ಒ. ವಿ. ವಿಜಯನ್
ಒ. ವಿ. ವಿಜಯನ್
ಒಟ್ಟುಪುಲಕ್ಕಲ್ ವೆಲುಕ್ಕುಟಿ ವಿಜಯನ್ ಮಹಾನ್ ಸಾಹಿತಿಗಳಾಗಿ, ಪತ್ರಕರ್ತರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ಪ್ರಸಿದ್ಧರಾಗಿದ್ದರು. ಆಧುನಿಕ ಮಲಯಾಳಂ ಸಾಹಿತ್ಯದಲ್ಲಿ ಅವರು ದೊಡ್ಡ ಹೆಸರು.
ವಿಜಯನ್ ಅವರು 1930ರ ಜುಲೈ 2ರಂದು ಪಾಲಕ್ಕಾಡ್‌ನಲ್ಲಿ ಜನಿಸಿದರು. ಪಾಲಕ್ಕಾಡ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಪದವಿ ಪಡೆದ ಅವರು ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವಿಜಯನ್ 1953 ರಲ್ಲಿ ತಮ್ಮ ಮೊದಲ ಸಣ್ಣ ಕಥೆಯಾದ "ಟೆಲ್ ಫಾದರ್ ಗೊನ್ಸಾಲ್ವ್ಸ್" ಅನ್ನು ಬರೆದರು. ಮೊದಲ ಕಾದಂಬರಿ 'ಖಾಸಕ್ಕಿಂತೆ ಇತಿಹಾಸಂ' (1969) ನಿಂದಲೇ ಪ್ರಖ್ಯಾತರಾದರು. ಇದು ಒಂದು ದೊಡ್ಡ ಸಾಹಿತ್ಯ ಕ್ರಾಂತಿಯನ್ನೇ ಹುಟ್ಟುಹಾಕಿತು. ವಿಜಯನ್ ಅವರು ಆರು ಕಾದಂಬರಿಗಳು, ಒಂಬತ್ತು ಸಣ್ಣ-ಕಥಾ ಸಂಕಲನಗಳು, ಒಂಬತ್ತು ಪ್ರಬಂಧ ಸಂಗ್ರಹಗಳು, ನೆನಪುಗಳು ಮತ್ತು ಅನುಭಾವ ಸಂಗ್ರಹಗಳನ್ನು ಪ್ರಕಟಿಸಿದ್ದರು. 'ಖಾಸಕ್ಕಿಂತೆ ಇತಿಹಾಸಂ' ಕ್ರೋಧಭರಿತ ಯುವಕನಾಗಿ ಅವರು ಅಭಿವ್ಯಕ್ತಿಸಿದ ಕೃತಿಯಾಗಿತ್ತು. ನಂತರದ ಕೃತಿಗಳಾದ, ಗುರುಸಾಗರಂ (ಅನುಗ್ರಹದ ಅನಂತತೆ), ಪ್ರವಾಚಕಂತೇ ವಝಿ (ಪ್ರವಾದಿಯ ಹಾದಿ) ಮತ್ತು ತಾಳಮುರಕಲ್ (ತಲೆಮಾರುಗಳು) ಅವರ ಪ್ರಬುದ್ಧ ಚಿಂತನೆಗಳತ್ತ ಬೆಳಕು ಚೆಲ್ಲುತ್ತವೆ.
ವಿಜಯನ್ ಅನೇಕ ಸಣ್ಣ ಕಥೆಗಳ ಸಂಪುಟಗಳನ್ನು ಪ್ರಕಟಿಸಿದ್ದರು. ಇದು ಕಾಮಿಕ್‌ನಿಂದ ತಾತ್ವಿಕತೆಯವರೆಗಿನ ವೈವಿಧ್ಯತೆಗಳನ್ನು ಕಾಣಿಸುತ್ತವೆ. ವಿಜಯನ್ ತಾವೇ ತಮ್ಮ ಸ್ವಂತ ಕೃತಿಗಳನ್ನು ಮಲಯಾಳಂನಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ದಿ ಸ್ಟೇಟ್ಸ್‌ಮನ್ ಮತ್ತು ದಿ ಹಿಂದೂ ಸೇರಿದಂತೆ ಪತ್ರಿಕೆಗಳಿಗೆ ಕೆಲಸ ಮಾಡಿದ್ದ ಅವರು ರಾಜಕೀಯ ವೀಕ್ಷಕರಾಗಿ, ವ್ಯಂಗ್ಯಚಿತ್ರಕಾರರಾಗಿ ಮತ್ತು ಸಂಪಾದಕರಾಗಿ ಸಹ ತಮ್ಮ ಬಹುಮುಖಿ ಪ್ರತಿಭೆಗಳನ್ನು ಅಭಿವ್ಯಕ್ತಿಸಿದ್ದರು.
ವಿಜಯನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಕೇರಳ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಭೂಷಣ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಒ. ವಿ. ವಿಜಯನ್ ಅವರು 2005ರ ಮಾರ್ಚ್ 30ರಂದು ನಿಧನರಾದರು.
On the birthday of Great writer, scholar, cartoonist O. V. Vijayan 🌷🙏🌷
ಕಾಮೆಂಟ್‌ಗಳು