ಪಾರ್ವತಮ್ಮ
ಪಾರ್ವತಮ್ಮ ರಾಜ್‍ಕುಮಾರ್
ಲೇಖನ: ಬಿ. ಕೆ. ಸುಮತಿ B.k. Sumathi
ಕನ್ನಡ ಕುಲಕೋಟಿಯನ್ನು ಆವರಿಸಿ, ಸ್ಫೂರ್ತಿ ನೀಡಿ ಮುನ್ನಡೆಸಿದ ಮಹಾಶಕ್ತಿ, ಕನ್ನಡಿಗರ ಆರಾಧ್ಯದೈವ ಡಾ. ರಾಜಕುಮಾರ್. ರಾಜಕುಮಾರ, ಚಕ್ರವರ್ತಿ ಪಟ್ಟಕ್ಕೇರುವ ಆ ಹಾದಿಯಲ್ಲಿ ಅವರ ಮನದರಸಿ ಪಾರ್ವತಮ್ಮ ಅವರ ಕೊಡುಗೆ ಅಪಾರ.
ರಾಜ್ ಅವರಿಗೆ ಪಾರ್ವತಿ ನಮ್ಮ ಪಾರ್ವತಮ್ಮ. ತೆರೆಯ ಮೇಲೆ, ತೆರೆಯ ಹಿಂದಿನ ಶಕ್ತಿ , ಕನ್ನಡದ ಕೀರ್ತಿ ಪಾರ್ವತಮ್ಮ ರಾಜಕುಮಾರ್. ಪೂರ್ಣಿಮಾ ಎಂಟರ್ ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್, ವೈಷ್ಣವಿ ಸಂಸ್ಥೆಗಳು ಬೆಳಕು ಕಾಣಲು ಕಾರಣೀಭೂತರು, ಅನೇಕರಿಗೆ ಅನ್ನದಾತೆ ಅನ್ನಪೂರ್ಣೆ ಪಾರ್ವತಮ್ಮ.
ಹಾಗೆ ನೋಡಿದರೆ ಆಕೆ ಬಾಲ್ಯದಿಂದಲೇ ಅಪಾರ ಬುದ್ಧಿವಂತೆ. ಹತ್ತನೇ ತರಗತಿ ತೇರ್ಗಡೆ ಹೊಂದಿದ್ದರು. ರಾಜ್ ಓದಿದ್ದು 4 ನೇ ಕ್ಲಾಸ್.
ಪಾರ್ವತಮ್ಮ ಹುಟ್ಟಿದ್ದು 1939, ಡಿಸೆಂಬರ್ 6. ಅಂದಿನ ಮೈಸೂರು ಸಾಮ್ರಾಜ್ಯದ ಸಾಲಿಗ್ರಾಮದಲ್ಲಿ.
ಪಾರ್ವತಮ್ಮ ಅವರ ತಂದೆ ಅಪ್ಪಾಜಿಗೌಡರ ಬಳಿ ರಾಜ್ ಸಂಗೀತ ಕಲಿಯುತ್ತಿದ್ದರು. ರಂಗಭೂಮಿ ನಂಟು ಎರಡೂ ಕುಟುಂಬಗಳಿಗೂ ಇತ್ತು. ಪಾರ್ವತಿಯೇ ಈ ಮನೆಯ ಸೊಸೆ ಅಂತ ರಾಜಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯನವರು ಪಾರ್ವತಿ ತೊಟ್ಟಿಲಲ್ಲಿ ಇದ್ದಾಗಲೇ ಘೋಷಿಸಿ, ಮಾತು ಕತೆ ಆಡಿಬಿಟ್ಟಿದ್ದರು. ರಾಜ್ ಪಾರ್ವತಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ತಿರುಗಾಡಿಸುತ್ತಿದ್ದರು. ಹೆಗಲ ಮೇಲೆ ಹೊತ್ತು ಕೂಸುಮರಿ ಮಾಡುತ್ತಿದ್ದರು.
ಬಾಲ್ಯದಲ್ಲಿ ರಾಜ್ ಪಾರ್ವತಿಯನ್ನು ಹೊತ್ತರೆ,
ಮದುವೆಯ ನಂತರ, ಪಾರ್ವತಿ ರಾಜ್‍ರನ್ನು ಹೊತ್ತರು. ಇಡೀ ಕುಟುಂಬದ ನಿರ್ವಹಣೆ ಮಾಡಿದರು. ತುಂಬು ಸಂಸಾರ. ಇಪ್ಪತ್ತು ಇಪ್ಪತ್ತೈದು ಮಂದಿ ಇರುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಅಕ್ಕರೆಯಿಂದ ಸಲಹಿ ಒಂದು ತಂಡವನ್ನೇ ಬೆಳೆಸಿದರು ಪಾರ್ವತಿ.
ಮದುವೆ ಆದಾಗ ಪಾರ್ವತಮ್ಮ ಅವರ ವಯಸ್ಸು13 ವರ್ಷ. ರಾಜ್ ವಯಸ್ಸು 24.
ಬೇಡರ ಕಣ್ಣಪ್ಪ ಬಿಡುಗಡೆ ಆಗಿದ್ದು 1954.
ಅವರು ರಾಜ್ ಅವರನ್ನು ಮದುವೆ ಆಗಿದ್ದು 1953. ನೀನೇ ನನ್ನ ಭಾಗ್ಯದೇವತೆ ಎನ್ನುತ್ತಿದ್ದರು ರಾಜ್. ಪಾರ್ವತಿಗೆ ಓದುವುದೆಂದರೆ ಹುಚ್ಚು. ರಾಜ್ ಚಿತ್ರರಂಗದಲ್ಲಿ ನೆಲೆ ಊರುವ ಮೊದಲೂ ಅವರು ಕಾದಂಬರಿ ಕಥೆ ಓದುತ್ತಿದ್ದರು. ಅವರಿಗೆ ಗಣಿತದಲ್ಲಿ ತುಂಬಾ ಒಲವಿತ್ತು. ಕಾಲೇಜು ಓದುವ ಹಂಬಲ ಇತ್ತು. ಆದರೆ ತಾಳಿ ಇದ್ದ ಕಾರಣ ಕಾಲೇಜಿಗೆ ಹೋಗಲು ಆಗಲಿಲ್ಲ ಎಂದು ಅವರೇ ಒಂದು ಕಡೆ ಹೇಳಿದ್ದಾರೆ.
ರಾಜಕುಮಾರ್ ಅವರ ಕಲಾಪಯಣಕ್ಕೆ ಸರಿಯಾದ ಸಾರಥಿ ಅದವರು ಪಾರ್ವತಿ. ಹೊಟ್ಟೆ ತುಂಬಿದರೆ ಸಾಕು ಎಂಬಂತೆ ಎಲ್ಲ ನಿರ್ಮಾಪಕ ರಿಗೂ ಕಾಲ್ ಶೀಟ್ ಕೊಟ್ಟು ಕಡಿಮೆ ಸಂಭಾವನೆ ಪಡೆದು, ಜೀವನ ತೂಗಿಸಿದರೆ ಆಯಿತು ಎಂಬ ಭಾವದಲ್ಲಿದ್ದರು ರಾಜ್. ಏನೋ ಸರಿ ಹೋಗುತ್ತಿಲ್ಲ ಎಂಬುದನ್ನು ಬುದ್ಧಿವಂತಿಕೆ ಇಂದ ಕಂಡು ಹಿಡಿದು, ತಾನೇ ನಿರ್ಮಾಣ ಮಾಡುವೆ ಎಂದು ಧೈರ್ಯದಿಂದ ನಿಂತ ಪಾರ್ವತಿ ... ನಿಧಾನವಾಗಿ ಪಾರ್ವತಮ್ಮ ಆಗಿ ಆಮೇಲೆ ಪಾರ್ವತಮ್ಮ ರಾಜ ಕುಮಾರ್ ಆಗಿ , ನಿಧಾನವಾಗಿ ಚಿತ್ರರಂಗದ ವಜ್ರೇಶ್ವರಿ, ವೈಷ್ಣವಿ, ಪೂರ್ಣಿಮೆ ಆಗಿದ್ದು ಇತಿಹಾಸ. ಇಡೀ ಕನ್ನಡ ಚಿತ್ರರಂಗದ ಸಾಮ್ರಾಜ್ಞಿ ಆದರು. ಮಹಿಳಾ ಸಬಲೀಕರಣ ಮಾತಲ್ಲ, ಸಬಲೆ ಅಂದರೆ ಏನು ಎಂದು ಕೃತಿಯಲ್ಲಿ ನಿರೂಪಿಸಿದರು.
ರಾಜ್ ಅವರ ಚಿತ್ರ ಹೇಗಿರಬೇಕು? ಕಥೆ, ವಸ್ತ್ರವಿನ್ಯಾಸ, ಹಾಡು, ಸಂಗೀತ , ನಾಯಕಿ ಎಲ್ಲವನ್ನೂ ನಿರ್ಧರಿಸುತ್ತಿದ್ದರು ಪಾರ್ವತಮ್ಮ. ಅವರು ಅತ್ಯುತ್ತಮ ಓದುಗಾರ್ತಿಯಾಗಿ ಅನೇಕ ಕಾದಂಬರಿ ಆಧಾರಿತ ಚಿತ್ರಗಳನ್ನು ತಮ್ಮ ಬ್ಯಾನರಿನಲ್ಲಿ ಮೂಡಿಸಲು ಕಾರಣರಾದರು. ಜೀವನ ಚೈತ್ರ, ಕಾಮನಬಿಲ್ಲು, ಹೊಸ ಬೆಳಕು, ಸನಾದಿ ಅಪ್ಪಣ್ಣ ಇತ್ಯಾದಿ ಕಥೆಗಳನ್ನು ಇಲ್ಲಿ ಸ್ಮರಿಸಬಹುದು. ಅನೇಕ ಹೊಸ ನಾಯಕಿಯರನ್ನು ಪರಿಚಯಿಸಿದರು. ಮಕ್ಕಳು ಶಿವರಾಜ್‍ಕುಮಾರ್, ರಾಘವೇಂದ್ರ, ಪುನೀತ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗ ಬದಲಾವಣೆಗೆ ಹೊಂದಿಕೊಂಡರು. ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂದರು. ಆದರೆ ದೊಡ್ಡಮನೆ ಘನತೆ ಉಳಿಸಿದರು. ಅವರು ಸುಮಾರು 85 ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲ ಯಶಸ್ವಿ ಚಿತ್ರಗಳೇ. ಪಾರ್ವತಮ್ಮನವರು ಚಿತ್ರದ ಯಶಸ್ಸಿಗೆ ದೊಡ್ಡ ಕಲಾವಿದರು ಮಾತ್ರವಲ್ಲದೇ ಚಿತ್ರದ ಕಥೆ ಮತ್ತು ತಂತ್ರಜ್ಞರು ಕೂಡ ಮುಖ್ಯವೆಂದು ಬಲವಾಗಿ ನಂಬುತ್ತಿದ್ದರು. ಉತ್ತಮ ಸಾಹಿತ್ಯವೇ ಚಿತ್ರದ ಆತ್ಮವೆಂದು ನಂಬಿದ್ದ ಪಾರ್ವತಮ್ಮನವರು ತಮ್ಮ ಬ್ಯಾನರ್ ಮೂಲಕ ಹಲವಾರು ಲೇಖಕರಿಗೆ ಆಶ್ರಯವಾದರು. ಇವರ ಬ್ಯಾನರ್‌ನಲ್ಲಿ ಮೂಡಿಬಂದ ಮೊದಲ ಚಿತ್ರ 'ತ್ರಿಮೂರ್ತಿ'. ನಂತರ 'ಸನಾದಿ ಅಪ್ಪಣ್ಣ', 'ಶಂಕರ್ ಗುರು', ‘ತಾಯಿಗೆ ತಕ್ಕ ಮಗ' ಹೀಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನಿರ್ಮಿಸಿದವು.ಈ ಎಲ್ಲಾ ಚಿತ್ರಗಳು ಸಮಾಜಮುಖಿಯಾಗಿ ಸದಭಿರುಚಿಯ ಚಿತ್ರಗಳಾಗಿ ಇಂದಿಗೂ ಜನಪ್ರಿಯವಾಗಿವೆ. 1986 ರಲ್ಲಿ ತಮ್ಮ ಹಿರಿಯ ಪುತ್ರ ಶಿವರಾಜಕುಮಾರ್‌ರನ್ನು ‘ಆನಂದ್' ಚಿತ್ರದ ಮೂಲಕ,1988ರಲ್ಲಿ ರಾಘವೇಂದ್ರ ರಾಜಕುಮಾರ್‌ನ್ನು ‘ಚಿರಂಜೀವಿ ಸುಧಾಕರ್' ಚಿತ್ರದ ಮೂಲಕ, 2002 ರಲ್ಲಿ ಪುನೀತ್‌ರನ್ನು ‘ಅಪ್ಪು' ಚಿತ್ರದ ಮೂಲಕ ನಾಯಕನಟರಾಗಿ (ಅದಕ್ಕೂ ಮುಂಚೆ 'ಬೆಟ್ಟದ ಹೂವು' ಚಿತ್ರದಲ್ಲಿ ಪ್ರಧಾನ ಬಾಲ ನಟನಾಗಿ) ಚಿತ್ರರಂಗಕ್ಕೆ ಪರಿಚಯಿಸಿದರು.
ಶಂಕರ್ ಗುರು, ಅನುರಾಗ ಅರಳಿತು, ಜೀವನ ಚೈತ್ರ, ಜನುಮದ ಜೋಡಿ ಹಾಗೂ ನಂಜುಂಡಿ ಕಲ್ಯಾಣ ಸಿನಿಮಾಗಳು ಚಿತ್ರಮಂದಿರದಲ್ಲಿ ಒಂದು ವರ್ಷ ಪ್ರದರ್ಶನ ಕಂಡಿವೆ. ಅವರ ನಿರ್ಮಾಣದ 16 ಸಿನಿಮಾಗಳು 25 ವಾರ ಪ್ರದರ್ಶನ ಕಂಡಿದ್ದರೆ 33 ಸಿನಿಮಾಗಳು 100 ದಿನಗಳು ಹಾಗೂ 19 ಸಿನಿಮಾಗಳು 50 ದಿನ ಪ್ರದರ್ಶನ ಕಂಡಿವೆ. ಮಾಲಾಶ್ರೀ, ಪ್ರೇಮಾ, ಸುಧಾರಾಣಿ ಹಾಗೂ ರಮ್ಯಾ ಅವರಿಗೆ ಹೆಸರು ಬಂದಿದ್ದೇ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಸಿನಿಮಾಗಳಿಂದ. ಬೆಂಗಳೂರು ವಿಶ್ವವಿದ್ಯಾಲಯ ಪಾರ್ವತಮ್ಮ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಫಾಲ್ಕೆ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಚಿತ್ರ ಒಂದು ನೂರು ದಿನ ಓಡಿದರೆ, ಕಲಾವಿದರಿಗೆ ಮಾತ್ರ ಸ್ಮರಣ ಫಲಕ ನೀಡಲಾಗುತ್ತಿತ್ತು. ತಂತ್ರಜ್ಞರಿಗೆ ಮತ್ತು ಇಡೀ ತಂಡಕ್ಕೆ ಸ್ಮರಣ ಫಲಕ ನೀಡುವ ಪರಿಪಾಠ ಆರಂಭಿಸಿದ್ದು ಪಾರ್ವತಮ್ಮ. ಅನೇಕ ಮೊದಲುಗಳನ್ನು ನೀಡಿದವರು.
ಹೀಗೇ ಪಾರ್ವತಮ್ಮ ಕನ್ನಡನಾಡಿನ ಆಸ್ತಿಯಾದರು. ಕನ್ನಡ ಸಂಸ್ಕೃತಿ ಯ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತರು. ಪಾರ್ವತಮ್ಮ ಅವರು 2017ರ ಮೇ 31ರಂದು ನಿಧನರಾದರು.
ಕೃತಜ್ಞತೆ: ಲೇಖಕಿ ಬಿ.ಕೆ. ಸುಮತಿ ಅವರಿಗೆ 🌷🙏🌷

On the birth anniversary of great woman of Kannada film industry Parvathamma Rajkumar
ಕಾಮೆಂಟ್‌ಗಳು