ರಶೀದ್ ಖಾನ್
ಉಸ್ತಾದ್ ರಶೀದ್ ಖಾನ್
ಉಸ್ತಾದ್ ರಶೀದ್ ಖಾನ್ ಸಂಗೀತಲೋಕದ ಮಹಾನ್ ಇನಿಧ್ವನಿ.
1968ರ ಜುಲೈ 1 ರಂದು ಜನಿಸಿದ್ದ ಉಸ್ತಾದ್ ರಶೀದ್ ಖಾನ್, ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತ್ರೀಯ ಸಂಗೀತಗಾರರಾಗಿದ್ದರು. ಅವರು ತಮ್ಮ ತಾತಂದಿರಾದ ಮಹಾನ್ ಸಂಗೀತ ಕಲಾವಿದರಾದ ಇನಾಯತ್ ಹುಸೇನ್ ಖಾನ್ ಅವರು ಸ್ಥಾಪಿಸಿದ ರಾಂಪುರ್–ಸಹಸ್ವಾನ್ ಘರಾಣಾಗೆ ಸೇರಿದ್ದರು.
ಉಸ್ತಾದ್ ರಶೀದ್ ಖಾನ್ ಅವರು ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಅಂತಹ ಹಿರಿಯರಿಂದ ಭಾರತೀಯ ಸಂಗೀತಲೋಕದ ಭರವಸೆ ಎಂಬ ಶ್ಲಾಘನೆ ಗಳಿಸಿದ್ದರು.
ವಿಶ್ವದೆಲ್ಲೆಡೆ ತಮ್ಮ ಸಂಗೀತಸುಧೆ ಹರಿಸಿದ್ದ ರಶೀದ್ ಖಾನ್ ಅವರಿಗೆ, 2006ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2022ರಲ್ಲಿ ಸಂದ ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಅನಿರೀಕ್ಷಿತ ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಕೆಲಕಾಲ ಬಳಲಿದ ಮಹಾನ್ ಗಾಯಕರಾದ ರಶೀದ್ ಖಾನ್ 2024ರ ಜನವರಿ 9ರಂದು, ಇನ್ನೂ 55ರ ಹರೆಯದಲ್ಲೇ ಈ ಲೋಕದಿಂದ ಹೊರನಡೆದರು.
Respects to departed divine musician Ustad Rashid Khan
ಕಾಮೆಂಟ್ಗಳು