ರ ಸಂಗೀತ ಸಂಯೋಜಕ, ಹಿನ್ನೆಲೆ ಗಾಯಕ,  ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು. 

ಹರಿಕೃಷ್ಣ ಅವರು 1974ರ ನವೆಂಬರ್ 5 ರಂದು ಬೆಂಗಳೂರಿನಲ್ಲಿ ಜನಿಸಿದರು. ಎಂಟನೇ ವಯಸ್ಸಿನಲ್ಲಿ, ಅವರು ತಮ್ಮ ತಂದೆಯವರು ನಡೆಸುತ್ತಿದ್ದ ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ನುಡಿಸಲು ಪ್ರಾರಂಭಿಸಿದರು. 1987 ರಲ್ಲಿ ವೃತ್ತಿಪರವಾಗಿ ಕೀಬೋರ್ಡ್ ನುಡಿಸಲು ಆರಂಭಿಸಿದ ಅವರು ವಿದ್ಯಾಭ್ಯಾಸವನ್ನು ಮೆಟ್ರಿಕ್ಯುಲೇಷನ್ ಹಂತದಲ್ಲಿ ನಿಲ್ಲಿಸಿದರು. ಅವರು ಮೊದಲು ಸಂಗೀತ ಸಂಯೋಜಕ ಮನೋರಂಜನ್ ಪ್ರಭಾಕರ್ ಅವರೊಂದಿಗೆ ಕೆಲಸ ಮಾಡಿದರು. 

ಹರಿಕೃಷ್ಣ  ಅವರು 1990 ರಲ್ಲಿ ತಮ್ಮ ತಂದೆಯವರ ಮರಣದ ನಂತರ, ಅವರ ಮೆಕ್ಯಾನಿಕ್ ಅಂಗಡಿಯನ್ನು ವಹಿಸಿಕೊಂಡು ಸಂಗೀತ ಕ್ಷೇತ್ರದಿಂದ ಹೊರಬಂದಿದ್ದರು. 1994 ರಲ್ಲಿ, ಸಂಯೋಜಕ ಸಾಧು ಕೋಕಿಲಾ ಅವರ ಒತ್ತಾಯದ ನಂತರ, ಹರಿಕೃಷ್ಣ ಮತ್ತೆ ಸಂಗೀತ ಕ್ಷೇತ್ರಕ್ಕೆ  ಬಂದರು. ಹರಿಕೃಷ್ಣ ಅವರು ಕನ್ನಡದ ಪ್ರಸಿದ್ಧ ಸಂಗೀತ ಸಂಯೋಜಕರಾಗದ್ದ,  ಜಿ ಕೆ ವೆಂಕಟೇಶ್ ಅವರ ಮೊಮ್ಮಗಳು, ಗಾಯಕಿ ಮತ್ತು ಸಂಯೋಜಕಿ ವಾಣಿ ಅವರನ್ನು ವಿವಾಹವಾಗಿದ್ದಾರೆ.

ಹರಿಕೃಷ್ಣ ಅವರು 2006 ರಲ್ಲಿ ನಟ ದರ್ಶನ್ ಅವರ ಮೊದಲ ನಿರ್ಮಾಣ, ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾದ  'ಜೊತೆ ಜೊತೆಯಲಿ' ಚಿತ್ರದ ಮೂಲಕ ಸ್ವತಂತ್ರ ಸಂಯೋಜಕರಾಗಿ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು ಅನೇಕ ಇತರ ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಕೆಲಸ ಮಾಡುವುದರ ಜೊತೆಗೆ ದರ್ಶನ್ ಅವರ ಬಹುತೇಕ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತ  ಬಂದಿದ್ದಾರೆ. ಅವರು 2013 ರಲ್ಲಿ  "ಡಿ-ಬೀಟ್ಸ್" ಎಂಬ ಆಡಿಯೊ ಕಂಪನಿಯನ್ನು ಸ್ಥಾಪಿಸಿದರು.  ಬುಲ್‌ಬುಲ್ (2013) ಚಲನಚಿತ್ರದಿಂದ ಪ್ರಾರಂಭಗೊಂಡಂತೆ  ತಮ್ಮ ಸ್ವಂತ ಕಂಪನಿಯ ಅಡಿಯಲ್ಲಿ ಅವರು ಸಂಗೀತವನ್ನು ಮೂಡಿಸತೊಡಗಿದ್ದಾರೆ. ಅವರು 2019 ರ ಕನ್ನಡ ಚಿತ್ರ 'ಯಜಮಾನ' ಚಿತ್ರದ ಮೂಲಕ ನಿರ್ದೇಶನಕ್ಕೂ ಕಾಲಿರಿಸಿದ್ದಾರೆ.

ಹರಿಕೃಷ್ಣ ಅವರು 2008 ರಲ್ಲಿ ಗಾಳಿಪಟ, 2009 ರಲ್ಲಿ ರಾಜ್ ದಿ ಶೋಮ್ಯಾನ್ ಮತ್ತು 2010 ರಲ್ಲಿ ಜಾಕಿ ಚಿತ್ರಗಳ ಅತ್ಯುತ್ತಮ ಸಂಗೀತಕ್ಕಾಗಿ ಸತತ ಮೂರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. 'ರಾಜ್ ದಿ ಶೋಮ್ಯಾನ್' ಮತ್ತು 'ರಾಜಕುಮಾರ' ಚಲನಚಿತ್ರಗಳ ಸಂಗೀತಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ  ಸಂದಿದೆ.

Happy birthday to popular music director V Hari Krishna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ