ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಪರ್ಣಾ ನಾಗಶಯನ

 

ಅಪರ್ಣಾ ನಾಗಶಯನ


ಅಪರ್ಣಾ ನಾಗಶಯನ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕನ್ನಡ ನಾಡಿನ ಸಂಗೀತ ಕಲಾವಿದೆ ಮತ್ತು ಸಂಗೀತ ಗುರು.

ಜೂನ್ 15, ಅಪರ್ಣಾ ಅವರ ಜನ್ಮದಿನ.  ಇವರು ಜನಿಸಿದ್ದು ಬೆಂಗಳೂರಿನಲ್ಲಿ.  ಇವರದ್ದು ಮಹಾನ್ ಕಲಾವಿದರ ಕುಟುಂಬ.  ರಂಗಭೂಮಿಯ ಮಹಾನ್ ಕಲಾವಿದರಾದ ಅಭಿನಯ ಕೇಸರಿ ಗರುಡ ಸದಾಶಿವರಾಯರು ಇವರ ಅಜ್ಜ. ಹಿಂದುಸ್ತಾನಿ ಸಂಗೀತ ವಿದ್ವಾಂಸರಾದ ಪಂಡಿತ್ ದತ್ತಾತ್ರೇಯ ಗರುಡರು ಇವರ ತಂದೆ.  ತಾಯಿ ಗೌರಾಂಬ ಗರುಡ.  ಪತಿ ನಾಗಶಯನ ಅವರು ಇಂಜಿನಿಯರ್.  

ಅಪರ್ಣಾ ಬಾಲ್ಯದಿಂದಲೇ ಮನೆಯಲ್ಲೇ ಸಂಗೀತ ಕಲಿಕೆ ಆರಂಭಿಸಿದರು.  ಬಿ.ಕಾಮ್ ಪದವಿ ಪಡೆದರೂ ಸಿಡ್ನಿಗೆ ಬಂದ ನಂತರ ಇವರ ವೃತ್ತಿ ಮತ್ತು ಪ್ರವೃತ್ತಿ ಎರಡೂ ಸಂಗೀತವಾಯಿತು.

ಅಪರ್ಣಾ ನಾಗಶಯನ ಅವರು "ಭವಿಕ ಸಿಡ್ನಿ"
ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ಕಳೆದ 28 ವರ್ಷಗಳಿಂದ ಆಸಕ್ತರಿಗೆ ಹಿಂದುಸ್ತಾನಿ ಸಂಗೀತ, ತಬಲಾ ಹಾಗೂ ಹಾರ್ಮೋನಿಯಂ ತರಗತಿಗಳನ್ನು ನಡೆಸುತ್ತಿದ್ದಾರೆ. 

ಅಪರ್ಣಾ ಅವರು ನೃತ್ಯ ನಾಟಕಗಳು, ನೃತ್ಯರೂಪಕಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನ, ಗಾಯನ ನೀಡಿದ್ದಾರೆ.  SBS ಕನ್ನಡ ರೇಡಿಯೋಗಾಗಿ ಕನ್ನಡ ಕಾರ್ಯಕ್ರಮ ರಚನೆ ಹಾಗೂ ನಿರ್ದೇಶನ ಮಾಡಿದ್ದಾರೆ. ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ವಿವಿಧ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ. 

ಅಪರ್ಣಾ ಅವರಿಗೆ ತಮ್ಮ ತಂದೆಯವರು ಅದೇಶಿಸಿದಂತೆ ಅಧ್ಯಯನ - ಅಧ್ಯಾಪನಗಳು ಧ್ಯೇಯವಾಗಿದ್ದು, ಸಂಗೀತವನ್ನು ಎಲ್ಲೆಡೆ ಪಸರಿಸುವುದು ಮತ್ತು ಮುಂದಿನ ಪೀಳಿಗೆಗೆ ಕಾಯ್ದಿರಿಸುವುದು ಅವರ ಆಪ್ತ ಆಶಯವಾಗಿದೆ

ಪ್ರತಿಭಾನ್ವಿತ ಕಲಾವಿದೆ ಅಪರ್ಣಾ ನಾಗಶಯನ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 

Happy birthday Aparna Nagashayana 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ