ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ30


 ತಿರುಪ್ಪಾವೈ 30

ಬನ್ನಿ ಅವನನ್ನು ಸ್ಮರಿಸಿ ಅವನೊಳಗೊಂದಾಗೋಣ
Thiruppavai 30

ವಂಗಕ್ಕಡಲ್ ಕಡೈಂದ ಮಾಧವನೈ ಕ್ಕೇಶವನೈ
ತಿಂಗಳ್ ತಿರುಮುಹುತ್ತುಶೇಯಿಳೈಯಾರ್ ಶೆನ್ನಿರೈಂಜಿ 
ಅಂಗಪ್ಪರೈ ಕೊಂಡ ವಾತ್ತೈ ಅಣಿಪುದುವೈ ಪೈಂಗಮಲತ್ತ ನಂ ದರಿಯಲ್ ಪಟ್ಟರ್‌ಪಿರಾನ್ ಕೊದೈಶೊನ್ನ 
ಶಂಗತ್ತಮಿಳ್ ಮಾಲೈ ಮುಪ್ಪದುಂ ತಪ್ಪಾಮೇ 
ಇಂಗಪ್ಪರಿಶುರೈಪ್ಪಾರ್ ಈರಿರಂಡು ಮಾಲ್ವರೈತ್ತೋಳ್
ಶೆಂಗಳ್ ತಿರುಮುಹತ್ತು ಚೆಲ್ವರುಮಾಲಾಲ್ 
ಎಂಗುಂ ತಿರುವರುಳ್ ಪೆಟ್ರು ಇನ್ಬ್ ಅರುಳ್ಎಂಬಾವಾಯ್

ಮಂಗಳಾಶಾಸನಂ

ಕೋದೈ   ಪಿರಂದ ಊರ್ ಗೋವಿಂದನ್ ವಾಳುಂ ಊರ್ 
ಶೋದಿ ಮಣಿಮಾಡಮ್  ತೊನ್ರುಮ್ ಊರ್  
ನೀತಿಯಾಲ್ ನಲ್ಲ  ಪತ್ತರ್ ವಾಳುಮೂರ್ 
ನಾನ್ ಮರೈಗಳ್ ಓದುಮೂರ್ ವಿಲ್ಲಿಪುತ್ತೂರ್   ವೇದಕ್ಕೋನೂರ್ 
ಪಾತಕಂಗಳ್  ತೀರ್ಕುಮ್ ಪರಮನ್ ಅಡಿ ಕಾಟ್ಟುಮ್ 
ವೇದಂ ಅನೈತ್ತುಕ್ಕುಮ್ ವಿತ್ತಾಗುಮ್ ಕೋದೈ ತಮಿಳ್ 
ಐನ್ದ್ ಐಂದುಮ್  ಅರಿಯಾದ  ಮಾನಿದರೈ 
ವೈಯುಮ್ ಶಮಪ್ಪದುಂ  ವಂಬು

ತಿರುವಾಡಿ ಪೂರತ್ತು ಶೆಗತ್ತು  ಉದಿತ್ತಾಳ್ ವಾಳಿಯೆ 
ತಿರುಪ್ಪಾವೈ  ಮುಪ್ಪದುಮ್  ಶೇಪ್ಪಿಟ್ಟಾಳ್  ವಾಳಿಯೆ 
ಪೆರಿಯಾಳ್ವಾರ್  ಪೈಟ್ರೆಡುತ್ತ  ಪೆಣ್ ಪಿಳ್ಳೈ  ವಾಳಿಯೆ 
ಪೆರಂಬೂದೂರ್ ಮಾಮುನಿಕ್ಕು ಪಿನ್ನ್  ಆನಾಳ್  ವಾಳಿಯೆ 
ಒರು ನೂಟ್ರು ನಾರ್ ಪಟ್ರೊರು ಮೂನ್ರು  ಉರೈತ್ತಾಳ್ ವಾಳಿಯೆ 
ಉಯರ್ ಅರಂಗರ್ಕೇ  ಕನ್ನಿ ಉಗಂದು ಅಳಿತ್ತಾಳ್ ವಾಳಿಯೆ 
ಮರುವಾರುಮ್  ತಿರುಮಲ್ಲಿ ವಳನಾಡು ವಾಳಿಯೆ 
ವಣ್ ಪುದುವೈ ನಗರ್ ಕೋದೈ ಮಲರ್ ಪದಂಗಳ್  ವಾಳಿಯೆ 


 ಆಂಡಾಳ್  ತಿರುವಡಿಗಳೇ ಶರಣಂ

ಭಾವಾನುವಾದ 30

ಭವಸಾಗರದನಂತ ನಾವೆಗಳ ನಾವಿಕನ ಜ್ಞಾನಗಮ್ಯಾದಿ ದೇವನನು 
ಮಾರ್ಗಶಿರ ನೋಂಪಿಯಿಂಪಾಡಿಕೊಂಡಾಡುತ ಪರಮನಡಿ ಸೇರೋಣ 
ಬನ್ನಿ ಬನ್ನಿರೆನ್ನೆಲ್ಲ ಬಾಂಧವರೆ ಮೋಕ್ಷ ಕಾಮಿಗಳಾಗುವ ಬನ್ನಿರೊಲವಿಂದ ಗೋದೆ ರಚಿಸಿದೀ ಆರೈದು ಹೊನ್‌ತಮಿಳ ಗೀತೆಗಳ ತಪ್ಪದೆಲೆ ಪಾಡಿ
ನೋಂಪಿಯನಾಚರಿಸಿ 
ಈ ಪರಿಯೊಳಪ್ರಮೇಯನನು ಪಾಡಿ ಬದುಕಿದೊಡೆ ಮಂಗಳವು ಸಕಲರಿಗೆ ಧನ್ಯವೀ ಗೋದೆಯ ಜನ್ಮಧನ್ಯವೀ ಸಿರಿಗೋದೆ ತೌರೂರು ಸಿರಿವಿಲ್ಲಿಪುತ್ತೂರು ಧನ್ಯಳೆನ್ನೆಮ್ಮ ಭಾರತಿಯು ಧನ್ಯರೆನ್ನೊಲಮೆಯಲಿ ಸಲಹಿದೆನ್ನಯ್ಯ
ಶ್ರೀವಿಷ್ಣುಚಿತ್ತಮುನಿ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು

ಭಾವಾರ್ಥ 30

ಬನ್ನಿ ಎಲ್ಲರೊಂದಾಗಿ ಬನ್ನಿ, ಓ ನನ್ನೆಲ್ಲ ಗೆಳತಿಯರೇ, ಭವಸಾಗರದ ನೌಕೆಗಳನ್ನು ಮುಳುಗದಂತೆ ಕಾಪಿಡುವ ಆ ಕ್ಷೀರಸಾಗರ ಶಯನನಾದ ಕಮಲನಾಭನನ್ನು ತದೇಕಚಿತ್ತದಿಂದ ಧ್ಯಾನಿಸಿ ಕೀರ್ತಿಸಿ ಧನ್ಯರಾಗೋಣ.

ಜನನ ಮರಣಗಳ ಜಾಲದಿಂದ ಬಿಡಿಸಿಕೊಳ್ಳೋಣ. ಭವದಾಸೆಗಳ ತೊರೆದು ಮೋಕ್ಷಕಾಮಿಗಳಾಗುವ ಬನ್ನಿ.

ಶ್ರೀಮನ್ನಾರಾಯಣನು ತಪ್ಪದೇ ನಮ್ಮನ್ನು ಸಲಹುತ್ತಾನೆ. ಈ ಮಂಗಳಕರವಾದ ಮಾರ್ಗಶಿರ ಮಾಸದಲ್ಲಿ ಶ್ರೀವಿಷ್ಣುಚಿತ್ತಮುನಿ ಕರಕಮಲ ಸಂಜಾತೆ ಗೋದಾದೇವಿ ರಚಿಸಿರುವ ಈ ಮೂವತ್ತು ಪದ್ಯಗಳನ್ನೂ ತಪ್ಪದೆಯೇ ಅನುಸಂಧಾನ ಮಾಡಿ ವ್ರತವನ್ನಾಚರಿಸಿ, ದಾನ ಧರ್ಮಗಳನ್ನು ಮಾಡಿ, ಗುರುಹಿರಿಯರಿಗೆ ನಮಸ್ಕರಿಸಿ ಆಶೀರ್ವಾದಗಳನ್ನು ಪಡೆದು ಶ್ರೀಹರಿಯ ಕೃಪೆಗೆ ಪಾತ್ರರಾದಲ್ಲಿ ಈ ಸಿರಿವಿಲ್ಲಿ ಪುತ್ತೂರಿನ ಸಿರಿಗುವರಿಯ ಜನ್ಮಸಾರ್ಥಕ. ನನ್ನನ್ನೆತ್ತಿ ಪೋಷಿಸಿದೆನ್ನಯ್ಯ ವಿಷ್ಣುಚಿತ್ತರ ಜನ್ಮಸಾರ್ಥಕ.

ನಮ್ಮೆಲ್ಲರಿಗೂ ಜನ್ಮದಾತೆಯಾದ ವಿಶ್ವಮಾತೆಯಾದ ಭಾರತಿಯು ಧನ್ಯಳು. ನನ್ನ ತವರೂರು ಸಿರಿವಿಲ್ಲಿಪುತ್ತೂರು ಧನ್ಯ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ

Art credits: Keshav (©KrishnaforToday)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ