ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏಕನಾಥ್ ನಗರ್ಕರ್


 ಏಕನಾಥ್ ನಗರ್ಕರ್


ಏಕನಾಥ ನಗರ್ಕರ್ ಅವರು ಬ್ಯಾಂಕಿಂಗ್‍ ಕ್ಷೇತ್ರದಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದು, ಬರವಣಿಗೆ ಮತ್ತು ಅಭಿನಯದೆಡೆಗೆ ಒಲವು ತುಂಬಿಕೊಂಡವರು. 

ಫೆಬ್ರುವರಿ 22, ಏಕನಾಥ ನಗರ್ಕರ್ ಅವರ ಜನ್ಮದಿನ. ಬೆಂಗಳೂರಿನವರಾದ ಇವರು ಮಲ್ಲೇಶ್ವರಂ ಶಾಲೆಯಲ್ಲಿ ಓದಿ ಮುಂದೆ ರೇಣುಕಾಚಾರ್ಯ ಕಾಲೇಜಿನಲ್ಲಿ ವಾಣಿಜ್ಯ ಪದವಿ ಗಳಿಸಿದರು.

ಏಕನಾಥ ನಗರ್ಕರ್ ಅವರು 1964ರಿಂದ 1995 ಅವಧಿಯಲ್ಲಿ 'ಬ್ಯಾಂಕ್ ಆಫ್ ಇಂಡಿಯಾ'ದಲ್ಲಿ ಬ್ರಾಂಚ್ ಮ್ಯಾನೇಜರ್‍ ವರೆಗಿನ ಜವಾಬ್ದಾರಿಗಳನ್ನು ನಿರ್ವಹಿಸಿ ಐಚ್ಛಿಕ ನಿವೃತ್ತಿ ಪಡೆದರು. 

ಏಕನಾಥ ನಗರ್ಕರ್ ಅವರು ಡೆಕ್ಕನ್ ಹೆರಾಲ್ಡ್, ಫ್ರೀ ಪ್ರೆಸ್ ಜರ್ನಲ್, ಆಫ್ಟರ್ನೂನ್ ಡಿಸ್ಪ್ಯಾಚ್ ಮತ್ತು ಕೊರಿಯರ್ ಮುಂತಾದ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ  ಲೇಖನಗಳು, ಮಧ್ಯಭಾಗಗಳು ಮತ್ತು ಸಂಪಾದಕರಿಗೆ ಪತ್ರಗಳ ಬರೆವಣಿಗೆ ಮಾಡುತ್ತ ಬಂದರಲ್ಲದೆ  ಮಿನೂ ಮಸಾನಿ ಅವರ ಪ್ರಸಿದ್ಧ ಮಾಸಿಕ 'ಫ್ರೀಡಮ್ ಫಸ್ಟ್'ನಲ್ಲೂ ಬರೆಯುತ್ತಿದ್ದರು.  ಏಕನಾಥ ನಗರ್ಕರ್ ಅವರ ಚೊಚ್ಚಲ ಕಾದಂಬರಿ: 'ಎ ಟಚ್ ಆಫ್ ದಿ ಮಿಸ್ಟಿಕ್' ಅನ್ನು ಚೆನ್ನೈನ ನೋಷನ್ ಪ್ರೆಸ್ ಪ್ರಕಟಿಸಿದೆ. ಇದು eBook ಆಗಿ Amazon.com ತಾಣದಲ್ಲಿ‌ 'ದಿ ಗುಡ್, ದಿ ಬ್ಯಾಡ್ ಅಂಡ್ ದಿ ವಿಯರ್ಡ್' ಎಂಬ ಹೆಸರಿನಿಂದ ಮೂಡಿಬಂದಿದೆ.

ಏಕನಾಥ್ ನಗರ್ಕರ್ ಅವರ ಪಿ.ಶೇಷಾದ್ರಿ ಅವರ 'ವಿಮುಕ್ತಿ' ಚಿತ್ರವೂ ಸೇರಿದಂತೆ, ಚಲನಚಿತ್ರಗಳು, ಟಿವಿ ಧಾರಾವಾಹಿಗಳು, ಸಾಕ್ಷ್ಯಚಿತ್ರ ಮತ್ತು ಜಾಹಿರಾತುಗಳಲ್ಲಿ ನಟಿಸಿದ್ದಾರೆ. 

ಆತ್ಮೀಯರಾದ ಏಕನಾಥ್ ನಗರ್ಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Eknaath Nagarkar Sir 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ