ಜಿ. ಟಿ. ರಾಘವೇಂದ್ರ
ಜಿ. ಟಿ. ರಾಘವೇಂದ್ರ
ಇಂದು ಹಿರಿಯರಾದ ಜಿ. ಟಿ. ರಾಘವೇಂದ್ರರ ಜನ್ಮದಿನ.
ರಾಘವೇಂದ್ರ ಅವರು ಮಂಗಳೂರಿನಲ್ಲಿ ಪಾಲಿಟೆಕ್ನಿಕ್ ಓದಿ, ಅಸ್ಸಾಮ್ನಲ್ಲಿ ಮಿಲಿಟರಿಯಲ್ಲಿ 5 ವರ್ಷ ಕೆಲಸಮಾಡಿದರು. ಆಮೇಲೆ ಅನಿವಾರ್ಯವಾಗಿ ಬಿಟ್ಟು ಬಂದು ಮಡಿಕೇರಿ ಯಲ್ಲಿ ತೋಟದ ಜವಾಬ್ದಾರಿಯನ್ನು ಹೊತ್ತರು . ಜೊತೆಜೊತೆಗೆ ಸಂಗೀತ, ಸಾಹಿತ್ಯ ,ಬರವಣಿಗೆ ಇತ್ಯಾದಿ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡರು.
ರಾಘವೇಂದ್ರರಿಗೆ ಕೃಷಿಯಲ್ಲಿ ಅಪಾರ ಆಸಕ್ತಿ. ಅವರು ತಮ್ಮ ಕೃಷಿಲೋಕವನ್ನು 'ಅಂಗೈ ಬ್ರಹ್ಮಾಂಡ ಕೃಷಿಕ್ಷೇತ್ರ' ಎನ್ನುತ್ತಾರೆ. ತಮ್ಮ ಈ ಬ್ರಹ್ಮಾಂಡದಲ್ಲಿ ಅವರ ಸಂಶೋಧನಾಪರ ಕೃಷಿ ಚಟುವಟಿಕೆಗಳು ಅಪರಿಮಿತ. ಕಾಫಿ, ಭತ್ತ, ತರಕಾರಿ ಹೀಗೆ ಅವರ ಅನೇಕ ಸಾಹಸಗಳನ್ನು ಅವರ ಅಂಕಣಗಳಲ್ಲಿ ಓದುವುದೆ ಚಂದ. ಈ ಹಿರಿಯ ವಯಸ್ಸಿನಲ್ಲೂ, ಜೀವನದಲ್ಲಿ ಎದುರಿಸಿದ ಹಲವು ತೊಂದರೆಗಳ ನಡುವೆಯೂ, ಅವರು ಎಂದೂ ಕೃಷಿಪ್ರೀತಿ ಕಳೆದುಕೊಂಡವರಲ್ಲ. ಈ ಹಿರಿಯ ವಯಸ್ಸಿನಲ್ಲೂ ಅವರದ್ದು ಅದೇ ನಲುಗದ ಉತ್ಸಾಹ.
ಈ ಹಿರಿಯರಿಗೆ ಪ್ರೀತಿ ತುಂಬಿ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
G. T. Raghavendra
ಕಾಮೆಂಟ್‌ಗಳು