ಭಾರತಿ ಸಿಂಗ್
ಭಾರತಿ ಸಿಂಗ್
ಕನ್ನಡತಿ ಭಾರತಿ ಸಿಂಗ್ ಅವರು ಸ-ಮುದ್ರಾ (SA-MUDRA FOUNDATION) ಎಂಬ ಸಮಾಜಸೇವಾ ಪ್ರತಿಷ್ಠಾನದ ಸ್ಥಾಪಕರೂ ಪ್ರಧಾನ ಅಧಿಕಾರಿಗಳೂ ಆಗಿದ್ದು ಸಮಾಜದಲ್ಲಿನ ಜನರ ಆರೋಗ್ಯಕರ ಮಾನಸಿಕ ಸ್ವಾಸ್ಥ್ಯ ನಿರ್ವಹಣೆಯಲ್ಲಿ ಅಪಾರ ಕೆಲಸ ಮಾಡುತ್ತ ಬಂದಿದ್ದಾರೆ.
ಆಗಸ್ಟ್ 3, ಭಾರತಿ ಸಿಂಗ್ ಅವರ ಜನ್ಮದಿನ. ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ, ಸೋಷಿಯಾಲಜಿ ಎಂ. ಎ., ಆಫೀಸ್ ಅಡ್ಮಿನಿಸ್ಟ್ರೇಷನ್ ಡಿಪ್ಲೋಮಾ, ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತ ಹಲವು ಅಧ್ಯಯನಗಳು, ಮಾನಸಿಕ ಸಲಹೆ ಕುರಿತ ಅನೇಕ ತರಬೇತಿಗಳು, ಸರ್ಕಾರೇತರ ಸಮಾಜ ಸೇವಾ ಸಂಸ್ಥೆಗಳ ನೇತೃತ್ವ ಅಭಿವೃದ್ಧಿ ಮುಂತಾದವು ಇವರ ವಿಶಾಲ ವ್ಯಾಪ್ತಿಯ ಶೈಕ್ಷಣಿಕ ಸಾಧನೆ ಮತ್ತು ತರಬೇತಿಗಳಲ್ಲಿ ಸೇರಿವೆ.
ಭಾರತಿ ಸಿಂಗ್ ಅವರ ಸೇವೆ ಸುದೀರ್ಘಕಾಲದವರೆಗೆ ಸಾಮಾಜಿಕ ವಲಯ, ಕೈಗಾರಿಕೆ, ಶೈಕ್ಷಣಿಕ, ಮತ್ತು ಮಾಧ್ಯಮ ಕ್ಷೇತ್ರಗಳಿಗೆ ಸಂದಿವೆ. ಯುವಕರು ಮತ್ತು ಪೋಷಕರ ಸಮಾಲೋಚನೆ, ವೃತ್ತಿಜೀವನ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ, ಸ್ಫೂರ್ತಿದಾಯಕ ಭಾಷಣ, ಸಕಾರಾತ್ಮಕ ಚಿಂತನೆ, ಮಂಜಾಗರೂಕತಾ ಮಾನಸಿಕ ಆರೋಗ್ಯ ನಿರ್ವಹಣೆ ಮತ್ತು ಆತ್ಮಹತ್ಯೆ ತಡೆಗಟ್ಟುವ ಆಂದೋಲನ ಮುಂತಾದ ಕ್ಷೇತ್ರಗಳಲ್ಲಿ ಅವರ ಕಾರ್ಯಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಫಲಪ್ರದವಾಗಿದ್ದು ಅವರಿಗೆ ಅನೇಕ ಗೌರವಗಳು ಸಂದಿವೆ.
ಈ ಎಲ್ಲವುಗಳ ಜೊತೆಗೆ ಭಾರತಿ ಸಿಂಗ್ ಅವರಿಗೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದೊಂದಿಗೂ ಆಪ್ತ ಒಡನಾಟವಿದೆ.
ಸದಾ ಕ್ರಿಯಾಶೀಲರಾದ ಭಾರತಿ ಸಿಂಗ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಬಹಾರೈಕೆಗಳು.
Happy birthday Bharathi Singh 🌷🙏🌷
ಕಾಮೆಂಟ್‌ಗಳು