ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೋಹನ್ ಕುಮಾರ್


 ಕೆ. ಎನ್. ಮೋಹನ್ ಕುಮಾರ್


ಕೆ. ಎನ್. ಮೋಹನ್ ಕುಮಾರ್ ರಂಗಭೂಮಿ, ಕಿರುತೆರೆ, ಸಿನಿಮಾ ಹಾಗೂ ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದವರು.

ಮೋಹನ್ ಕುಮಾರ್ 1966ರ ಆಗಸ್ಟ್ 17ರಂದು ಜನಿಸಿದರು.  ಇಂಜಿನಿಯರಿಂಗ್ ಪದವೀಧರರಾದ ಮೋಹನ್ ಕುಮಾರ್ ಅವರು ಪ್ರಕೃತಿ ಪ್ರಿಯರಾಗಿದ್ದು ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ ತಳೆದಿದ್ದರು. 

ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕ್ಷೇತ್ರಗಳತ್ತ  ಮೋಹನ್ ಕುಮಾರ್ ಅವರ  ಆಸಕ್ತ ಕಾರ್ಯಕ್ಷೇತ್ರ ವ್ಯಾಪಿಸಿತು. ಪತ್ರಿಕೋದ್ಯಮ ಮತ್ತು ಪುಸ್ತಕ ಪ್ರಕಾಶನದಲ್ಲೂ ಅವರ ಕ್ರಿಯಾಶೀಲ ಭಾಗವಹಿಕೆ ಇತ್ತು. ಪ್ರಕೃತಿ ಪ್ರಿಯರಾಗಿದ್ದ ಮೋಹನ್ ಅವರಿಗೆ ಕೃಷಿಯಲ್ಲೂ ಪ್ರೀತಿಯಿತ್ತು.  ಬೈಕ್ ಓಡಿಸುವುದು ಅವರಿಗೆ ಆಪ್ತವಾಗಿತ್ತು.

ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದ ಮೋಹನ್ 'ಮೈಸೂರು ಮಲ್ಲಿಗೆ' ಚಿತ್ರದ ನಾಯಕನ ಪಾತ್ರಧಾರಿಗೆ ಕಂಠದಾನ ಮಾಡಿದ್ದರು. ಬೆಂಗಳೂರು ದೂರದರ್ಶನದ 'ಜಾನಪದ' ಸರಣಿ ಕಾರ್ಯಕ್ರಮದಲ್ಲಿನ ನಿರೂಪಣೆಗೆ ಅವರಿಗೆ ಜನಪ್ರಿಯತೆ ದೊರಕಿತು.

ಮೋಹನ್ ಅವರು ತಮ್ಮ ಪತ್ನಿ ಪ್ರಸಿದ್ಧ ಕಲಾವಿದೆ ಮತ್ತು ಬರಹಗಾರ್ತಿ ವತ್ಸಲಾ ಮೋಹನ್ Vathsala Mohan ಅವರ ಕಾದಂಬರಿ 'ಸಜ್ಜಾದನಾ ಗಣೇಶ' ಕಾದಂಬರಿ ಆಧರಿಸಿ ನಿರ್ದೇಶಿಸಿದ ‘ಬೊಂಬೆಯಾಟ’ ಮಕ್ಕಳ ಚಿತ್ರವು ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಅಮೆರಿಕದ ನೇವಡ ಚಲನಚಿತ್ರೋತ್ಸವವೂ  ಸೇರಿದಂತೆ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೌರವಗಳನ್ನು ಗಳಿಸಿತು. 

ಅಪಾರ ಉತ್ಸಾಹಿ, ಕ್ರಿಯಾಶೀಲರಾಗಿದ್ದ ಇನ್ನೂ 56ರ ಹರೆಯದ ಮೋಹನ್ ಕುಮಾರ್ 2022ರ ಮೇ 23ರಂದು ಹೃದಯಾಘಾತದಿಂದ ನಿಧನರಾಗಿದ್ದು ಕನ್ನಡ ಕಲಾಲೋಕಕ್ಕೆ ಉಂಟಾದ ನಷ್ಟ. ಈ ಪ್ರತಿಭಾ ಚೇತನಕ್ಕೆ ನಮ್ಮ ಅನಂತ ನಮನ. 

On the birth anniversary of multitalented Mohan Kumar Kn 🌷🙏🌷




 
(

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ