ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಸುದೇವ ನಾಡಿಗ್

 ವಾಸುದೇವ ನಾಡಿಗ್ 

ವೃತ್ತಿಯಿಂದ ಶಿಕ್ಷಕರಾದ ವಾಸುದೇವ ನಾಡಿಗ್ ಕವಿಯಾಗಿ ಹೆಸರಾಗಿದ್ದಾರೆ. 

ಜುಲೈ 28, ವಾಸುದೇವ ನಾಡಿಗ್ ಅವರ ಜನ್ಮದಿನ.    ಶಿವಮೊಗ್ಗದಲ್ಲಿ ಓದಿದ ಇವರು ಎಂ.ಎ. ಮತ್ತು ಬಿ.ಎಡ್ ಪದವಿಗಳನ್ನು ಗಳಿಸಿದ್ದಾರೆ. 

ವಾಸುದೇವ ನಾಡಿಗ್ ಅವರು ಕೆಲವು ವರ್ಷ ದಾವಣಗೆರೆಯ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಬೋಧಿಸಿದ ನಂತರ ಜವಾಹರ ನವೋದಯ ಶಾಲೆಯಲ್ಲಿ ನಾಡಿನ ವಿವಿಧಡೆಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. 

ವಾಸುದೇವ ನಾಡಿಗ್ ಅವರು ವ್ಯಾಸಂಗದ ದಿನಗಳಲ್ಲೇ ಕೆ ಎಸ್ ನರಸಿಂಹ ಸ್ವಾಮಿ ಅವರ ಅಧ್ಯಕ್ಷತೆಯಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದರು. ಅಳ್ವಾಸ್ ಕನ್ನಡ ನುಡಿಸಿರಿ ಕವಿ ಸಮಯ, ಮೈಸೂರು ದಸರಾ ಸೇರಿದಂತೆ ಅನೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಭದ್ರಾವತಿ, ಚಿತ್ರದುರ್ಗ ಆಕಾಶವಾಣಿಗಳಲ್ಲಿ ಭಾಷಣ, ಚಿಂತನ, ಕಾವ್ಯ ವಾಚನಗಳಲ್ಲಿ ಭಾಗವಹಿದ್ದಾರೆ. ಇವರ ಕವಿತೆಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಕಂಗೊಳಿಸುತ್ತ ಬಂದಿವೆ. 

ವಾಸುದೇವ ನಾಡಿಗ್‌ ಬೆಳೆಯುವ ವಯಸ್ಸಿನಲ್ಲೇ 'ವೃಷಭಾಚಲದ ಕನಸು'  ಕೃತಿಗೆ ಬೇಂದ್ರೆ ಅಡಿಗ ಪ್ರಶಸ್ತಿ ಗಳಿಸಿದವರು. ಪ್ರಶಸ್ತಿ ಸಮಿತಿಯಲ್ಲಿದ್ದ ವೇಣುಗೋಪಾಲ ಸೊರಬರು "ವಾಸುದೇವ ನಾಡಿಗ್‌ ಅವರ ಸಾಮರ್ಥ್ಯ ಮುಖ್ಯವಾಗಿ ಪ್ರತಿಮೆಗಳನ್ನು ಸೃಷ್ಟಿಸುವಲ್ಲಿ ಕಂಡುಬರುತ್ತದೆ. ಯಾವುದೇ ವಸ್ತುವನ್ನು ಇವರು ಯಶಸ್ವಿಯಾಗಿ ದಡ ತಲುಪಿಸಬಲ್ಲರು ಎಂಬ ಭರವಸೆ ಹುಟ್ಟಿಸುತ್ತದೆ. ವಾಸುದೇವ್‌ರ ಬರಹ ಅಬ್ಬರ-ಆರ್ಭಟಗಳಿಲ್ಲದೆ, ಸಮತೋಲನವನ್ನು ಕಾಪಾಡಿಕೊಳ್ಳಲು ಉದ್ದಕ್ಕೂ ಯತ್ನಿಸುತ್ತದೆ. ಇಲ್ಲಿ ಘೋಷಣೆಗಳಿಗೆ ಅವಕಾಶವಿಲ್ಲ

ಆದ್ದರಿಂದಲೇ ಇವರ ಕವಿತೆಗಳು ಭರವಸೆ ಮೂಡಿಸುತ್ತವೆ, ಈ ಕವಿ ಬೆಳೆಯಬಲ್ಲರು

ಎಂಬ ಆಸಕ್ತಿ ಮೂಡಿಸುತ್ತವೆ" ಎಂದು ಗುರುತಿಸಿದ್ದರು.

ವಾಸುದೇವ ನಾಡಿಗ್‌ ಅವರ ಪ್ರಕಟಿತ ಕೃತಿಗಳಲ್ಲಿ ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ವಿರಕ್ತರ ಬಟ್ಟೆಗಳು, ನಿನ್ನ ಧ್ಯಾನದ ಹಣತೆ, ಅಲೆ ತಾಕಿದರೆ ದಡ, ಕಾಲಾಂತರಕ್ಕೊಂದು ಕನ್ನಡಿ, ಅವನ ಕರವಸ್ತ್ರ, ಒಂದು ಡೈರಿಯ ಪರಿಮಳ, ಬಂದರಿಗೆ ಬಂದ ಹಡಗು, ಈ ಜನಗಳು ಈ ನರಕ ಈ ಪುಳಕ (ಕಥಾಸಂಕಲನ), ಅನುಕ್ತ (ಈವರೆಗಿನ ಕವಿತೆಗಳು) ಮುಂತಾದವು ಸೇರಿವೆ.

ವಾಸುದೇವ ನಾಡಿಗ್‌ ಅವರಿಗೆ ವೃಷಭಾಚಲದ ಕನಸು ಕೃತಿಗೆ ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ, ಭವದ ಹಕ್ಕಿ ಕೃತಿಗೆ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಶ ಪ್ರಶಸ್ತಿ, ನಿನ್ನ ಧ್ಯಾನದ ಹಣತೆ ಕೃತಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರತಿಷ್ಟಾನದ ಕಡೆಂಗೋಡ್ಲು ಪ್ರಶಸ್ತಿ, ಅಲೆ ತಾಕಿದರೆ ದಡ‍ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಎಕ್ಕುಂಡಿ ಜನ್ಮ  ಶತಮಾನೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಕವಿ ವಾಸುದೇವ ನಾಡಿಗ್ ಅವರಿಗೆ ಹುಟ್ಟಿಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

ಸೇರಿದಂತೆ ಅನೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಭದ್ರಾವತಿ, ಚಿತ್ರದುರ್ಗ ಆಕಾಶವಾಣಿಗಳಲ್ಲಿ ಭಾಷಣ, ಚಿಂತನ, ಕಾವ್ಯ ವಾಚನಗಳಲ್ಲಿ ಭಾಗವಹಿದ್ದಾರೆ. ಇವರ ಕವಿತೆಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಕಂಗೊಳಿಸುತ್ತ ಬಂದಿವೆ. 

ವಾಸುದೇವ ನಾಡಿಗ್‌ ಬೆಳೆಯುವ ವಯಸ್ಸಿನಲ್ಲೇ 'ವೃಷಭಾಚಲದ ಕನಸು'  ಕೃತಿಗೆ ಬೇಂದ್ರೆ ಅಡಿಗ ಪ್ರಶಸ್ತಿ ಗಳಿಸಿದವರು. ಪ್ರಶಸ್ತಿ ಸಮಿತಿಯಲ್ಲಿದ್ದ ವೇಣುಗೋಪಾಲ ಸೊರಬರು "ವಾಸುದೇವ ನಾಡಿಗ್‌ ಅವರ ಸಾಮರ್ಥ್ಯ ಮುಖ್ಯವಾಗಿ ಪ್ರತಿಮೆಗಳನ್ನು ಸೃಷ್ಟಿಸುವಲ್ಲಿ ಕಂಡುಬರುತ್ತದೆ. ಯಾವುದೇ ವಸ್ತುವನ್ನು ಇವರು ಯಶಸ್ವಿಯಾಗಿ ದಡ ತಲುಪಿಸಬಲ್ಲರು ಎಂಬ ಭರವಸೆ ಹುಟ್ಟಿಸುತ್ತದೆ. ವಾಸುದೇವ್‌ರ ಬರಹ ಅಬ್ಬರ-ಆರ್ಭಟಗಳಿಲ್ಲದೆ, ಸಮತೋಲನವನ್ನು ಕಾಪಾಡಿಕೊಳ್ಳಲು ಉದ್ದಕ್ಕೂ ಯತ್ನಿಸುತ್ತದೆ. ಇಲ್ಲಿ ಘೋಷಣೆಗಳಿಗೆ ಅವಕಾಶವಿಲ್ಲ

ಆದ್ದರಿಂದಲೇ ಇವರ ಕವಿತೆಗಳು ಭರವಸೆ ಮೂಡಿಸುತ್ತವೆ, ಈ ಕವಿ ಬೆಳೆಯಬಲ್ಲರು

ಎಂಬ ಆಸಕ್ತಿ ಮೂಡಿಸುತ್ತವೆ" ಎಂದಿದ್ದಾರೆ.

ವಾಸುದೇವ ನಾಡಿಗ್‌ ಅವರ ಪ್ರಕಟಿತ ಕೃತಿಗಳಲ್ಲಿ ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ವಿರಕ್ತರ ಬಟ್ಟೆಗಳು, ನಿನ್ನ ಧ್ಯಾನದ ಹಣತೆ, ಅಲೆ ತಾಕಿದರೆ ದಡ, ಕಾಲಾಂತರಕ್ಕೊಂದು ಕನ್ನಡಿ, ಅವನ ಕರವಸ್ತ್ರ, ಒಂದು ಡೈರಿಯ ಪರಿಮಳ, ಬಂದರಿಗೆ ಬಂದ ಹಡಗು, ಈ ಜನಗಳು ಈ ನರಕ ಈ ಪುಳಕ (ಕಥಾಸಂಕಲನ), ಅನುಕ್ತ (ಈವರೆಗಿನ ಕವಿತೆಗಳು) ಮುಂತಾದವು ಸೇರಿವೆ.

ವಾಸುದೇವ ನಾಡಿಗ್‌ ಅವರಿಗೆ ವೃಷಭಾಚಲದ ಕನಸು ಕೃತಿಗೆ ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ, ಭವದ ಹಕ್ಕಿ ಕೃತಿಗೆ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಶ ಪ್ರಶಸ್ತಿ, ನಿನ್ನ ಧ್ಯಾನದ ಹಣತೆ ಕೃತಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರತಿಷ್ಟಾನದ ಕಡೆಂಗೋಡ್ಲು ಪ್ರಶಸ್ತಿ, ಅಲೆ ತಾಕಿದರೆ ದಡ‍ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಎಕ್ಕುಂಡಿ ಜನ್ಮ  ಶತಮಾನೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಕವಿ ವಾಸುದೇವ ನಾಡಿಗ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

Vasudev Nadig

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ