ಭಾರತಿ ಬೆಟ್ಟದಪುರ
ಭಾರತಿ ಬೆಟ್ಟದಪುರ
ಆತ್ಮೀಯರಾದ ಭಾರತಿ ಬೆಟ್ಟದಪುರ ಅವರು ಸಾಹಿತ್ಯ, ಸಂಗೀತ, ಪ್ರವಾಸ ಮುಂತಾದವುಗಳ ಕುರಿತು ಅಪರಿಮಿತ ಪ್ರೇಮ ಉಳ್ಳವರು.
ಆಗಸ್ಟ್ 25 ಭಾರತಿ ಬೆಟ್ಟದಪುರ ಅವರ ಜನ್ಮದಿನ. ಅವರ ವಿವೀಧ ರೀತಿಯ ಬರಹಗಳು ಪತ್ರಿಕೆಗಳಲ್ಲಿ ಮೂಡಿವೆ. ಸುಗಮ ಸಂಗೀತ ತರಬೇತಿ ಪಡೆದು ಹಾಡುತ್ತಾರೆ.
ಬದುಕು, ಕುಟುಂಬ, ಸುತ್ತಲಿನ ಸಮಾಜ, ಜೀವನೋತ್ಸಾಹವುಳ್ಳ ಭಾರತಿ ಅವರ ಚಿಂತನೆಗಳು ವಿಶಿಷ್ಟ ರೀತಿಯದ್ದು. ಅವರದ್ದೊಂದು ಪುಟಾಣಿ ಬರಹ ಇಂತಿದೆ:
# ಸಾಹುಕಾರ
ಪ್ರತಿಷ್ಠಿತ ಬಟ್ಟೆ ಅಂಗಡಿಯಲ್ಲಿ ಸೀರೆ ಖರೀದಿಸಿದ ರಾಯರು , ಬಿಲ್ ಮೊತ್ತ 8050 ರ ಬದಲಾಗಿ 8000 ತೆಗೆದುಕೊಳ್ಳುವಂತೆ ವರ್ತಕನಲ್ಲಿ ವಿನಂತಿಸಿಕೊಂಡರು. "ಅಷ್ಟೊಂದು ದುಡ್ಡು ಕಡಿಮೆ ಮಾಡಲು ಸಾಧ್ಯವೇ ಇಲ್ಲ, ಅಷ್ಟೊಂದು ಕಮ್ಮಿ ಮಾಡಿದ್ರೆ ತುಂಬಾ ನಷ್ಟ ಆಗತ್ತೆ ಸರ್. ನಮ್ಮ ಬಟ್ಟೆಯ ಗುಣಮಟ್ಟ ತುಂಬಾ ಉತ್ಕೃಷ್ಟ ಸರ್ . ಬೇಕಾದ್ರೆ ನೀವು ಎಲ್ಲಾದ್ರೂ ಪರೀಕ್ಷೇ ಮಾಡಿಸಿ ಸರ್...ಎಂದು 50 ರೂಪಾಯಿಗೆ 50 ತರ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಅತಿ ವಿನಯದಿಂದ ಸಮಜಾಯಿಷಿ ಕೊಡುತ್ತಿದ್ದ. ಅವನ ಮಾತಿಂದ ಬೇಜಾರಾಗಿ, ಕೇಳಿದಷ್ಟು ದುಡ್ಡು ಕೊಟ್ಟು ಹೊರಬಂದ ರಾಯರು ಸೀದಾ ತರಕಾರಿ ಗಾಡಿಯ ಬಳಿ ಹೋದರು... ಎಲ್ಲಾ ತರಕಾರಿ ಬುಟ್ಟಿಗೆ ಹಾಕಿಸಿಕೊಂಡ ರಾಯರು ದುಡ್ಡು ಕೊಡಲು ಹೋದಾಗ 50 ರೂಪಾಯಿ ಕಮ್ಮಿ ಇರುವುದು ತಿಳಿಯಿತು.. ತಾಯಿ 50 ರೂಪಾಯಿ ಕಮ್ಮಿ ಇದೆ. ಒಂದೆರಡು ತರಕಾರಿ ಬುಟ್ಟಿಯಿಂದ ತೆಗೆದು ಬಿಡು ಎಂದರು.
"ಅಯ್ಯೋ ಬುಡಿ ಸಾಮಿ... ಮತ್ತೆ ಬಂದಾಗ ಕೊಟ್ರೆಯಾಯ್ತು. 50 ರೂಪಾಯಿ ನನಗೇನು ಹೊರೆಯೇ??...ಹೋಗ್ಬನ್ನಿ" ಅಂತ ಆಕೆ ಹೇಳಿ ಜೊತೆಗೆ ಕೈಯಲ್ಲಿದ್ದ ಒಂದು ಸೀಬೇಕಾಯನ್ನು ಬುಟ್ಟಿ ಗೆ ಹಾಕಿ "ತಿಂಕೋ ಹೋಗಿ" ಎಂದಳು.
"ಸಾಕು ಎನ್ನುವವ ಸಾಹುಕಾರನು, ಇನ್ನೂ ಬೇಕು ಎನ್ನುವನೆಂದು ಬಡವ ಭಿಕಾರಿ....ಶ್ರೀಮಂತ ನಾದರೇನು ಭಿಕ್ಷುಕನೆ ತಾನೇ"" ಸಿನೆಮಾ ಹಾಡು ಆಕೆಯ ಪುಟ್ಟ ರೇಡಿಯೋದಲ್ಲಿ ದೊಡ್ಡದಾಗಿ ಕೇಳಿಸುತ್ತಿತ್ತು.
---
ನನ್ನ ಬರಹಗಳನ್ನು ನಿರಂತರ ಬೆಂಬಲಿಸುತ್ತಿರುವ ಆತ್ಮೀಯರಾದ ಭಾರತಿ ಬೆಟ್ಟದಪುರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Bharti Bettadapura 🌷🙏🌷
ಕಾಮೆಂಟ್‌ಗಳು