ವಾಣಿಶ್ರೀ
ವಾಣಿಶ್ರೀ
ವಾಣಿಶ್ರೀ ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ಕಲಾವಿದೆ. ತೆಲುಗು, ತಮಿಳು, ಕನ್ನಡ ಚಲನಚಿತ್ರಗಳಲ್ಲದೆ ಕೆಲವೊಂದು ಹಿಂದೀ ಚಿತ್ರಗಳಲ್ಲಿ ನಟಿಸಿದ್ದರು.
ವಾಣಿಶ್ರೀ 1948ರ ಆಗಸ್ಟ್ 3ರಂದು ನೆಲ್ಲೂರಿನಲ್ಲಿ ಜನಿಸಿದರು. ಅವರ ಹುಟ್ಟು ಹೆಸರು ರತ್ನಕುಮಾರಿ.
ವಾಣಿಶ್ರೀ 1962ರ ತೆಲುಗಿನ 'ಭೀಷ್ಮ' ಮೂಲಕ ಪಾದಾರ್ಪಣೆ ಮಾಡಿದರು. ಕೆ. ಬಾಲಚಂದರ್ ಅವರ ಸುಖ ದುಃಖಾಲು ಚಲನಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಗಮನ ಸೆಳೆದರು. ಕೃಷ್ಣವೇಣಿ, ಪ್ರೇಮ್‍ನಗರ್, ದಸರಾ ಬುಲ್ಲೋಡು, ಆರಾಧನಾ, ಜೀವಿತ ಚಕ್ರಂ, ರಂಗುಲ ರತ್ನಂ, ಶ್ರೀ ಕೃಷ್ಣ ತುಲಾಭಾರಂ, ಭಕ್ತ ಕಣ್ಣಪ್ಪ, ಬೊಬ್ಬಿಲಿ ರಾಜ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದರು. ಕನ್ನಡ 'ಕಪ್ಪು ಬಿಳುಪು' ಚಿತ್ರದ ತೆಲುಗು ಅವತರಿಣಿಕೆ 'ಇದ್ದರು ಅಮ್ಮಾಯಿಲು', 'ಗಂಗಾ ಮಂಗಾ', 'ಜೀವನ ಜ್ಯೋತಿ' (1975), ಮತ್ತು 'ಚಿಲಿಪಿ ಕೃಷ್ಣುಡು' (1978) ಮುಂತಾದ ಚಿತ್ರಗಳಲ್ಲಿ ದ್ವಿಪಾತ್ರಗಳನ್ನು ನಿರ್ವಹಿಸಿದರು. ಶ್ಯಾಮ್ ಬೆನಗಲ್ ಅವರ ಏಕೈಕ ತೆಲುಗು ಚಿತ್ರ 'ಅನುಗ್ರಹಂ' ಅನ್ನು ನಿರ್ಮಿಸಿ ಸ್ಮಿತಾ ಪಾಟೀಲ್ ಅವರೊಡನೆ ನಟಿಸಿದ್ದರು.
ವಾಣಿಶ್ರೀ ತಮಿಳಿನಲ್ಲಿ ನಟ ಎಂ.ಜಿ.ಆರ್ ಅವರೊಂದಿಗೆ ಮೂರು ಚಿತ್ರಗಳಲ್ಲಿ ಮತ್ತು ಶಿವಾಜಿ ಗಣೇಶನ್ ಅವರೊಂದಿಗೆ ಹತ್ತು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
ವಾಣಿಶ್ರೀ ಅವರು ಕನ್ನಡದಲ್ಲಿ ವೀರ ಸಂಕಲ್ಪ, ಮುರಿಯದ ಮನೆ, ಮನೆ ಅಳಿಯ, ಸತ್ಯ ಹರಿಶ್ಚಂದ್ರ, ಪಾತಾಳ ಮೋಹಿನಿ, ಮಿಸ್ ಲೀಲಾವತಿ, ಮಹಾಸತಿ ಅನಸೂಯಾ, ಚಂದ್ರಹಾಸ, ಕಠಾರಿ ವೀರ, ಕಾಸಿದ್ರೆ ಕೈಲಾಸ,
ಗಂಡ ಮನೆ ಮಕ್ಕಳು ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.
1978ರಲ್ಲಿ ವಿವಾಹವಾದ ನಂತರ ಚಿತ್ರರಂಗ ತೊರೆದಿದ್ದ ವಾಣಿಶ್ರೀ ಅವರು 1989ರಿಂದ ಕೆಲಕಾಲ ಹಿರಿಯ ಪಾತ್ರಗಳಲ್ಲಿ ನಟಿಸಿದರು.
ವಾಣಿಶ್ರೀ ಅವರಿಗೆ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು, ನಂದಿ ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಜೀವಮಾನ ಸಾಧನೆಯ ಪ್ರಶಸ್ತಿಗಳು ಸಂದಿವೆ.
On the birth anniversary of senior actress Vanishree
ಕಾಮೆಂಟ್‌ಗಳು