ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೂರದರ್ಶನ ಉಮೇಶ್


 ದೂರದರ್ಶನ ಉಮೇಶ್


ಉಮೇಶ್ ಅವರು ಪ್ರಖ್ಯಾತ ರಂಗ ಕಲಾವಿದರಾಗಿ ದೂರದರ್ಶನ ಉಮೇಶ್ ಎಂದೇ ಖ್ಯಾತರಾಗಿದ್ದವರು.  

ಉಮೇಶ್ ಅವರು ಸಮುದಾಯ,  ರಂಗನಿರಂತರ ಮತ್ತು ರಂಗ ಸಂಪದ ತಂಡಗಳೊಟ್ಟಿಗೆ ಗುರುತಿಸಿಕೊಂಡು ರಂಗ ಚಟುವಟಿಕೆಗಳನ್ನು ನಡೆಸಿ, ದೂರದರ್ಶನದಲ್ಲಿ ಪ್ರಸಾದನ ಕಲಾವಿದ ಎಂಬ ಹುದ್ದೆಗೆ ಸೇರಿ, ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಸೇತೂರಾಂ ಅವರ ನಿರ್ದೇಶನದ ಹಲವಾರು ಧಾರವಾಹಿಗಳಿಗೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ, ಬಹು ಜನರ ಶೋತೃವಾಗಿದ್ದರು. 

ಸಮುದಾಯದಿಂದ ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ ಉಮೇಶರು, ನಂತರ ಸಿ ಜಿ ಕೆ ಆಪ್ತರಾಗಿ ಗುರುತಿಸಿಕೊಂಡು ರಂಗ ನಿರಂತರದಲ್ಲಿ ಕಾರ್ಯ ನಿರ್ವಹಿಸಿದರು. ಸಿಜಿಕೆ ರಂಗ ಸಂಪದದಲ್ಲಿ ನಿರ್ದೇಶನ ಮಾಡಿದಾಗ ಅಲ್ಲಿಗೂ ಹೋದರು. ರಂಗಭೂಮಿಯಲ್ಲಿ ಅನುಭವ ಇದೆ ಎಂದು ಸಮುದಾಯದಿಂದ ದೊರೆತ ಅನುಭವದ ಪತ್ರ, ಅವರನ್ನು ದೂರ ದರ್ಶನದ ಉದ್ಯೋಗಿಯನ್ನಾಗಿ ಮಾಡಿತು. ಆದರೆ ಅವರು ಕೇವಲ ದೂರದರ್ಶನದ ಉದ್ಯೋಗಿಯಾಗಿ ಉಳಿಯಲಿಲ್ಲ. ರಂಗಭೂಮಿಯಲ್ಲಿ  ಯಾವುದೇ ಪ್ರಮುಖ ಕ್ರಿಯಾಶೀಲ. ಕಾರ್ಯಕ್ರಮಗಳು, ನಡೆದರೂ ಅಲ್ಲಿ ಒಂದಲ್ಲ ಒಂದು ವಿಭಾಗದಲ್ಲಿ ಇರುತಿದ್ದರು.

ಅಪಾರ ಜನರ ಒಲವನ್ನು ಸಂಪಾದಿಸಿದ್ದ ಉಮೇಶರಿಗೆ, ಯಾವ ಕೆಲಸವೂ, ಸಂಪರ್ಕವೂ ಅಸಾಧ್ಯವಾದುದಾಗಿರಲಿಲ್ಲ.  ತಮ್ಮ  ಶಕ್ತಿ ಮೀರಿ ಇತರರಿಗೆ ರಂಗ ಮತ್ತು ಕ್ರಿಯಾಶೀಲ ಸಹಾಯ ಮಾಡಿದ ಉಮೇಶರು 2024ರ ಮಾರ್ಚ್ ಮೊದಲ ವಾರದಲ್ಲಿ ಈ ಲೋಕವನ್ನಗಲಿದರು. 

In Rememberance of Umesh, Great name in Theatre and Doordarshan 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ