ಬಿ. ಎಸ್. ಲಿಂಗದೇವರು
ಬಿ. ಎಸ್. ಲಿಂಗದೇವರು
ಲಿಂಗದೇವರು ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕನ್ನಡ ಚಿತ್ರಗಳಿಗಾಗಿ ಪ್ರಶಸ್ತಿ ಗಳಿಸಿ ಹೆಸರಾದವರು.
ಬ್ಯಾಲಕೆರೆ ಶಿವನಂಜಪ್ಪ ಲಿಂಗದೇವರು ಅವರು 1967ರ ಫೆಬ್ರುವರಿ 11ರಂದು ಜನಿಸಿದರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ಫಾರ್ಮಾಸಿಸ್ಟ್ ಕ್ಷೇತ್ರದ ವ್ಯಾಸಂಗ ನಡೆಸಿ, ಕಲಾಮಾಧ್ಯಮತ್ತ ಒಲವು ಹರಿಸಿಕೊಂಡವರು.
ನಾನು ಅವನಲ್ಲ ... ಅವಳು, ಮೌನಿ, ಕಾಡಬೆಳದಿಂಗಳು, ವಿರಾಟಪುರ ವಿರಾಗಿ ಸೇರಿದಂತೆ ಇವರ ಚಿತ್ರಗಳು ಪ್ರಸಿದ್ಧವಾಗಿವೆ.
1990ರ ವರ್ಷದಿಂದ ಲಿಂಗದೇವರು ಅವರು ನಿರ್ದೇಶಕರಾಗಿ, ನಿರ್ಮಾಪಕರಾಗಿ ಮತ್ತು ನಟರಾಗಿ ಕಿರುತೆರೆ, ಸಿನಿಮಾ, ಸಾಕ್ಷ್ಯಚಿತ್ರ ಹೀಗೆ ಕಲಾಲೋಕದಲ್ಲಿ ನಿರಂತರ ಸಕ್ರಿಯರಾಗಿದ್ದಾರೆ.
ಲಿಂಗದೇವರು ಅವರು ಯಶವಂತ ಚಿತ್ತಾಲರ ಕಾದಂಬರಿ ಆಧಾರಿತ 'ಶಿಕಾರಿ', ವ್ಯಾಸರಾಯ ಬಲ್ಲಾಳರ ಕಾದಂಬರಿ ಆಧಾರಿತ 'ಬಂಡಾಯ', ಸಿ. ಎನ್. ಮುಕ್ತಾ ಕಾದಂಬರಿ ಆಧಾರಿತ 'ಜೀವನಚಕ್ರ' ಮುಂತಾದ ಧಾರಾವಾಹಿಗಳನ್ನು ಕಿರುತೆರೆಗೆ ತಂದವರು. ಕಲ್ಯಾಣಿ ಅಂತಹ ಮೇಘಾ ಧಾರಾವಾಹಿ ಮೂಡಿಸಿದವರು. 12ನೇ ಶತಮಾನದಲ್ಲಿದ್ದ ಪ್ರಸಿದ್ಧಿಯಲ್ಲಿಲ್ಲದ ಅನೇಕ ವಚನಕಾರರ ಕುರಿತಾಗಿ 'ಶರಣವಾಹಿನಿ' ಸೇರಿದಂತೆ ಅನೇಕ ಸಾಕ್ಷ್ಯಚಿತ್ರ ಮೂಡಿಸಿದವರು.
ಲಿಂಗದೇವರು ಅವರ ಯು. ಆರ್. ಅನಂತಮೂರ್ತಿಗಳ ಕಥೆಯಾಧಾರಿತ 'ಮೌನಿ' ಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಾಮಾ ವಿಭಾಗಕ್ಕೆ ಹಾಗೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿತ್ತು. ಅತ್ಯುತ್ತಮ ಕತೆಗಾಗಿ ರಾಜ್ಯಪ್ರಶಸ್ತಿ ಗಳಿಸಿತು. ರಾಷ್ಟೀಯ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಮುಖ್ಯ ಪಾತ್ರ ವಿಶೇಷ ಪ್ರಸ್ತಾಪದ ಗೌರವ ಗಳಿಸಿತು. ‘ಕಾಡಬೆಳದಿಂಗಳು' ಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯನ್ ಪನೋರಾಮಾ ವಿಭಾಗಕ್ಕೆ ಹಾಗೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿತ್ತು. ಈ ಚಿತ್ರದ ಕತೆಗಾಗಿ ಜೋಗಿಯವರಿಗೆ ಅತ್ಯುತ್ತಮ ಕತೆಗಾರ ರಾಜ್ಯಪ್ರಶಸ್ತಿ ಸಂದಿತು.. 'ನಾನು ಅವನಲ್ಲ... ಅವಳು' ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ದಿವಂಗತ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ಅಲ್ಲದೆ ಅತ್ಯುತ್ತಮ ಪ್ರಸಾದನಕ್ಕಾಗಿನ ರಾಷ್ಟ್ರಪ್ರಶಸ್ತಿ ಸಹ ಸಂದಿತು. ಬಿಐಎಫ್‍ಎಫ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ
ಪ್ರಶಸ್ತಿ ಸಹ ಇವರಿಗೆ ಸಂದಿತು.
ಲಿಂಗದೇವರು ಅವರ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಜ್ಯೂರಿ ಸದಸ್ಯರಾಗಿ, ಕೇಂದ್ರ ಸರ್ಕಾರದ ಡೈರೆಕ್ಟರೇಟ್ ಆಫ್ ಫಿಲಂ ಫೆಸ್ಟಿವಲ್ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಕನ್ನಡ ಚಲನಚಿತ್ರಗಳ ಸಬ್ಸಿಡಿ ನಿರ್ವಹಣೆಯ ಮುಖ್ಯಸ್ಥರಾಗಿ ಸಹ ಕಾರ್ಯನಿರ್ವಹಿಸಿದ್ದಾರೆ.
ಲಿಂಗದೇವರು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Lingadevaru Shivananjappa 🌷🌷🌷
ಕಾಮೆಂಟ್‌ಗಳು